Breaking News

ಜಿಲ್ಲೆ

ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

ಮುಧೋಳ : ಅತ್ಯಾಚಾರದಂತಹ ಹೇಯ ಕೃತ್ಯದಲ್ಲಿ ಯಾವುದೇ ಧರ್ಮದವರು ಭಾಗಿಯಾದರೂ ದೊಡ್ಡ ಅಪರಾಧ. ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಸಿಬೇಕು ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಸರ್ಕಾರಕ್ಕೆ ಒತ್ತಾಯಿಸಿದರು. ನಗರದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಅಲ್ಪಸಂಖ್ಯಾತ ಸೌಹಾರ್ದ ಸಂಘಟನೆಗಳ ಒಕ್ಕೂಟದ‌ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ‌ ಪಾಲ್ಗೊಂಡು ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅತ್ಯಾಚಾರದಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕೆಲವು ಕೋಮುವಾದ ಸಂಘಟನೆಗಳು ಸಮಾಜದಲ್ಲಿ …

Read More »

ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

ಬೆಳಗಾವಿ: ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಮುಗಿಸಿ ವಾಪಸ್ ಹೋಗುತ್ತಿದ್ದಾಗ ಎರಡು ಗುಂಪುಗಳ ಯುವಕರು ತಲವಾರ್ ದಿಂದ ಹೊಡೆದಾಡಿಕೊಂಡಿದ್ದು, ಮೂವರು ಗಾಯಗೊಂಡ ಘಟನೆ ಇಲ್ಲಿಯ ರುಕ್ಮಿಣಿ ನಗರದಲ್ಲಿ ರವಿವಾರ ರಾತ್ರಿ ನಡೆದಿದೆ. ರುಕ್ಮಿಣಿ ನಗರ ಹಾಗೂ ಉಜ್ವಲ್ ನಗರದ ಯುವಕರ ಮಧ್ಯೆ ಈ ಗಲಾಟೆ ಆಗಿದ್ದು, ಮೆರವಣಿಗೆ ಮುಗಿಸಿಕೊಂಡು ಹೋಗುವಾಗ ಒಬ್ಬರಿಗೊಬ್ಬರು ಸಿಟ್ಟಿನಿಂದ ನೋಡಿದ್ದಕ್ಕೆ ಹೊಡೆದಾಡಿಕೊಂಡಿದ್ದಾರೆ. ತಲ್ವಾರ್ ಹಾಗೂ ಚಾಕುವಿನಿಂದ ಘರ್ಷಣೆ ಹಾಡಿದಿತ್ತು ಘಟನೆಯಲ್ಲಿ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಗಾಯವಾಗಿದೆ. …

Read More »

ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌-ಮಿಲಾದ್‌ ಹಬ್ಬದ ಮೆರವಣಿಗೆ

ಬೆಳಗಾವಿ: ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌-ಮಿಲಾದ್‌ ಹಬ್ಬದ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಮುಸ್ಲಿಮರೊಂದಿಗೆ ಹಿಂದೂಗಳೂ ಭಾಗವಹಿಸಿ ಭಾವೈಕ್ಯತೆ ಮೆರೆದರು. ನಗರದಲ್ಲಿ ಸೆ.16ರಂದೇ ಈದ್‌-ಮಿಲಾದ್‌ ಹಬ್ಬವನ್ನು ಮುಸ್ಲಿಮರು ಆಚರಿಸಿದ್ದಾರೆ. ಅಂದೇ ಬೆಳಿಗ್ಗೆ ಈದ್‌-ಮಿಲಾದ್‌ ಮೆರವಣಿಗೆ ನಡೆಯಬೇಕಿತ್ತು. ಆದರೆ, ಅದರ ಮಾರನೇ ದಿನವೇ( ಸೆ.17) ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇತ್ತು. ಹಾಗಾಗಿ ಗಣೇಶನ ಮೆರವಣಿಗೆ ಮೊದಲು ಅದ್ದೂರಿಯಾಗಿ ನಡೆಯಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೂ ಅನುಕೂಲವಾಗಲೆಂದು ಮುಸ್ಲಿಮರು …

Read More »

ಯತ್ನಾಳ್-ಕಾಶಪ್ಪನವರ್ ನಡುವೆ ‘ಟಿಪ್ಪು-ಔರಂಗಜೇಬ’ ಗಲಾಟೆ! ನಾಲಿಗೆ ಹರಿಬಿಟ್ಟ ನಾಯಕರು!

