Breaking News

ಜಿಲ್ಲೆ

ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿದೆ ರೆಸಿಡೆನ್ಸಿಯಲ್ ಟೌನ್ ಶಿಪ್: ಮುರುಗೇಶ್ ನಿರಾಣಿ

ಬೆಂಗಳೂರು: ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ (ರೆಸಿಡೆನ್ಸಿಯಲ್ ಟೌನ್‍ಶಿಪ್) ಗಳ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್ ನಿರಾಣಿ ಎಂದು ಹೇಳಿದ್ದಾರೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) …

Read More »

ಇನ್ನೂ ಬಾರದ ಜಾಮೀನು ಆದೇಶ ಪ್ರತಿ: ಇನ್ನೊಂದು ದಿನ ಜೈಲಲ್ಲೇ ವಿನಯ್ ಕುಲಕರ್ಣಿ ವಾಸ್ತವ್ಯ

ಬೆಳಗಾವಿ: ಜಿ.ಪಂ ಸದಸ್ಯನ ಕೊಲೆ‌ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಶುಕ್ರವಾರವೂ ಬಿಡುಗಡೆ ಭಾಗ್ಯ ಸಿಗಲಿಲ್ಲ. ಜಾಮೀನು ಸಿಕ್ಕರೂ ಆದೇಶ ಪ್ರತಿ ಬಾರದ ಕಾರಣ ಇನ್ನೊಂದು ದಿನ‌ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಸುಪ್ರೀಂ ಕೋರ್ಟ್ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ವಿನಯ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿದ್ದರೂ ಇನ್ನೊಂದು ದಿನ ಜೈಲಿನಲ್ಲಿ ಉಳಿಯಬೇಕಾಗಿದೆ.‌ ವರಮಹಾಲಕ್ಷ್ಮೀ ಹಬ್ಬದಂದು ಶುಕ್ರವಾರ ಬಿಡುಗಡೆ ಆಗಲಿಲ್ಲ. ಹಿಂಡಲಗಾ ಜೈಲಿನಿಂದ ಬಿಡುಗಡೆ …

Read More »

ಬೆಂಗಳೂರು: 18 ಕುಖ್ಯಾತ ರೌಡಿಗಳ ಸ್ಥಳಾಂತರ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 18 ರೌಡಿಗಳನ್ನು ರಾಜ್ಯದ ವಿವಿಧ ಜಿಲ್ಲಾಕೇಂದ್ರಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ವಿಲ್ಸನ್ ಗಾರ್ಡನ್ ನಾಗರಾಜ್, ಶಿವ, ಜಾರ್ಜ್ ಮೈಕಲ್, ಪ್ರದೀಪ್, ಬಾಂಬೆ ಸಲೀಂ ಸೇರಿ ಒಟ್ಟು18 ಜನ ರೌಡಿಗಳನ್ನು ಸ್ಥಳಾಂತರಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿಗಳು, ಜೈಲಿನಲ್ಲಿದ್ದುಕೊಂಡೆ ತಮ್ಮ ಸಹಚರರ ಮೂಲಕ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸುವ ಯತ್ನ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ …

Read More »

ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಜಾನ್ಸ್‌ನ್ ಅಂಡ್ ಜಾನ್ಸ್‌ನ್ ನಿಂದ ಮನವಿ

ನವದೆಹಲಿ,ಆ.20- ಕೊರೊನಾ ವಿರುದ್ಧ ಹೋರಾಟದ ಭ್ರಹ್ಮಾಸ್ತ್ರವಾಗಿರುವ ಲಸಿಕೆ ಅವಿಷ್ಕಾರಗಳು ದಿನೇ ದಿನೇ ಪ್ರಗತಿ ಸ್ವರೂಪದಲ್ಲಿದ್ದು, ಹೊಸದಾಗಿ ಜಾನ್ಸನ್ ಅಂಡ್ ಜಾನ್ಸ್‍ನ್ ಸಂಸ್ಥೆ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ)ಗೆ ಅರ್ಜಿ ಸಲ್ಲಿಸಿದ್ದು, ಪ್ರಾಯೋಗಿಗ ಪರೀಕ್ಷೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ದಾದರೆ ಜಾನ್ಸನ್ ಅಂಡ್ ಜಾನ್ಸನ್ ಮಕ್ಕಳಿಗೆ …

Read More »

ಬೆಳಗಾವಿ, ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಆದರು ಕಳೆದ 11 ವರ್ಷಗಳಿಂದ ಮೊಹರಂ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.

