Breaking News

ಜಿಲ್ಲೆ

ಬಹುಭಾಷಾ ನಟಿ, ಕ್ಯೂಟ್ ಬೆಡಗಿನಯನತಾರಾಗೆ ಕಾಡಿದ ಟ್ಯಾಟು

ಚೆನ್ನೈ: ಬಹುಭಾಷಾ ನಟಿ, ಕ್ಯೂಟ್ ಬೆಡಗಿ ನಯನತಾರಾ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಹೆಸರು ವಾಸಿ, ಅದೇ ರೀತಿ ಅವರು ಬೆಳೆದಿದ್ದಾರೆ ಸಹ. ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ದಕ್ಷಿಣ ಸಿನಿ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ನಟನೆಯಲ್ಲಿನ ಅವರ ಸಾಧನೆ ಜೊತೆಗೆ ನಿಜ ಜೀವನದಲ್ಲಿ ಅವರ ಸರಣಿ ಪ್ರೇಮ್ ಕಹಾನಿಗಳು ಸಹ ಅಷ್ಟೇ ಚರ್ಚೆಯಾಗಿದ್ದವು. ಇದೆಲ್ಲದರ ನಡುವೆ ಒಂದು ಟ್ಯಾಟು ನಯನತಾರಾ ಅವರನ್ನು ತುಂಬಾ ಚಿಂತೆಗೆ ದೂಡಿತ್ತು. …

Read More »

ಬೆಳಗಾವಿಯಲ್ಲಿ ಮೊದಲ ಬಲಿ- ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

ಬೆಳಗಾವಿ: ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಏಪ್ರಿಲ್ 13ರಂದು ಮೃತಪಟ್ಟಿದ್ದರು. ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಮೃತ ವೃದ್ಧೆಯ ಥ್ರೋಟ್ ಸ್ವ್ಯಾಬ್‍ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರಿಪೋರ್ಟ್ ಸದ್ಯ ಹೊರ ಬಿದ್ದಿದ್ದು, ವೃದ್ಧೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ …

Read More »

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ : ಬೆಚ್ಚಿ ಬಿದ್ದ ರೈತರು

ಕಬ್ಬು ಕಟಾವು ಮಾಡುವಾಗ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳನ್ನು ನೋಡಿರೋ ರೈತರು ಬೆಚ್ಚಿ ಬಿದ್ದಿದ್ದಾರೆ.   ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ತೊಪಯ್ಯನ ಮಂಜೇಗೌಡರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಕಂಡುಬಂದಿವೆ. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಎರಡು ಚಿರತೆ ಮರಿಗಳು ಗೋಚರಿಸಿವೆ. ಚಿರತೆ ಮರಿಗಳು ಲವಲವಿಕೆಯಿಂದ ಓಡಾಡುತ್ತಿದ್ದು, ಈ ಗ್ರಾಮದ ರೈತರ ಆತಂಕಕ್ಕೆ …

Read More »

ಪ್ರಧಾನಿ ಮೋದಿ ಲಾಕ್ ಡೌನ್ ನ್ನು ಮೇ 3ರವರೆಗೆ ವಿಸ್ತರಿಸಿದ್ದಕ್ಕೆ ಪ್ರಧಾನಿ ಮೋದಿಯವರ ನಿರ್ಧಾರ ಕಠಿಣ ಮತ್ತು ಸಮಯೋಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

ನವದೆಹಲಿ : ಪ್ರಧಾನಿ ಮೋದಿ ಲಾಕ್ ಡೌನ್ ನ್ನು ಮೇ 3ರವರೆಗೆ ವಿಸ್ತರಿಸಿದ್ದಕ್ಕೆ ಪ್ರಧಾನಿ ಮೋದಿಯವರ ನಿರ್ಧಾರ ಕಠಿಣ ಮತ್ತು ಸಮಯೋಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟಲು ದೇಶವನ್ನು ಮೇ3ರವರೆಗೆ ಲಾಕ್ ಡೌನ್ ಮಾಡಿರುವುದು ಕಠಿಣ ಮತ್ತು ಸಮಯೋಚಿತ ತೀರ್ಮಾನವಾಗಿದೆ. ಈಗಲೇ ಅಂಕಿಅಂಶಗಳ ಬಗ್ಗೆ ಮಾತನಾಡಬಾರದು. ಆದರೆ 6 ವಾರಗಳು ದೇಶವನ್ನು ಲಾಕ್ ಡೌನ್ ಮಾಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಯವಾಗುತ್ತದೆ. ಹಾಗೇ …

Read More »

ಸುಮಲತಾ ಮಾಡಬೇಕಾದ ಕೆಲಸ ಮಾಡಿದ ಡಿಕೆ ಬ್ರದರ್ಸ್​:

ಬೆಂಗಳೂರು(ಏ.15): ಲಾಕ್​​ಡೌನ್​​ನಿಂದಾಗಿ ಮಂಡ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟ ಸಿಲುಕಿರುವ ಮಂಡ್ಯ ರೈತರಿಗೆ ಇದೀಗ ಪಕ್ಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಪತ್ಬಾಂಧವ ಆಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರ ಪರಿಸ್ಥಿತಿ ಕಂಡು ಅನ್ನಾದತರು ಬೆಳೆದ ಬೆಳೆಗಳನ್ನು ತಮ್ಮ ಟ್ರಸ್ಟ್ ವತಿಯಿಂದ ಖರೀದಿಸಿ ಜನರಿಗೆ ಸಂಸದ ಸುರೇಶ್ ಉಚಿತವಾಗಿ ಹಂಚಿ ಮಾನವೀಯತೆ ಮೆರೆಯುತ್ತಿದ್ಧಾರೆ. ಈ ಮೂಲಕ ಬೆಳೆ ಬೆಳೆದ ರೈತರ ನೆರವಿಗೂ ನಿಂತಿದ್ದಾರೆ. ಸಂಸದ ಸುರೇಶ್ ರೈತರಿಂದ ಬೆಳೆ ಖರೀದಿಸುತ್ತಿರುವ …

Read More »

ಔಷಧಿ ಆಮದು: ಕೊರೋನಾ ಬಳಿಕ ಭಾರತದಿಂದ ಚೀನಾಗೆ ತೆರಳಿದ ಮೊದಲ ವಿಮಾನ ಸ್ಪೇಸ್ ಜೆಟ್!

