Breaking News

ಜಿಲ್ಲೆ

ಶಾಸಕ ಸತೀಶ್ ರೆಡ್ಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು, ಸುಟ್ಟು ಹಾಕಿದ ಘಟನೆ ಬುಧವರಾ ತಡರಾತ್ರಿ ನಡೆದಿದೆ. ತಡರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸತೀಶ್ ರೆಡ್ಡಿ ಅವರ ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಸುಟ್ಟು ಹೋಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ​ಗಳನ್ನ ತಂದು ಬೆಂಕಿ …

Read More »

ಸುಮ್ಮನಿರುವುದೇ ದೌರ್ಬಲ್ಯವಲ್ಲ: ‘ಕಮಲ ಪಡೆಗೆ’ ಶಾಸಕ ಅಭಯ್ ಪಾಟೀಲ್ ಎಚ್ಚರಿಕೆ

ಬೆಳಗಾವಿ: ನನಗೂ ಎಲ್ಲ ದಂಡಯಾತ್ರೆ ಮಾಡಲು ಬರುತ್ತೆ, ಅದು ನನ್ನ ದೌರ್ಬಲ್ಯ ಅಲ್ಲ. ಆದರೆ ಆ ದಂಡಯಾತ್ರೆ ಮಾಡಲು ನನಗೆ ಇಚ್ಛೆ ಇಲ್ಲ. ಸುಮ್ಮನಿರುವುದೇ ದೌರ್ಬಲ್ಯವಲ್ಲ ಎಂದು ಶಾಸಕ ಅಭಯ್ ಪಾಟೀಲ್ ಪರೋಕ್ಷವಾಗಿ ‘ಕಮಲ ಪಡೆ’ಗೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, “ನನ್ನ ಕ್ಷೇತ್ರದಲ್ಲಿ ಇರುವಷ್ಟು ಕಾರ್ಯಕರ್ತರು ಬೇರೆ ಯಾರ ಕ್ಷೇತ್ರದಲ್ಲೂ ಇಲ್ಲ. ಆದರೆ ಯಾವೊಬ್ಬ ಕಾರ್ಯಕರ್ತರು ರಸ್ತೆಗಿಳಿದು ಹೇಳಿಕೆ ಕೊಟ್ಟಿಲ್ಲ. ಪಕ್ಷದ ಶಿಸ್ತಿದೆ. ಪಕ್ಷ …

Read More »

ಹುದಲಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದಾದ ಹಾನಿ ಪರಿಶೀಲಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ

    ಬೆಳಗಾವಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಹುದಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಧರನಟ್ಟಿ, ಬರಮ್ಯಾನಟ್ಟಿ, ಹಳ್ಳೂರ, ಕರುವಿನಕುಂಪಿ, ಕಾರಾವಿ ಬುಡ್ರ್ಯಾನೂರ ಹಾಗೂ ಹುಲ್ಯಾನೂರ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಹಾಗೂ ಪ್ರವಾಹದಿಂದಾದ ಹಾನಿಯನ್ನು ಪರಿಶೀಲಿಸಿದರು.   ಈ ಗ್ರಾಮಗಳಲ್ಲಿ ಮಳೆಯಿಂದಾಗಿ ಹಾನಿಗೀಡಾಗಿರುವ ಮನೆಗಳನ್ನು ಪರಿಶೀಲನೆ ಮಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಹೊಲ-ಗದ್ದೆಗಳು ಜಲಾವೃತವಾಗಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿ, ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ …

Read More »

2 ನಾಡ ಪಿಸ್ತೂಲು, 5 ಜೀವಂತ ಗುಂಡು ವಶ : ನಾಲ್ವರ ಬಂಧನ

ಬೆಂಗಳೂರು,ಆ.11-ಬಿಹಾರ ರಾಜ್ಯದಿಂದ ಅಕ್ರಮವಾಗಿ ನಾಡಪಿಸ್ತೂಲುಗಳನ್ನು ಖರೀದಿ ಮಾಡಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಅಶೋಕನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ಎರಡು ನಾಡಪಿಸ್ತೂಲು, 5 ಜೀವಂತ ಗುಂಡುಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಸೋನುಕುಮಾರ್(32), ಸುನೀಲ್‍ಕುಮಾರ್(32), ಇರ್ಫಾನ್(26) ಮತ್ತು ಆಂಧ್ರ ಪ್ರದೇಶದ ಮುರುಳಿ ವಿನೋದ್(47) ಬಂಧಿತ ಆರೋಪಿಗಳು. ಆಗಸ್ಟ್ 7ರಂದು ಹೊಸೂರು ರಸ್ತೆಯ ಸಿಮೆಂಟ್ರಿ ರಸ್ತೆಯಲ್ಲಿರುವ ಹಿಂದೂ ಸಿಮೆಂಟ್ರಿ ಬಳಿ ಮೂವರು ಯಾವುದೇ ಪರವಾನಗಿ ಇಲ್ಲದೆ ನಾಡಪಿಸ್ತೂಲಗಳನ್ನಿಟ್ಟುಕೊಂಡು …