ಬೆಳಗಾವಿ, ಆಗಸ್ಟ್ 20: ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಆದರು ಕಳೆದ 11 ವರ್ಷಗಳಿಂದ ಮೊಹರಂ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹ ಧಾರ್ಮಿಕ ಸಾಮರಸ್ಯ ಕಂಡುಬಂದಿದ್ದು, ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ. ಇಲ್ಲಿ ಧಾರ್ಮಿಕ ಸಾಮರಸ್ಯದ ವಿಶಿಷ್ಟತೆಯನ್ನು ಗುರುತಿಸಬಹುದು. ಇಲ್ಲಿ ಹಿಂದೂ ಕುಟುಂಬಗಳು ನಿಧಿ ಸಂಗ್ರಹಿಸುವ ಮೂಲಕ 11 ವರ್ಷಗಳ ಹಿಂದೆ “ಫಕೀರ್ ಸ್ವಾಮಿ’ ದರ್ಗಾವನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ಹರ್ಲಾಪುರ ಗ್ರಾಮಸ್ಥರು ಹೊಸ ಇಸ್ಲಾಮಿಕ್ ವರ್ಷವನ್ನು …

Read More »

ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ: ಜನತೆಯಲ್ಲಿ ಮನವಿ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕೋವಿಡ್ 19 ಸೋಂಕು ನಿಯಂತ್ರಣದಲ್ಲಿದೆ. ಮುಂದೆಯೂ ಕೋವಿಡ್ ನಿಯಂತ್ರಣಕ್ಕೆ ಜನ ಸಹಕರಿಸಬೇಕು. ಮಾರುಕಟ್ಟೆಗಳಲ್ಲಿ ಜನಸಂದಣಿ ಆಗದಂತೆ ಜನರು ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹಬ್ಬದ ಸಂಭ್ರಮದಲ್ಲಿ ಜನತೆ ಮೈಮರೆಯಬೇಡಿ. ಕೋವಿಡ್ ನಿಯಮಗಳನ್ನು ಪಾಲಿಸಿ. ಜನ ಸೇರುವುದು ಬೇಡ ಎಂದರು. ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದರು. ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 36,571 …

Read More »

ಗಡಿ ಕಣ್ಗಾವಲು ವಿಸ್ತರಿಸಿ ಸರಕಾರ ಆದೇಶ

ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಪ್ರದೇಶಗಳಲ್ಲಿ ಹಾಕಲಾಗಿರುವ ಕಣ್ಗಾವಲನ್ನು ಆಗಸ್ಟ್ 30ರ ವರೆಗೂ ವಿಸ್ತರಿಸಿದ ಸರಕಾರ ಆದೇಶ ಹೊರಡಿಸಿದೆ.   ಕರ್ನಾಟಕ -ಮಹಾರಾಷ್ಟ್ರ, ಕರ್ನಾಟಕ – ಕೇರಳ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಹಾಕಿ ಈ ಹಿಂದೆ ಜುಲೈ 3ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಈ ಆದೇಶವನ್ನು ಆಗಸ್ಟ್ 30ರ ವರೆಗೆ ವಿಸ್ತರಿಸಲಾಗಿದೆ.

Read More »

ವರಮಹಾಲಕ್ಷ್ಮೀ ವ್ರತ : ಆಚರಣೆ, ಹುಟ್ಟಿನ ಕಥೆ ನಿಮಗೆ ಗೊತ್ತಾ..?

