Breaking News

ಜಿಲ್ಲೆ

ಪುರಾತನ ಹಿಂದೂ ದೇವಾಲಯಗಳ ತೆರವು; ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಮೈಸೂರಿನಲ್ಲಿ ಪುರಾತನ ಹಿಂದೂ ದೇವಾಲಯಗಳನ್ನು ತೆರವುಗೊಳಿಸಲಾಗಿದ್ದು, ಈ ವಿಚಾರವಾಗಿ ಕಿಡಿಕಾರಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದೂ ಭಾವನೆಗಳ ವಿರುದ್ಧದ ಕೃತ್ಯಕ್ಕೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ದೇವಾಲಯಗಳನ್ನು ಕೆಡವಿದ್ದು ಖಂಡನೀಯ. ಇದು ಹಿಂದೂ ಭಾವನೆಗಳಿಗೆ ನೋವುಂಟುಮಾಡಿದೆ. ಇದಕ್ಕೆ ಸರ್ಕಾರವೇ ಹೊಣೆ. ತೆರವುಗೊಳಿಸಿದ ದೇವಾಲಯವನ್ನು ಪುನರ್ ನಿರ್ಮಾಣಕ್ಕೆ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ನಂಜನಗೂಡಿನ …

Read More »

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು: ಮರಾಠಿಗರನ್ನ ಖುಷಿ ಪಡಿಸಲ ಬಿಜೆಪಿ ಮಾಸ್ಟರ್​ ಪ್ಲ್ಯಾನ್​!

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ಸೂತ್ರ ಸಿದ್ಧಪಡಿಸಿರುವ ಬಿಜೆಪಿ, ಮರಾಠ ಸಮುದಾಯವನ್ನು ಖುಷಿ ಪಡಿಸಲು ಪ್ಲ್ಯಾನ್ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಯೋಜನೆ ರೂಪಿಸಿರುವ ಬಿಜೆಪಿ ನಾಯಕರು, ಮರಾಠಿ ಭಾಷಿಕರಿಗೇ ಮೇಯರ್ ಹುದ್ದೆ ನೀಡಲು ಚಿಂತನೆ ನಡೆಸಿದೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಭಾಷಿಕರು ಎಂಇಎಸ್ ಬದಲು ಬಿಜೆಪಿಗೆ ಜೈ ಎನ್ನುವ ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ರಾಜಕೀಯ ಮಾಡುತ್ತಿದ್ದ …

Read More »

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ

ಬೆಳಗಾವಿ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಹುಕ್ಕೇರಿ ಹಿರೇಮಠ ಪ್ರದಾನ ಮಾಡುವ ವೀರಭದ್ರೇಶ್ವರ ಪ್ರಶಸ್ತಿ ಇದಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 14ರಂದು ವೀರಭದ್ರೇಶ್ವರ ಜಯಂತಿ ಇದೆ. ವೀರಭದ್ರೇಶ್ವರ ಜಯಂತಿಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಭಾದ್ರಪದ ಮಾಸ ಮೊದಲ ಮಂಗಳವಾರ ವೀರಭದ್ರೇಶ್ವರ ಜಯಂತಿ ಮಾಡಬೇಕೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಆದರೆ …

Read More »

ವಿಧಾನ ಪರಿಷತ್ ಸಭಾ ನಾಯಕರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಮ ನಿರ್ದೇಶನ

ಬೆಂಗಳೂರು: ವಿಧಾನ ಪರಿಷತ್ ಸಭಾ ನಾಯಕರಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ ಸಭಾಪತಿಗೆ ಬಸವರಾಜ ಹೊರಟ್ಟಿ ಅವರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಜಾತಿಗಣತಿ ವರದಿ ಬಿಡುಗಡೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸಿದ್ಧವಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಾತಿಗಣತಿ ವರದಿಗೆ 170 ಕೋಟಿ ರೂಪಾಯಿ ಖರ್ಚಾಗಿದ್ದು, …

Read More »

ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ: ಗೋವಿಂದ ಕಾರಜೋಳ

ಬೆಳಗಾವಿಯಲ್ಲಿ ಗಣೇಶೋತ್ಸವ 11 ದಿನ ಮಾಡಬೇಕೆಂದು ಯುವಕರು, ಹಿಂದು ಸಂಘಟನೆಗಳ ಒತ್ತಾಯವಿತ್ತು. ಹೀಗಾಗಿ 11 ದಿನಗಳ ಗಣೇಶೋತ್ಸವಕ್ಕೆ ಸೋಮವಾರ ಆದೇಶ ಬರಲಿದೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಹತ್ವದ ಮಾಹಿತಿ ನೀಡಿದ್ದಾರೆ. ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ನಗರ ಅನ್ನೋದು ಸಾಬೀತು ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇನ್ನು ಏನೇನು ಅಭಿವೃದ್ಧಿ ಕೆಲಸಗಳು ಆಗಬೇಕು, ಅದೆಲ್ಲವನ್ನು ನಾನು ಹಾಗೂ ದಕ್ಷಿಣ …

Read More »