ಬಾಗಲಕೋಟೆ: ಟಿಪ್ಪು ಸುಲ್ತಾನ್ (Tipu Sultan) ಹಾಗೂ ಔರಂಗಜೇಬ್ (Aurangzeb) ವಿಚಾರಕ್ಕೆ ವಿಜಯಪುರ ಶಾಸಕ (Vijayapura MLA) ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ಬಾಗಲಕೋಟೆಯ (Bagalkot) ಹುನಗುಂದ ಶಾಸಕ (Hungunda MLA) ವಿಜಯಾನಂದ ಕಾಶಪ್ಪನವರ್ (Vijayananda Kashappanaar) ಟಾಕ್ ಫೈಟ್ ಜೋರಾಗಿದೆ. ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ವಿರುದ್ಧ ಯತ್ನಾಳ್ ಏಕವಚನದಲ್ಲಿ ಟೀಕಿಸಿದ್ದರು. ಇದಕ್ಕೆ ವಿಜಯಾನಂದ ಕಾಶಪ್ಪನವರ್ ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ. ಈ ದೇಶ ಕಂಡ ವೀರ …

Read More »

ನಿವೇಶನ ವಿವಾದ: ಎರಡು ಗುಂಪುಗಳ ನಡುವೆ ಗಲಾಟೆ; ಕೊಂಡಸಕೊಪ್ಪದಲ್ಲಿ ಪೊಲೀಸ್‌ ಕಾವಲು

ಬೆಳಗಾವಿ: ತಾಲ್ಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಗುರುವಾರ ನಿವೇಶನ ವಿಚಾರಕ್ಕೆ ನಡೆದ ಜಗಳದಲ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿ ನಾಲ್ವರ ಮೇಲೆ ಹಲ್ಲೆ ಮಾಡಲಾಗಿದೆ. ಬಸ್ತವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಠ್ಠಲ ಸಾಂಬ್ರೇಕರ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮೂವರು ಸ್ನೇಹಿತರು ಚಿಕಿತ್ಸೆ ಪಡೆದು ಮರಳಿದ್ದಾರೆ. ಕೊಂಡಸಕೊಪ್ಪದವರಾದ ಪುಂಡಲೀಕ ಕುಡಚೇಕರ, ಭೀಮಾ ದೇಮನ್ನವರ, ನಾಗಪ್ಪ ವಾಳಕೆ, ಗಜು ಡೋಂಗ್ರೆ, ಮೋನಪ್ಪ ಗುಜರಾನಟ್ಟಿ, ಶಂಕರ ಪಾಟೀಲ ಆರೋಪಿಗಳು. ಈಗಾಗಲೇ …

Read More »

74.87 ಕೋಟಿ ವಂಚನೆ: 14 ಸಿಬ್ಬಂದಿ ವಿರುದ್ಧ ದೂರು

ಬೆಳಗಾವಿ: ‘ಗೋಕಾಕದ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್‌ನಲ್ಲಿ ₹74.87 ಕೋಟಿ ವಂಚನೆ ಆಗಿದೆ. ಬ್ಯಾಂಕ್‌ನ ವ್ಯವಸ್ಥಾಪಕ, ಗುಮಾಸ್ತ ಸೇರಿ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಬಂಧನಕ್ಕೆ ಮೂರು ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದರು.   ‘ಪ್ರಕರಣ ಸಂಬಂಧ ಬ್ಯಾಂಕ್‌ನ ಅಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ದೂರು ದಾಖಲಿಸಿದ್ದಾರೆ. ದೊಡ್ಡ ಮೊತ್ತದ ಪ್ರಕರಣವಾದ್ದರಿಂದ ಇದನ್ನು ಸಿಐಡಿಗೆ ಹಸ್ತಾಂತರಿಸಲು ಪತ್ರ ಬರೆಯಲಾಗಿದೆ. …

Read More »

ಮೈಸೂರಿಗೆ ಫಿಲ್ಮ್‌ ಸಿಟಿ ನಿರ್ಮಾಣದ ಬಿಗ್‌ ಅಪ್ಡೇಟ್ಸ್?