ಈ ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರದಂದು ಅಂದರೆ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸುವುದು ರೂಢಿಯಾದರೂ ಹಿಂದೂಗಳ ಮನೆಯಲ್ಲಿ ಪ್ರತಿ ದಿನವೂ ಹೊಸ್ತಿಲು ಪೂಜೆಯನ್ನು ಮಾಡುವ ಮೂಲಕ ಲಕ್ಷ್ಮಿಯನ್ನು ಪೂಜಿಸುತ್ತಾರೆ.   ಮಹಾಲಕ್ಷ್ಮೀ ಅಂದರೆ ಶ್ರೀಮನ್ನಾರಾಯಣನ ಮಡದಿ. ತನ್ನನ್ನು ಪೂಜಿಸಿದವರಿಗೆ ಬೇಕಾದ ವರಗಳನ್ನು ನೀಡುವವಳೇ ವರಮಹಾಲಕ್ಷ್ಮೀ ಎಂದುಕೊಳ್ಳಬಹುದು. ‘ವರ’ ಅಂದರೆ ಶ್ರೇಷ್ಠ ಅಂತಲೂ ಅರ್ಥವಿದೆ. ಆದ್ದರಿಂದ ವರಮಹಾಲಕ್ಷ್ಮೀ ಅಂದರೆ ಶ್ರೇಷ್ಠಳಾದ ಮಹಲಾಕ್ಷ್ಮೀ ಎಂದೂ ಅರ್ಥವಾಗುತ್ತದೆ. ಇಂತಹ ಮಹಾಲಕ್ಷ್ಮಿಯು …

Read More »

ಹಬ್ಬಕ್ಕೆ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸಾರಿಗೆ ನೌಕರರು

ಬೆಂಗಳೂರು: ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಜನ ಸಂಭ್ರಮ ಸಡಗರದಿಂದ ಸಜ್ಜಾಗುತ್ತಿದ್ದರೆ, ಈ ಹೊತ್ತಿನಲ್ಲಿ ಸಾರಿಗೆ ನಿಗಮಗಳ ನೌಕರರು ವೇತನ ಇಲ್ಲದೆ ಹಬ್ಬ ಹೇಗಪ್ಪಾ ಮಾಡೋದು ಎಂಬ ಚಿಂತೆಯಲ್ಲಿದ್ದಾರೆ. ಕೊರೋನಾದಿಂದ ತೀವ್ರ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆಗಸ್ಟ್‌ ಅರ್ಧ ತಿಂಗಳು ಮುಗಿದರೂ ನೌಕರರಿಗೆ ಜುಲೈ ತಿಂಗಳ ವೇತನ ಬಿಡುಗಡೆ ಮಾಡಿಲ್ಲ. ಪರಿಣಾಮ 4 ಸಾರಿಗೆ ನಿಗಮಗಳಿಂದ 1 ಲಕ್ಷ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಂಬಳ ಇಲ್ಲದೆ …

Read More »

ಹಿಂದೂ ದೇವತೆಗಳಿಗೆ ಆಕ್ಷೇಪಾರ್ಹ ಪದ ಬಳಕೆ: ಸಚಿವ ನಿರಾಣಿ ಮೇಲೆ FIR ಸಾಧ್ಯತೆ

ಬೆಂಗಳೂರು: ಹಿಂದೂ ದೇವತೆಗಳಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್. ಆರ್.ನಿರಾಣಿ ಮೇಲೆ ಇಂದು ಕೊಡಿಗೇಹಳ್ಳಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸುವ ಸಾಧ್ಯತೆಗಳಿವೆ. ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿ, ಸೆಪ್ಟೆಂಬರ್ 13 ರೊಳಗೆ ತನಿಖಾ ವರದಿ ಸಲ್ಲಿಸಲು ಸೂಚನೆ ನೀಡಿತ್ತು. …

Read More »