Breaking News

ಆಸ್ತಿ ತೆರಿಗೆ ಏರಿಕೆ ವಿರುದ್ಧ ಹಿರಿಯ ನಾಗರಿಕರ ಆಕ್ರೋಶ

Spread the love

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಏರಿಕೆ ವಿಚಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಿಯಮ ಬಾಹಿರವಾಗಿ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಂದು ಹಿರಿಯ ನಾಗರಿಕರು ಹಾಗೂ ಮಾಜಿ ನಗರಸೇವಕರು ಮಹಾಪೌರರಿಗೆ ಮನವಿ ಸಲ್ಲಿಸಿದರು. ಶೇ. 3ರಷ್ಟು ತೆರಿಗೆ ಏರಿಕೆ ಜನತೆಗೆ ದೊಡ್ಡ ಹೊರೆಯಾಗಿದೆ ಎಂದರು.

ಇಂದು ಬೆಳಗಾವಿ ಮಹಾಪೌರ ಮಂಗೇಶ್ ಪವಾರ್ ಅವರಿಗೆ ಹಿರಿಯ ನಾಗರೀಕರು ಮನವಿಯನ್ನು ಸಲ್ಲಿಸಿದರು. ಈ ವೇಳೆ ಮಹಾಪೌರರೊಂದಿಗೆ ಆಸ್ತಿ ತೆರಿಗೆ ಹೆಚ್ಚಳದ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. (ಫ್ಲೋ)

ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದ ಮಾಜಿ ನಗರಸೇವಕ ನಾಗೇಶ್ ಸಾತೇರಿ ಅವರು, ಕಳೆದ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ತಿನ ಸಭೆಯಲ್ಲಿ ಅಶಿಸ್ತಿನ ಘಟನೆಗಳು ನಡೆದಿವೆ. ಸಭೆಯ ಮುಖ್ಯ ನಡಾವಳಿಯಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಹೆಚ್ಚಿಸುವ ವಿಷಯವೇ ಇರಲಿಲ್ಲ. ಏಕಾಏಕಿ ಕೌನ್ಸಿಲ್ ಸೆಕ್ರೆಟರಿ ಅವರು ಮಂಡಿಸಿದ್ದಾರೆ. ಆದರೇ ಠರಾವು ಮಂಡಿಸುವುದು ಮಹಾಪೌರರು ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ಮಾತ್ರ ಅಧಿಕಾರವಿರುತ್ತದೆ. ಪ್ರತಿ ವರ್ಷ ಶೇಕಡಾ 3 ರಷ್ಟು ತೆರಿಗೆ ಹೆಚ್ಚಿಸುವುದು ಮಹಾನಗರದ ಜನತೆಗೆ ದೊಡ್ಡ ಹೊರೆಯಾಗಿದೆ. ಅದನ್ನ ಮಹಾನಗರ ಪಾಲಿಕೆಯೂ ಸರಿಪಡಿಸಬೇಕು ಮತ್ತು ಮಹಾಪಾಲಿಕೆಯ ಆಡಳಿತದ ಹಕ್ಕುಗಳನ್ನು ನೌಕರರಿಗೆ ಒದಗಿಸಬಾರದು. ಲೋಕ ಅದಾಲತ್’ನಲ್ಲಿನ ಜನನ ಮರಣ ಪ್ರಮಾಣಪತ್ರಗಳ ಆದೇಶಗಳು ಉನ್ನತಮಟ್ಟದ್ದಾಗಿದ್ದು, ಅವುಗಳನ್ನು ಮಾನ್ಯತೆಗೆ ತೆಗೆದುಕೊಳ್ಳಬೇಕೆಂದರು. ಬೈಟ್

 

ಮಾಜಿ ನಗರಸೇವಕರಾದ ವಿನಾಯಕ ಗುಂಜಟಕರ, ನಿವೃತ್ತ ಸರ್ಕಾರಿ ನೌಕರರಾದ ಅಮರೋಳಕರ, ದೀಪಕ್ ಸಾವಂತ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