Breaking News

ಜಿಲ್ಲೆ

ಟ್ರಾಪಿಕ್ ಸಮಸ್ಯ ಕುರಿತು ಸ್ವತಃ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಸಂಜೀವ್ ಪಾಟೀಲ್ ಬಗ್ಗೆ ಗಮನ ಹರಿಸಿ ಯೋಗ್ಯ ರೀತಿಯಲ್ಲಿ ಕ್ರಮ ಕೈಗೊಂಡ

ಬೆಳಗಾವಿ ಜಿಲ್ಲೆಯ ಪಟ್ಟಣಗಳ ಮುಖ್ಯ ರಸ್ತೆಗಳಲ್ಲಿ ಟ್ರಾಪಿಕ್ ಸಮಸ್ಯ ಕುರಿತು ಸ್ವತಃ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಸಂಜೀವ್ ಪಾಟೀಲ್ ಬಗ್ಗೆ ಗಮನ ಹರಿಸಿ ಯೋಗ್ಯ ರೀತಿಯಲ್ಲಿ ಕ್ರಮ ಕೈಗೊಂಡರು ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲು ತುಂಬ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾ ಎಸ್ ಪಿ ಸಂಜೀವ್ ಪಾಟೀಲ್ ಅವರಿಗೆ ದೂರು ನೀಡಿದ್ದರು. ಆ ಹಿನ್ನಲೆಯಲ್ಲಿ ಇವತ್ತು ನಿಪ್ಪಾಣಿ ನಗರ ಸವದತ್ತಿ, ಖಾನಾಪುರ, ಕುಡುಚಿ ಹಾರೋಗೇರಿ ಯರಗಟ್ಟಿ,ಗೋಕಾಕ ನಗರಗಳ ಪ್ರಮುಖ ಮಾರುಕಟ್ಟೆ …

Read More »

ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲ

ಚಿಕ್ಕೋಡಿ: ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲದ ಛಾಯೆ ಕಾಣ್ತಿದೆ. ಜೀವಜಲಕ್ಕಾಗಿ ಜನರು ಸೇರಿದಂತೆ ಜಾನವಾರುಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಂತೂ ಸಂಪೂರ್ಣವಾಗಿ ಒಣಗಿ ಹೋಗಿ ಮಳೆರಾಯನ ಆಗಮನಕ್ಕಾಗಿ ರೈತಾಪಿ ವರ್ಗ ಎದುರು ನೋಡುತ್ತಿದೆ. ಚಿಕ್ಕೋಡಿ ಉಪವಿಭಾಗದ ಬಹುತೇಕ ಹಳ್ಳಿಗಳಿಗೆ ಬರದ ಛಾಯೆ ಎದ್ದು ಕಾಣ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬೆಳೆಗಳು ನಾಶವಾದರೂ ಪರವಾಗಿಲ್ಲ ಆದರೆ, ಊರ ಜನ ಜಾನುವಾರುಗಳಿಗೆ ಯಾವುದೇ ಅನಾನುಕೂಲವಾಗದು ಎಂದು ತಮ್ಮ ಬಾವಿಯ ನೀರನ್ನು …

Read More »

ಶಕ್ತಿ ಯೋಜನೆ ಎಫೆಕ್ಟ್… ಖಾಸಗಿ ಬಸ್​ಗಳ ‘ಖಾಲಿ’ ಓಡಾಟ.

ಚಾಮರಾಜನಗರ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಸಂತಸ ಮೂಡಿಸಿದ್ದರೇ, ಖಾಸಗಿ ಬಸ್​ ಮಾಲೀಕರಿಗೆ ಸಂಕಷ್ಟ ತಂದಿಟ್ಟಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 70ರಿಂದ 80 ಖಾಸಗಿ ಬಸ್​ಗಳು ದಿನನಿತ್ಯ ಸಂಚರಿಸುತ್ತಿವೆ. ಉಚಿತ ಪ್ರಯಾಣದಿಂದ ಮಹಿಳೆಯರು ಸರ್ಕಾರಿ ಬಸ್​ಗಳ ಕಡೆ ಮುಖ ಮಾಡಿದ್ದಾರೆ. ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರು ಬಾರದಿದ್ದರಿಂದ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡುಬಂದವು. ಟಂಟಂ, ಖಾಸಗಿ ಬಸ್​ಗಳನ್ನು ಆಶ್ರಯಿಸಿದ್ದ ಪ್ರಯಾಣಿಕರು ಈಗ ಕೆಎಸ್​ಆರ್​ಟಿಸಿ ಬಸ್​ಗಳತ್ತ …