Read More »

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು

ಗೋಕಾಕ : ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು ಎಂದು ಶ್ರೀ ಸಿದ್ದೇಶ್ವರ ದೇವಸ್ಥಾನ (ಟ್ರಸ್ಟ್) ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .   ಕೊರೋನಾ ಮಹಾಮಾರಿ ತಡೆಗಟ್ಟಲು ಸರಕಾರದ ನಿಯಮಗಳನ್ನು ಪಾಲಿಸುವ ಸಲುವಾಗಿ ಈ ಸಲ ರಥೋತ್ಸವವನ್ನು ರದ್ದು ಗೋಳಿಸಲಾಗಿದ್ದು, ರಥೋತ್ಸವ ದಿನದಂದು ರಥದ ಸ್ಥಳದಲ್ಲೇ ಸಾಯಂಕಾಲ 4 ಘಂಟೆಗೆ ಪೂಜೆ ಮಾಡಲಾಗುವುದು. ದೇವರ ದರ್ಶನಕ್ಕೆ ಬರುವ …

Read More »

ರಾಜ್ಯದಲ್ಲಿಂದು ಕೊರೋನಾ ಮತ್ತೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಿದ್ದು, ಇಂದು ಹೊಸದಾಗಿ 1826 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 33 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 1618 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 22,851 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.09 ರಷ್ಟು ಇದೆ. ಇವತ್ತು 1,67,237 ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿಂದು 377 ಜನರಿಗೆ ಸೋಂಕು ತಗುಲಿದೆ. 280 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 8290 …

Read More »

ಗ್ರಾಮದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ

ಘಟಪ್ರಭಾ: ಗ್ರಾಮದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಶ್ರೀ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ ಅಧ್ಯಕ್ಷ ಜ್ಯೋತ್ತೇಪ್ಪ ಬಂತಿ ಹೇಳಿದರು. ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಶ್ರೀ ಶಿವಶರಣ ಹರಳಯ್ಯ ಯುವಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಗೋಕಾಕ ಶ್ರೀ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ …

Read More »

ಹಳಿಯಾಳದಲ್ಲಿ ಫುಟ್ ಪಾತ್ ಮೇಲೆ ಇರುವ ಅಂಗಡಿಗಳ ತೆರವು ಕಾರ್ಯಾಚರಣೆ

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ವ್ಯಾಪಾರಿಗಳು ತಮ್ಮ ಮಳಿಗೆಗಳ ಎದುರು ರಸ್ತೆ ಹಾಗೂ ಗಟಾರ ಅತಿಕ್ರಮಿಸಿ ನಿರ್ಮಿಸಿದ್ದ ಗುಡುಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪೋಲಿಸ್ ಬಿಗಿ ಬಂದೋಬಸ್ತನಲ್ಲಿ ನಡೆಯಿತು. ಕೆಎಸ್ ಆರ್ ಟಿಸಿ ಕಂಪೌಂಡ್‍ಗೆ ತಾಗಿ ನಿರ್ಮಿಸಲಾದ ವ್ಯಾಪಾರ ಮಳಿಗೆಗಳನ್ನು ಪಡೆದ ವ್ಯಾಪಾರಸ್ಥರು ಎದುರಿನ ಚರಂಡಿ ಹಾಗೂ ಫುಟ್ ಪಾತ್ ಅತಿಕ್ರಮಿಸಿಕೊಂಡು ಗೂಡಂಗಡಿಗಳನ್ನು ಇಟ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದ್ದ ಬಗ್ಗೆ ಬಂದ …

Read More »

ದೂರದೃಷ್ಟಿ ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡಿ

ಬೆಂಗಳೂರು : ವಿದ್ಯುತ್ ಕ್ಷೇತ್ರದಲ್ಲಿ ಸಾವಲಂಬಿ ಆಗುವುದರ ಜೊತೆಗೆ ಸಮರ್ಥವಾಗಿ ವಿದ್ಯುತ್ ನಿರ್ವಹಣೆಯನ್ನು ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೂಚನೆ ನೀಡಿದರು.‌ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಇನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ …

Read More »

ಸರ್ಕಾರದ ಹೂ ನಿಷೇಧ ಆದೇಶಕ್ಕೆ ಹೂ ಮಾರಾಟಗಾರರ ಪ್ರತಿಭಟನೆ

ಬೆಂಗಳೂರು, – ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿ ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ನಾಳೆ (ಗುರುವಾರ) ಬೃಹತ್ ಪ್ರತಿಭಟನೆಯನ್ನು …

Read More »