Breaking News

ಆಕ್ಟರ್‌ ಆಗ್ಬೇಕು ಅಂತ ಭಾಳ ಹುಚೈತ್ರಿ.: ಶಿವಪುತ್ರಪ್ಪ, ಮಲ್ಲು

Spread the love

ಬೆಂಗಳೂರು : ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ.

ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ ಗಳಿಸಿದ್ದಾರೆ.

ಹೌದು.. ಸದಾ ಟ್ಯಾಲೆಂಟ್ ಹಂಟ್‌ ಮಾಡಿ ಪ್ರತಿಭಾವಂತರನ್ನು ವೇದಿಕೆ ಮೇಲೆ ತಂದು ಗುರುತಿಸುತ್ತಿರುವ ಜೀ ವಾಹಿನಿಯು ಇಂದು ಕಡು ಬಡತನದಲ್ಲೇ ಬೆಳೆದು ತಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರನ್ನು ತೆರೆ ಮೇಲೆ ತಂದು ನಿಲ್ಲಿಸಿತ್ತು. ಈ ಪೈಕಿ, ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿರುವಶಿವಪುತ್ರಪ್ಪಕೂಡ ಒಬ್ಬರು. ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಬಂದ ಶಿವಪುತ್ರಪ್ಪ ಹೃದಯ ತುಂಬಿ ಮಾತನಾಡಿದರು.

 

ಮೈಕ್‌ ಹಿಡಿದು ಉತ್ತರ ಕರ್ನಾಟದ ಭಾಷೆಯಲ್ಲಿ ಮಾತು ಆರಂಭಿಸಿದ ಮಾತಿನ ಮಲ್ಲ, ʼಒಂದು ಆಕ್ಸಿಡೆಂಟ್‌ ಆಗಿತ್ರಿ ಮನ್ಯಾಗ, ಆಗ ನನ್ನ ಕಡೆ ಸ್ಕ್ರೀನ್‌ ಒಡೆದಿದ್ದ ಮೋಬೈಲ್‌ ಇತ್ತು, ಅದ್ರಿಂದ ನಾನು ವಿಡಿಯೋ ಮಾಡ್ತೀದ್ದೆ. ನಂತರ ಗಣಪತಿ ಪಟ್ಟಿದು ವಿಡಿಯೋ ಮಾಡಿದೆ. ಅದು ವರ್ಕೌಟ್‌ ಆಯ್ತು. ಆವತ್ತಿನಿಂದ ವಿಡಿಯೋ ಮಾಡೋಕೆ ಸ್ಟಾರ್ಟ್‌ ಮಾಡಿದೆ. ಇಂದು ನನಗೆ 1.2 ಮಿಲಿಯನ್‌ ಯೂಟ್ಯೂಬ್‌ ಫಾಲೋವರ್ಸ್‌ ಇದ್ದಾರ ರೀ ಅಂತ ತಮ್ಮ ಸಾಧನೆ ಬಗ್ಗೆ ಮಾತನಾಡಿದ್ರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