Read More »

ಹಾವೇರಿ : ಸರ್ಕಾರಿ ಬಸ್​​ನಿಂದ ಬಿದ್ದು ಶಾಲಾ ಬಾಲಕಿ ಸಾವು

ಹಾವೇರಿ : ಸರ್ಕಾರಿ ಸಾರಿಗೆ ಬಸ್​​ನಿಂದ ಬಿದ್ದು ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ನಡೆದಿದೆ. ಮೃತ ಬಾಲಕಿಯನ್ನು ಮಧು ಕುಂಬಾರ(14) ಎಂದು ಗುರುತಿಸಲಾಗಿದೆ. ಬಾಲಕಿಯು ವಾಸನ ಗ್ರಾಮದಿಂದ ಕುಸನೂರು ಗ್ರಾಮದಲ್ಲಿರುವ ಪ್ರೌಢಶಾಲೆಗೆ ಆಗಮಿಸುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಸ್​ ಜನರಿಂದ ತುಂಬಿದ್ದ ಕಾರಣಕ್ಕಾಗಿ ಬಾಲಕಿ ಬಾಗಿಲ ಬಳಿಯೇ ಬಾಲಕಿ ನಿಂತಿದ್ದಳು. ಅಲ್ಲದೆ ರಸ್ತೆ ಕೂಡ ಹದಗೆಟ್ಟಿತ್ತು ಎಂದು ಹೇಳಲಾಗಿದೆ. …

Read More »

ಕೈಗಾರಿಕೆಗಳ ವಿದ್ಯುತ್ ದರ ಇಳಿಸಿ – ಸರ್ಕಾರಕ್ಕೆ ಏಳು‌ ದಿನಗಳ‌ ಗಡುವು ಕೊಟ್ಟ ಬೆಳಗಾವಿ ಉದ್ಯಮಿಗಳು

ಬೆಳಗಾವಿ: ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಹೆಚ್ಚಳ ಮಾಡಿರುವುದಕ್ಕೆ ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ದಿನಗಳೊಳಗೆ ಹೆಚ್ಚಿಸಿರುವ ವಿದ್ಯುತ್ ದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರೋಹನ್ ಜುವಳಿ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗಾವಿಯಲ್ಲಿ “ಈಟಿವಿ ಭಾರತ” ಜೊತೆಗೆ ಅವರು ಮಾತನಾಡಿದರು. ನಾಳೆ ಬೆಳಗ್ಗೆ ಚನ್ನಮ್ಮ ವೃತ್ತದಿಂದ ಮೌನ ರ್‍ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ …

Read More »

ತಿಲಾರಿ ಡ್ಯಾಂ​ನ ಹಿನ್ನೀರಿನಲ್ಲಿ ಮುಳುಗಿ ಬೆಳಗಾವಿಯ ಸಹೋದರರು ಸಾವು

ಬೆಳಗಾವಿ: ಪಕ್ಕದ ಮಹಾರಾಷ್ಟ್ರ ರಾಜ್ಯದ ಚಂದಗಡ ತಾಲೂಕಿನ ತಿಲಾರಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ಬೆಳಗಾವಿ ನಗರದ ಇಬ್ಬರು ಸಹೋದರರು‌ ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮೃತರು ಕುಂದಾನಗರಿಯ ಕ್ಯಾಂಪ್​ ಪ್ರದೇಶದ ರೀಹಾನ್ ಅಲ್ತಾಫ್ ಖಾನ್ (15) ಹಾಗೂ ಮುಸ್ತಫಾ ಅಲ್ತಾಫ್ ಖಾನ್ (12) ಎಂದು ಗುರುತಿಸಲಾಗಿದೆ. ವೀಕೆಂಡ್​ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕುಟುಂಬಸ್ಥರೊಂದಿಗೆ ಅಲ್ತಾಪ್ ಖಾನ್ ಹಾಜಗೋಳಿ ಗ್ರಾಮದ ಬಳಿ ಇರುವ ತಿಲಾರಿ ಡ್ಯಾಮ್ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ತಿಲಾರಿ …

Read More »

ಕುಡಿಯುವ ನೀರಿಗಾಗಿ ಪ್ರತಿಭಟನೆ

ಕುಡಿಯುವ ನೀರಿಗಾಗಿ ಆಗ್ರಹಿಸಿ ವಿಜಯಪುರ ನಗರದ ಜೋರಾಪುರ ಪೇಟ್ ಬಳಿ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದರು. ನಗರಾದ್ಯಂತ ಕುಡಿಯುವ ನೀರಿನ ಸಮಸ್ಯೆ ಆಗಿದೆ. ತಿಂಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಿಂದ ದೈನಂದಿನ ಜೀವನ ನಡೆಸಲು ಸಮಸ್ಯೆ ಆಗುತ್ತಿದೆ ಎಂದು ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ಮಾಡಿದರು. ಅದಕ್ಕಾಗಿ ತಕ್ಷಣವೇ ಕುಡಿಯುವ …

