Breaking News

ಜಿಲ್ಲೆ

ಯಮಕನಮರಡಿ: ಜಲಜೀವನ್ ಮಿಷನ್ ಅಡಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸತೀಶ ಜಾರಕಿಹೊಳಿ

    ಯಮಕನಮರಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಸತೀಶ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಇಂದು ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದರು.   ಶಾಸಕ ಸತೀಶ ಅವರು ಜಲಜೀವನ ಮಿಷನ್ ಯೋಜನೆಯಡಿ ಬಸ್ಸಾಪೂರ ಗ್ರಾಮದಲ್ಲಿ 1.12 ಕೋಟಿ ರೂ. ವೆಚ್ಚದ ಕಾಮಗಾರಿ, ಯಲ್ಲಾಪುರ ಗ್ರಾಮದಲ್ಲಿ 18.18 ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ಹೊನಗಾದಲ್ಲಿ 3.69 …

Read More »

ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಯೇ ಕಾಂಗ್ರೆಸ್ ಧ್ಯೇಯ; ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ

    ಬೆಳಗಾವಿ: ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಪರ ಇಂದು (ಶನಿವಾರ) ಸಂಜೆ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.   ಬೆಳಗಾವಿ ಕಾಂಗ್ರೆಸ್ ಚುನಾವಣಾ ವೀಕ್ಷಕರಾದ ಗುಜರಾತ್ ರಾಜ್ಯಸಭಾ ಸದಸ್ಯೆ ಅಮೀ ಯಜನಿಕ್ , ಮಹಾರಾಷ್ಟ್ರ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸತ್ಯಜೀತ್ ಪಾಂಬೆ ಪಾಟೀಲ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ …

Read More »

ಮಹದಾಯಿ ಹಾಗೂ ಮೇಕೆದಾಟು ಯೋಜನೆ ಶೀಘ್ರದಲ್ಲಿ ಆರಂಭ: ಸಿಎಂ ಬೊಮ್ಮಾಯಿ

ಹಾವೇರಿ: ಮಹದಾಯಿ ಹಾಗೂ ಮೇಕೆದಾಟು ಯೋಜನೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕ್ರಿಯೆ ಕುರಿತು ದೆಹಲಿಯಲ್ಲಿ ಚರ್ಚೆ ಮಾಡಿ ಚಾಲನೆ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಿರೇಕೇರೂರಿನ ಬಸರಿಹಳ್ಳಿ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪರ್ ಕೃಷ್ಣಾ,ಮಹದಾಯಿ, ಮೇಕೆದಾಟು ಯೋಜನೆ ಪ್ರಕ್ರಿಯೆಗಳನ್ನ ದೆಹಲಿಗೆ ಹೋಗಿ ಕಾನೂನು ತಜ್ಞರ ಜೊತೆ ಚರ್ಚಿಸಲಾಗುತ್ತೆ. ಆ ಯೋಜನೆಯನ್ನು ನೋಟಿಪಿಕೇಷನ್ ಮಾಡುವುದಕ್ಕೆ ತೀವ್ರಗತಿಯಲ್ಲಿ ಜಾರಿ ಮಾಡುತ್ತೇವೆ. ಸುಪ್ರೀಂ ಕೋರ್ಟ್ …

Read More »

ಸಾಲಗಾರರ ‌ಕಾಟಕ್ಕೆ‌ ಬೇಸತ್ತು‌, ಫೇಸ್ಬುಕ್ ಲೈವ್ ನಲ್ಲಿಯೇ‌ ರೈತನೋರ್ವ ಕೀಟನಾಶಕ ಸೇವಿಸಿ‌ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಸಾಲಗಾರರ ‌ಕಾಟಕ್ಕೆ‌ ಬೇಸತ್ತು‌, ಫೇಸ್ಬುಕ್ ಲೈವ್ ನಲ್ಲಿಯೇ‌ ರೈತನೋರ್ವ ಕೀಟನಾಶಕ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ‌ ಘಟನೆ ನಿನ್ನೆ ಸಂಜೆ ನಡೆದಿದೆ. ಗೋಕಾಕ ತಾಲ್ಲೂಕು ಮಕ್ಕಳಗೇರಿ ಗ್ರಾಮದ‌ ಲಕ್ಷ್ಮಣ ಈಳಗೇರ ಎಂಬಾತನೇ ಆತ್ಮಹತ್ಯೆಗೆ ‌ಯತ್ನಿಸಿದ ರೈತ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಗೋಕಾಕ‌ ತಾಲೂಕು ಆಸ್ಪತ್ರೆಯಲ್ಲಿ‌ ದಾಖಲಿಸಲಾಗಿದೆ. ರೈತ ಮಾಡಿರುವ ಫೇಸ್ಬುಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸಂತ್ರಸ್ತ ರೈತ ವಿಷಪ್ರಾಷಣ ಮಾಡುವ ಮುಂಚೆ‌ ತನ್ನ …

Read More »

ಅನ್ನದಾನ ಮಹಾ ದಾನ ಈ ವಾರ ಮಮದಾಪೂರ ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ನಮ್ಮ ಕಾರ್ಯಕ್ರಮ..

