ಗೋಕಾಕ ಶಹರ ಪೊಲೀಸ್ ಠಾಣೆ ಪ್ರಕರಣದಲ್ಲಿ ತನಿಖಾಧಿಕಾರಿ ಶ್ರೀ ವೀರೇಶ್ ತಿ ದೊಡಮನಿ DYSP DCRB ಇವರು ತನಿಖೆ ಮುಂದುವರೆಸಿ ದಿನಾಂಕ 14-12-2022 ರಂದು ಈ ಕೇಸಿನಲ್ಲಿಯ ಪರಾರಿ ಇದ್ದ ಇನ್ನೊಬ್ಬ ಪ್ರಮುಖ ಆರೋಪಿ ಸೋಮನಗೌಡ ಶಂಕರಗೌಡ ಪಾಟೀಲ ಬಂಧಿಸಿದ್ದಾರೆ ವಯಸ್ಸು 36 ವರ್ಷ ರಾಯಭಾಗ ಇವನಿಗೆ ದಸ್ತಗೀರ ಮಾಡಿದ್ದು ಈತನು ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ನಡೆದ ಪರೀಕ್ಷೆಯ ಕಾಲಕ್ಕೆ ಗದಗ …
Read More »ಸಂಕ್ರಾಂತಿ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್: ಸಿದ್ದರಾಮಯ್ಯ
ಬಾಗಲಕೋಟೆ : ಜನವರಿ 15 ರಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಬಳಿ ಎಸ್ ಆರ್ ಕೆ ಶುಗರ್ ಕಾರ್ಖಾನೆ ಯ ಅಡಿಗಲ್ಲು ಸಮಾರಂಭ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡುತ್ತಾ, ಜನವರಿ ಡಿಕೆ ಶಿವಕುಮಾರ್ ಹಾಗೂ ನನ್ನ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ,ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ದಲ್ಲಿ ಪ್ರವಾಸ …
Read More »ಮೊಸಳೆ ಕಂಡು ಶಾಕ್ ಆದ ಜನ
ಬೃಹತ್ ಮೊಸಳೆಯೊಂದು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಎದುರಿನ ಚಿನಿವಾಲರ ಖಾಲಿ ಜಾಗದಲ್ಲಿರುವ ಬಾವಿಯಲ್ಲಿ ಪತ್ತೆ ಆಗಿದೆ. ಬಾವಿ ಒಂದರಲ್ಲಿ ಬೃಹತ್ ಆಕಾರದ ಮೊಸಳೆ ಹಲವಾರು ದಿನಗಳಿಂದ ವಾಸಿಸುತ್ತಿದೆ ಅಲ್ಲದೇ, ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಹೇಳಿದರು ಪ್ರಯೋಜನ ಆಗಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಮುನ್ನವೇ ಮೊಸಳೆ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Read More »ಕನ್ನಡದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಕಡಾಡಿ
ಬೆಳಗಾವಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದಾರೆ. ದೇಶದ ಜನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ವೀರ ಯೋಧರ ತ್ಯಾಗ, ಬಲಿದಾನಗಳ ಸ್ಮರಣೆಗಾಗಿ ಹಾಗೂ ಸೇನೆಯಲ್ಲಿ ಯೋಗದಾನ ನೀಡುತ್ತಿರುವ ನಮ್ಮೆಲ್ಲ ಸೈನಿಕರ ಗೌರವಾರ್ಥವಾಗಿ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪಿಸಲು ಆಗ್ರಹಿಸಿದರು. ಕಡಾಡಿ ಮಾತನಾಡುತ್ತಿರುವಾಗ ಸದನದವು ಗದ್ದಲ ಗೂಡಾಗಿತ್ತು.
Read More »ಆಕ್ಟರ್ ಆಗ್ಬೇಕು ಅಂತ ಭಾಳ ಹುಚೈತ್ರಿ.: ಶಿವಪುತ್ರಪ್ಪ, ಮಲ್ಲು
ಬೆಂಗಳೂರು : ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ …
Read More »ರಾಷ್ಟ್ರ ಧ್ವಜಗಳ ಬಾಕಿ ಪಾವತಿಗೆ ಡಿ.ಸಿ.ಗಳಿಗೆ ಪತ್ರ
ಬಳ್ಳಾರಿ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆದ ಮೂರು ದಿನಗಳ ‘ಹರ್ ಘರ್ ತಿರಂಗಾ ಅಭಿಯಾನ’ಕ್ಕೆ ಕೇಂದ್ರ ಸರ್ಕಾರ ಪೂರೈಸಿದ್ದ ರಾಷ್ಟ್ರಧ್ವಜಗಳ ₹ 4,39,92,843 ಬಾಕಿಯನ್ನು ತಕ್ಷಣ ಪಾವತಿಸುವಂತೆ ತಾಕೀತು ಮಾಡಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಎರಡನೇ ಪತ್ರ ಬರೆದಿದೆ. ಆಗಸ್ಟ್ 13ರಿಂದ 15ರವರೆಗೆ ಮನೆಗಳು, ಕಚೇರಿಗಳು ಹಾಗೂ ವಾಹನಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿದ್ದವು. ‘ಏಳು ದಶಕಗಳಿಂದ ಬಳಸುತ್ತಿದ್ದ ಖಾದಿ ಬಟ್ಟೆಯ ತ್ರಿವರ್ಣ ಧ್ವಜಗಳಿಗೆ ಇತಿಶ್ರೀ ಹೇಳಿ, ತೆಳು …