ರಾಜಕಾರಣಿಗಳ ಹುಟ್ಟುಹಬ್ಬಕ್ಕಿಲ್ವಾ ಕೊರೊನಾ ನಿಯಮ? ಎಂಎಲ್​​ಸಿ ಹುಟ್ಟುಹಬ್ಬಕ್ಕೆ ಸಂಗೀತ ಸಂಜೆ

ಬಾಗಲಕೋಟೆ: ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಅವರ 54ನೇ ಹುಟ್ಟು ಹಬ್ಬ ಹಿನ್ನೆಲೆ, ಕೋವಿಡ್ ನಿಯಮ ಗಾಳಿಗೆ ತೂರಿ ಹುಟ್ಟುಹಬ್ಬದಾಚರಣೆ ಮಾಡಲಾಗಿದೆ. ಸಚಿವ ಮುರುಗೇಶ್ ನಿರಾಣಿ ಸಹೋದರ ಹನಮಂತ ನಿರಾಣಿ ಅವರ 54ನೇ ಹುಟ್ಟು ಹಬ್ಬದ ಹಿನ್ನೆಲೆ, ಬೀಳಗಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಭಾಗಿಯಾಗಿದ್ದು ಕಂಡುಬಂತು. ಇನ್ನು ಗಣೇಶ್ ಉತ್ಸವ ಆಚರಣೆಗೆ ಕಠಿಣ ರೂಲ್ಸ್ ಜಾರಿ ಮಾಡಿ ಸರ್ಕಾರ ಆದೇಶವನ್ನ …

Read More »

ಕಾಣೆಯಾದ ಅಪ್ಪನ ಹುಡುಕಲು ಹೋದ ಮಗನೂ ವಾಪಸ್‌ ಬರಲಿಲ್ಲ!; ಪವಾಡಸದೃಶವಾಗಿ ಬದುಕುಳಿದರೂ ಆಕೆಯ ಬಾಳೀಗ ಗೋಳು..

ಬಳ್ಳಾರಿ: ತಂದೆ ಕಾಣೆಯಾಗಿದ್ದಾರೆ ಎಂದು ಹುಡುಕುವ ಸಲುವಾಗಿ ಮನೆಯಿಂದ ಹೋಗಿದ್ದ ಮಗ, ವಾಪಸ್‌ ಹೆಣವಾಗಿ ಮರಳುವಂತೆ ಆಗಿದೆ. ಜೊತೆಗಿದ್ದ ಪತ್ನಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದರೂ ಆಕೆಯ ಬಾಳೀಗ ಗೋಳು ಎಂಬಂತಾಗಿದೆ. ಬಳ್ಳಾರಿಯ 35ನೇ ವಾರ್ಡ್ ನಿವಾಸಿ ತಿಪ್ಪೇಸ್ವಾಮಿ ( 40) ಮೃತ ಪಟ್ಟ ದುರ್ದೈವಿ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಬಳಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈತ ಮೃತ ಪಟ್ಟಿದ್ದಾನೆ. ತಂದೆ ದೊರೆಸ್ವಾಮಿ ಏಕಾಏಕಿ ಮನೆಯಿಂದ ಕಾಣೆಯಾಗಿದ್ದರಿಂದ ವಿಚಲಿತಗೊಂಡಿದ್ದ ಪುತ್ರ, …

Read More »

2 ಕೆಎಸ್‌ಆರ್​ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು: ಮೂರು ಸರ್ಕಾರಿ ಬಸ್​ಗಳು ಡಿಕ್ಕಿ ಹೊಡೆದು, ಬಸ್​ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯವಾದ ಘಟನೆ ಬೆಂಗಳೂರು ನಗರದ ರಾಜ್​ಕುಮಾರ್​ ರಸ್ತೆಯಲ್ಲಿ ಸಂಭವಿಸಿದೆ. 2 ಕೆಎಸ್‌ಆರ್​ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ: ಚಿಕ್ಕಪಡಸಲಗಿ ಸೇತುವೆಯ ಮೇಲೆ ಕಾರು ಅಪಘಾತ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಾರು ಅಪಘಾತ ಸಂಭವಿಸಿದೆ. ತಡೆಗೋಡೆ ಮಧ್ಯೆ ಸಿಲುಕಿ ಕಾರು ನೇತಾಡುತ್ತಿದ್ದು, ಕಾರಿನ …

Read More »

ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ 4 ಲಕ್ಷ ಹೊಸ ಮನೆಗಳ ಗುರಿಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ರಾಜ್ಯದಾದ್ಯಂತ ನಗರ …

Read More »

ಮಹಾಲಿಂಗೇಶ್ವರ ನಗರ ಗೋಕಾಕ ನಲ್ಲಿ ಬಸವರಾಜ ಸಾಯನ್ನವರ ಅವರಿಂದ ಸರಳ ರೀತಿಯಲ್ಲಿ ಗಣೇಶ್ ಉತ್ಸವ ಆಚರಣೆ

ಗೋಕಾಕ : ಗೋಕಾಕನಲ್ಲಿ ಪ್ರತಿಯೊಂದು ವಿಶೇಷತೆ ಇದೆ ಗೋಕಾಕ ಜಲಪಾತ ಹಿಡಿದು , ಲಕ್ಷ್ಮಿ ದೇವಿ ಗುಡಿ , ಹಾಗೂ ರಾಜಕಾರಣಕ್ಕೆ ಮುಖ್ಯ ಬುಲಂದಿಯೆ ಗೋಕಾಕ , ಗೋಕಾಕ ಕರದಂಟು ಎಷ್ಟು ಫೇಮಸ್ ಇದೆಯೋ ಅದೇ ರೀತಿ ಗೋಕಾಕ ನಗರದ ಮಹಾಲಿಂಗೇಶ್ವರ ನಗರದ ಗಣಪತಿ ಉತ್ಸವ ಕೂಡ ಅಷ್ಟೇ ಜೋರಾಗಿ ವಿಜೃಂಭಣೆ ಯಿಂದ ಮಾಡುತ್ತ ಬಂದಿದ್ದಾರೆ . ಬಸವರಾಜ ಸಾಯನ್ನವರ ಅವರು.ಇವರು ಎ. ಪಿ.ಎಂ.ಸಿ.ನಿರ್ದೇಶಕರು ಕೂಡ ಹೌದು. ಈ ಬಾರಿ …

Read More »