ಗೋಕಾಕ: ಪ್ರತಿ ಶನಿವಾರ ದಂತೆ ಈ ಶನಿವಾರ ಕೂಡ ನಮ್ಮ ಗೋಕಾಕ ಸಾಹುಕಾರ ರಾದ ಶ್ರೀ ಸಂತೋಷ್ ಜಾರಕಿಹೊಳಿ ಅವರ ತಂಡ ಇವತ್ತು ಮತ್ತೊಂದು ಹಳ್ಳಿಗೆ ಹೋಗಿ ಅನ್ನ ಸಂತರ್ಪಣೆ ಕಾರ್ಯ ಕ್ರಮ ನಡೆಸಿದೆ.   ಇಂದು ತಾಲೂಕಿನ ಮಮ ದಾಪೂರ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡಿದಿದ್ದು ಎಲ್ಲರೂ ಮತ್ತೆ ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು..   ಈ ಶನಿವಾರ ಮಾಮದಾಪುರ ಗ್ರಾಮದ ಹನುಮನ ದೇವಸ್ಥಾನ ದಲ್ಲಿ ಈ …

Read More »

ಹುದಲಿ ಗ್ರಾಮದ ಮನೆಯೊಂದರಲ್ಲಿ ಮಟ್ಕಾ ದಾಳಿ ಬೆಳಗಾವಿ ಪೊಲೀಸ 30 ಜನ ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ – ಇಲ್ಲಿಯ ಸಿಇಎನ್ ಪೊಲೀಸ್ ಇನಸ್ಪೆಕ್ಟರ್ ಮತ್ತು ಮಾರಿಹಾಳ ಪೊಲೀಸ್ ಇನಸ್ಪೆಕ್ಟರ್ ಜಂಟಿಯಾಗಿ ಹುದಲಿ ಗ್ರಾಮದ ಮನೆಯೊಂದರಲ್ಲಿ ಮಟ್ಕಾ ದಾಳಿ ನಡೆಸಿದ್ದಾರೆ.30 ಜನರನ್ನು ಬಂಧಿಸಲಾಗಿದ್ದು, 1,00,870 ರೂ ಗಳನ್ನು ಮತ್ತು 15 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.  

Read More »

ಹಂಗಾಮಿ‌ ಮುಖ್ಯ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ ಮಾಡಲಾಗಿದೆ. ಹಂಗಾಮಿ ಸಿಜೆ ನೇಮಿಸಿ ರಾಷ್ಟ್ರಪತಿಗಳಿಂದ ಆದೇಶ ಹೊರಡಿಸಲಾಗಿದೆ.

ಬೆಂಗಳೂರು: ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ (Supreme Court Chief Justice) ಒಕಾ‌ ನೇಮಕ ಹಿನ್ನೆಲೆ, ಕರ್ನಾಟಕ ಹೈಕೋರ್ಟ್​ಗೆ (Karnataka High Court) ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ ಮಾಡಲಾಗಿದೆ. ಹಂಗಾಮಿ‌ ಮುಖ್ಯ ನ್ಯಾಯಮೂರ್ತಿ ಆಗಿ ಸತೀಶ್ ಚಂದ್ರಶರ್ಮಾ ನೇಮಕ ಮಾಡಲಾಗಿದೆ. ಹಂಗಾಮಿ ಸಿಜೆ ನೇಮಿಸಿ ರಾಷ್ಟ್ರಪತಿಗಳಿಂದ ಆದೇಶ ಹೊರಡಿಸಲಾಗಿದೆ. ತೆಲಂಗಾಣ, ಗುಜರಾತ್, ಸಿಕ್ಕಿಂ ಹಾಗೂ ಕರ್ನಾಟಕಕ್ಕೆ ಹಂಗಾಮಿ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಶುಕ್ರವಾರ (ಆಗಸ್ಟ್ 27) ನೇಂಇಸಿ ಆದೇಶ ಹೊರಡಿಸಿದ್ದಾರೆ. ಈ …

Read More »

ರಾಜ್ಯದಾದ್ಯಂತ ಸಂಚರಿಸಲು ಕೋಟಿ ರೂಪಾಯಿಯ ಕಾರು ಖರೀದಿಸಿದ ಬಿಎಸ್‌ವೈ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೊಸ ಟೊಯೊಟಾ ವೆಲ್‌ಫೈರ್‌ ಕಾರನ್ನು ಖರೀದಿ ಮಾಡಿದ್ದು, ತೆರಿಗೆ ಸೇರಿ ಇದರ ಮೌಲ್ಯ ₹1 ಕೋಟಿ ಎಂದು ಮೂಲಗಳು ಹೇಳಿವೆ. ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಾರು ಬಳಸುತ್ತಿದ್ದರು. ಈಗ ಹೆಚ್ಚು ದೂರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಈ ಕಾರು ಖರೀದಿ ಮಾಡಿದ್ದಾರೆ. ಇದರ ಮೂಲ ಬೆಲೆ ₹87 ಲಕ್ಷ. ಈಗಾಗಲೇ ನೋಂದಣಿ ಮಾಡಿಸಿದ್ದು, ಶುಕ್ರವಾರ ಶಿವಮೊಗ್ಗಕ್ಕೆ ಇದೇ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ. ಹಿರಿಯ ಸಚಿವರೊಬ್ಬರ ಬಳಿ …

Read More »

ಪೊಲೀಸರಿಗೆ ಸಿಎಂ ಎಚ್ಚರಿಕೆ

ಬೆಂಗಳೂರು,ಆ.27- ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೈಸೂರು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಸುದ್ದಿಯಾಗುತ್ತಿದ್ದು, ತಪ್ಪಿತಸ್ಥ ಆರೋಪಿಗಳನ್ನು ತಕ್ಷಣವೇ ಬಂಧಿಸದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳ ಕಾರ್ಯ ವೈಖರಿಗೆ ಸಿಎಂ ತರಾಟೆ …

Read More »

ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

ಬೆಂಗಳೂರು, ಆ.27- ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 530 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ವೃತ್ತಿಪರ ಕೋರ್ಸ್‍ಗಳು ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯಲಿ ರುವ ಈ ಪರೀಕ್ಷೆಗೆ ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ನಾಳೆ ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಪರೀಕ್ಷೆ …

Read More »