Read More »ವ್ಯಾಪಾರಿ ಅಪಹರಿಸಿ ಹಣ ಲೂಟಿ: ಏಳು ಮಂದಿ ಬಂಧನ
ಬೆಳಗಾವಿ: ಹೋಟೆಲ್ ವ್ಯಾಪಾರಿಯೊಬ್ಬರನ್ನು ಅಪಹರಣ ಮಾಡಿ ₹ 1 ಲಕ್ಷ ವಸೂಲಿ ಮಾಡಿದ್ದ ಏಳು ಆರೋಪಿಗಳನ್ನು ಮುರಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಾಳೇಶ ಹೊಂಡಪ್ಪನವರ, ಶ್ರೀಶೈಲ ಹೊಂಡಪ್ಪನವರ, ಬಂದೇನವಾಜ್ ಅತ್ತಾರ್, ರಮೇಶ ಚಂದರಗಿ, ಮಲ್ಲಪ್ಪ ಕೋಮರ್, ಇಮ್ರಾನ್ ಮುಲ್ಲಾ, ನಾಗಪ್ಪ ರಂಗಣ್ಣನವರ ಬಂಧಿತರು. ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸೊಪ್ಪಾಡ್ಲ ಗ್ರಾಮದ ಸಾಬಣ್ಣ ಮೆಗಾಡಿ ಅವರನ್ನು ವಾರದ ಹಿಂದೆ ಸಾಬಣ್ಣ ಅವರನ್ನು ಯರಗಟ್ಟಿಯಲ್ಲಿ ಅಪಹರಿಸಿದ ಆರೋಪಿಗಳು, ಬೈಲಹೊಂಗಲ ತಾಲ್ಲೂಕಿನ ನೇಸರಗಿಗೆ …
Read More »ಖಾನಾಪುರ | ಕಾಡಾನೆ ಹಿಂಡು ದಾಳಿ: ಅಪಾರ ಬೆಳೆ ಹಾನಿ
ಖಾನಾಪುರ: ತಾಲ್ಲೂಕಿನ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಸುತ್ತಲಿನ ಕೃಷಿ ಜಮೀನುಗಳಲ್ಲಿ ಶನಿವಾರ ನಸುಕಿನಜಾವ 16 ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಬೆಳೆ ತಿಂದು, ತುಳಿದು ನಾಶ ಮಾಡಿವೆ. ಇದರಿಂದ ಗ್ರಾಮಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಶುಕ್ರವಾರ ರಾತ್ರಿಯೇ ದಾಂಡೇಲಿ ಅರಣ್ಯದಿಂದ ಬಂದ ನಾಲ್ಕು ಮರಿ ಹಾಗೂ 12 ದೊಡ್ಡ ಆನೆಗಳು ತಾವರಗಟ್ಟಿ, ಚುಂಚವಾಡ ಮಾರ್ಗವಾಗಿ ಭೂರಣಕಿ ಗ್ರಾಮದ ಕಡೆ ಬಂದವು. ಮಧ್ಯರಾತ್ರಿಯಿಂದ ಶನಿವಾರ ನಸುಕಿನಜಾವದವರೆಗೆ …
Read More »ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಆಹಾರ, ಉಡುಗೆ – ತೋಡುಗೆಯಲ್ಲಿ ವಿನೂತನ ಕಲಿಕಾ ಶೈಲಿ….
ಬೆಳಗಾವಿ ಶನಿವಾರ ದಿನಾಂಕ 10/12/22 ರಂದು ನಗರದ ಪೋರ್ಟ್ ರಸ್ತೆಯಲ್ಲಿ ಇರುವ ವಿಟ್ಟಲಾಚಾರ್ಯ ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕಲಿಕಾ ಕಾರ್ಯಕ್ರಮದ ಕೊನೆಯ ದಿನವಾಗಿತ್ತು… ಶಾಲೆಯ ಎಲ್ ಕೆಜಿ ಹಾಗೂ ಯುಕೆಜಿ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರು ದಿನಗಳ ಕಾಲ ಆರು ಬಣ್ಣಗಳ ಉಡುಗೆ ತೊಟ್ಟು ಬರುವಂತೆ ಹೇಳಲಾಗಿತ್ತು, ಅದೇರೀತಿ, ಅದೇ ಬಣ್ಣದ ಆಹಾರ ತರುವುದನ್ನು ಹೇಳಲಾಗಿತ್ತು, ಆ ಪ್ರಕಾರ ಪೋಷಕರ ಸಹಾಯದಿಂದ ಮಕ್ಕಳೆಲ್ಲ ಅದೇ ಬಣ್ಣಗಳ …
Read More »ಡಿಸೆಂಬರ್ 19ರ ಒಳಗೆ ಮೀಸಲಾತಿ ಸಿಗದಿದ್ದರೆ, 22 ಕ್ಕೆ ಸುವರ್ಣ ಸೌಧಕ್ಕೆ ಮುತ್ತಿಗೆ
ಬೆಳಗಾವಿ: ಡಿ.19 ರ ಒಳಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ನೀಡಬೇಕು. ಸರ್ಕಾರ ತಾನೇ ಕೊಟ್ಟ ಗಡುವಿನ ಪ್ರಕಾರ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಡಿ.22 ನೇ ತಾರಿಕು ಸುವರ್ಣಸೌದದ ಎದುರು ಪಂಚಮಸಾಲಿ ವಿರಾಠ ಪಂಚಮ ಶಕ್ತಿ ಪ್ರದರ್ಶನ ಮಾಡಿ 25 ಲಕ್ಷ ಜನ ಸೇರಿಸುತ್ತೇವೆ ಎಂದು ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿ ಹೇಳಿದರು. ನಗರದ ಗಾಂಧಿ ಭವನದಲ್ಲಿ 2 ಮೀಸಲಾತಿಗಾಗಿ ನಡೆಸಿದ ಸಭೆ ಬಳಿಕ ಮಾದ್ಯಮಗೋಷ್ಠಿ ನಡೆಸಿ …
Read More »
Laxmi News 24×7