Read More »

ಶಕ್ತಿ ಯೋಜನೆ ಬೇಡ ಅನ್ನುವವರು ಬಸ್​ನಲ್ಲಿ ಹಣ ಕೊಟ್ಟು ಪ್ರಯಾಣ ಮಾಡಲಿ :ಶಿವಾನಂದ ಪಾಟೀಲ್

ಹಾವೇರಿ : ಮಹಿಳೆಯರಿಗೆ ಉಚಿತ ಬಸ್​ ಸೇವೆ ನೀಡುವ ಶಕ್ತಿ ಯೋಜನೆ ಬೇಡ ಎನ್ನುವವರು ಬಸ್‌ನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡಲಿ. ಅಂತವರು ಬಸ್ಸಿನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂರರಲ್ಲಿ 90 ಜನರಿಗೆ ಅವಶ್ಯಕತೆ ಇದ್ದಾಗ 10 ಜನರಿಗೆ ಅವಶ್ಯಕತೆ ಇರುವುದಿಲ್ಲ. ಆ 10 ಜನ ಅದರ ಬಗ್ಗೆ …

Read More »

ಆಂಜನೇಯ ನಗರದ ಸರ್ಕಾರಿ ಶಾಲೆಗೆ ಬೇಟಿ ನೀಡಿದ ಉತ್ತರ ಮತಕ್ಷೇತ್ರದ ಶಾಸಕ ಆಸೀಪ್ ರಾಜು ಸೇಠ್

ಬೆಳಗಾವಿಯ ಆಂಜನೇಯ ನಗರದ ಸರ್ಕಾರಿ ಶಾಲೆಗೆ ಬೇಟಿ ನೀಡಿದ ಉತ್ತರ ಮತಕ್ಷೇತ್ರದ ಶಾಸಕ ಆಸೀಪ್ ರಾಜು ಸೇಠ್ ಶಾಲೆಯ ಸ್ಥಿತಿಗತಿ,ಕೊರತೆ ಹಾಗೂ ನೂನ್ಯತೆ ಮತ್ತು ಮಕ್ಕಳ ಶಿಕ್ಷಣದ ಕುರಿತು ಪರಶೀಲನೆ ನಡೆಸಿದರು. ಸರ್ಕಾರಿ ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ 1ನೇ ತರಗತಿಯಿಂದ 7ನೇ ತರಗತಿಯಲ್ಲಿ ಕೇವಲ 33 ವಿದ್ಯಾರ್ಥಿಗಳ ಇರುವುದನ್ನು ನೋಡಿ ಕಳವಳ ವ್ಯಕ್ತಪಡಿಸಿದರು.ಅಲ್ಲದೆ ಧ್ವಜ ಕಂಬಕ್ಕೆ ಹಾನಿ ಹಾಗೂ ಹಳೆಯ ಶಿತಲವ್ಯಸ್ಥೆಯ ಕಟ್ಟಡಗಳು ಮತ್ತು ಹಲವು ದಿನಗಳಿಂದ ಮುಚ್ಚಿದ್ದ …

Read More »

ಕುಡಿದು ಶಾಲೆಗೆ ಬಂದ ಸರ್ಕಾರಿ ಶಿಕ್ಷಕ

ಬೆಳಗಾವಿ : ಕುಡಿದ ಅಮಲಿನಲ್ಲಿ ಶಿಕ್ಷಕನೊಬ್ಬ ಶಾಲೆಯಲ್ಲಿಯೇ ನಿದ್ದೆಗೆ ಜಾರಿ ಕರ್ತವ್ಯಲೋಪ ಎಸಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಕನ್ನಡ ಶಿಕ್ಷಕ ರವಿ ಪಾಟೀಲ ಕುಡಿದು ಶಾಲೆಗೆ ಬಂದು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ಮಹಾದ್ವಾರ ರಸ್ತೆಯಲ್ಲಿರುವ ಸರ್ಕಾರಿ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ರವಿ ಪಾಟೀಲ ಇಂದು ಮದ್ಯ ಸೇವಿಸಿ ಶಾಲೆಗೆ ಬಂದು ಇಲ್ಲೇ ಮಲಗಿದ್ದಾರೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ. …

Read More »