ಕನ್ನಡ ಚಿತ್ರರಂಗದ ಬಹುದಿನಗಳ ಕನಸು ಇದೀಗ ನನಸಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಫಿಲ್ಮ್‌ ಸಿಟಿ ಬೇಕು ಎನ್ನುವುದು ದಶಕಗಳ ಕನಸು. ಮೈಸೂರಿನಲ್ಲಿ ಫಿಲ್ಮ್‌ ಸಿಟಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕನ್ನಡ ಚಿತ್ರರಂಗದ ಚಿತ್ರೀರಕಣ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಫಿಲ್ಮ್‌ ಸಿಟಿಯ ಜಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.   ಹಿಂದಿ ಹಾಗೂ ತೆಲುಗು ಚಿತ್ರರಂಗಗಳಿಗೆ ಇರುವ ಮಾದರಿಯಲ್ಲೇ …

Read More »

ಬೆಳಗಾವಿಯಲ್ಲಿ ಗಣೇಶೋತ್ಸವ ಮೆರವಣಿಗೆಗೆ ಜನಸಾಗರ

ಬೆಳಗಾವಿಯ ಶ್ಯಾಮಪ್ರಸಾದ್‌ ಮುಖರ್ಜಿ (ಎಸ್‌ಪಿಎಂ) ರಸ್ತೆಯಲ್ಲಿ ಬುಧವಾರ ಸಂಜೆಯೂ ಮುಂದುವರಿದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು. ನಿರಂತರ 30 ತಾಸು ಮೆರವಣಿಗೆ ನಡೆಯಿತು

Read More »

ಗಣೇಶ ವಿಸರ್ಜನೆಯ ಅದ್ದೂರಿ ಮೆರವಣಿಗೆ: ಈದ್‌ ರ‍್ಯಾಲಿ ಮುಂದಕ್ಕೆ

ಬೆಳಗಾವಿ: ಗಣೇಶ ಮೂರ್ತಿಗಳ ವಿಸರ್ಜನೆಯ ಅದ್ದೂರಿ ಮೆರವಣಿಗೆಗೆ ತೊಡಕಾಗದಿರಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯು ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದ ಸೋಮವಾರದ ಈದ್ ಮಿಲಾದ್ ಮೆರವಣಿಗೆಯನ್ನು ಮುಸ್ಲಿಮರು ಸೆಪ್ಟೆಂಬರ್ 22ಕ್ಕೆ ಮುಂದೂಡಿದರು. ಉಳಿದಂತೆ ಇತರ ಧಾರ್ಮಿಕ ಕಾರ್ಯಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ‘ಬೆಳಗಾವಿಯ ಗಣೇಶೋತ್ಸವ ದೇಶದಲ್ಲೇ ಪ್ರಸಿದ್ಧ. ಮೊದಲು ಅದು ಸಂಭ್ರಮದಿಂದ ನೆರವೇರಲಿ. ಸೆಪ್ಟೆಂಬರ್ 22ರಂದು ನಾವು ಈದ್‌-ಮಿಲಾದ್‌ ಮೆರವಣಿಗೆ ಮಾಡಲು ಇಸ್ಲಾಂ ಧರ್ಮಗುರುಗಳು ಮತ್ತು ಮುಸ್ಲಿಮರೆಲ್ಲ ಸೇರಿ ನಿರ್ಧರಿಸಿದೆವು. ಗಣೇಶ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ.

ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ದೇವಶಿಲ್ಪಿ ಭಗವಾನ್ ವಿಶ್ವಕರ್ಮ ಜಯಂತಿಯ ಅಂಗವಾಗಿ ಕಾರ್ಖಾನೆಯಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಆಚರಣೆ ಮಾಡಿದರು. ಸೃಷ್ಟಿಕರ್ತ ಬ್ರಹ್ಮನ ಅಂಶವಾಗಿರುವ ದೇವಶಿಲ್ಪಿ ವಿಶ್ವಕರ್ಮನು ಎಲ್ಲಾ ಕುಶಲಕರ್ಮಿಗಳಿಗೆ ಒಳಿತನ್ನು ತರಲಿ ಎಂದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಹಿರಿಯರು ಯುವಕರು ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Read More »