ನವದೆಹಲಿ(ಏ.15): ಭಾರತದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಈ ಮಾರಕ ಕೋವಿಡ್​​​-19 ತಡೆಗೆ ಭಾರತ ಸರ್ಕಾರವೂ ಭಾರೀ ಕಸರತ್ತು ನಡೆಸುತ್ತಿದೆ. ಹಾಗಾಗಿಯೇ ಇಂದು ಚೀನಾದಿಂದ ಔಷಧಿ ಆಮದು ಮಾಡಿಕೊಳ್ಳಲು ಭಾರತದಿಂದ ಸ್ಪೇಸ್​​ ಜೆಟ್​​ ವಿಮಾನ ಪ್ರಯಾಣ ಬೆಳೆಸಿದೆ. ಕೊರೋನಾ ನಂತರ ಭಾರತದ ಕೋಲ್ಕತ್ತಾದ ಮೂಲಕ ಚೀನಾದ ಶಾಂಘೈಗೆ ತೆರಳಿದ ಮೊದಲ ವಿಮಾನ ಇದಾಗಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಕೋಲ್ಕತ್ತಾದಿಂದ ತೆರಳಿದ ವಿಮಾನ ಮಧ್ಯಾಹ್ನ 3 ಗಂಟೆ ಚೀನಾದ ಶಾಂಘೈಗೆ …

Read More »

ಕರ್ನಾಟಕದಿಂದ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದವರು ಎಷ್ಟು?

ಬೆಂಗಳೂರು: ಕರ್ನಾಟಕದಿಂದ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದವರು ಎಷ್ಟು? ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಸರ್ಕಾರದ ಬಳಿ ಈಗಲೂ ಸ್ಪಷ್ಟವಾದ ಉತ್ತರವಿಲ್ಲ. ಹೌದು, ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಕರ್ನಾಟಕದಿಂದ 1,300 ಮಂದಿ ಭಾಗಿಯಾಗಿದ್ದರು ಎಂದು ಸರ್ಕಾರ ಅಧಿಕೃತ ಮಾಹಿತಿಯನ್ನು ಕಳೆದ ಬುಧವಾರ ಬಿಡುಗಡೆಗೊಳಿತ್ತು. ಕರ್ನಾಟಕದಿಂದ 1,300 ಮಂದಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು, 50 ಮಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 269 ಮಂದಿ, ಇತರ …

Read More »

ಅಕ್ರಮ ಮದ್ಯ ಮಾರಾಟ ಪರಿಶೀಲನೆ- ಬೀದಿಯಲ್ಲೇ ಬಡಿದಾಡಿಕೊಂಡ ಅಬಕಾರಿ ಪೊಲೀಸರು

ಮಡಿಕೇರಿ: ಅಕ್ರಮ ಮದ್ಯ ಮಾರಾಟ ಪರಿಶೀಲನೆ ಮಾಡಲು ಹೋಗಿದ್ದ ಅಬಕಾರಿ ಪೊಲೀಸರು ಅಶ್ಲೀಲ ಪದಗಳಿಂದ ಒಬ್ಬರನೊಬ್ಬರು ನಿಂದಿಸಿ, ನಡು ಬೀದಿಯಲ್ಲೇ ಬಡಿದಾಡಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಮತ್ತು ಉಪ ಅಧೀಕ್ಷಕ ಶಿವಪ್ಪ ನಡುಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಲಾಕ್‍ಡೌನ್ ಆಗಿರುವುದರಿಂದ ಎಲ್ಲಿಯೂ ಮದ್ಯ ಮಾರುವಂತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರು ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಉಪ ಅಧೀಕ್ಷಕ ಶಿವಪ್ಪ …

Read More »

ಗ್ಯಾಸ್ ಏಜೆನ್ಸಿ ಮಾಲೀಕ ಪೊಲೀಸರು, ಪೌರ ಕಾರ್ಮಿಕರಿಗೆ ಬಿರಿಯಾನಿ ಊಟ ನೀಡುತ್ತಿದ್ದಾರೆ

ಕೋಲಾರ: ಕೊರೊನಾ ಮಹಾಮಾರಿ ಆವರಿಸಿದ್ದರಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಕಳೆದ 21 ದಿನಗಳಿಂದ ನಮ್ಮನ್ನು ಕಾಯುತ್ತಿರುವ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೆ ಕೋಲಾರದಲ್ಲಿ ಬಿರಿಯಾನಿ ವಿತರಣೆ ಮಾಡಲಾಯಿತು. ಕೋಲಾರದ ರೇವತಿ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕರಿಂದ ವಾರಕ್ಕೊಮ್ಮೆ ಬಿರಿಯಾನಿ ವಿತರಣೆ ಮಾಡಲಾಗುತ್ತಿದೆ. ಕೋಲಾರ ನಗರ ಹಾಗೂ ಬಂಗಾರಪೇಟೆ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗೆ ಬಿರಿಯಾನಿ ವಿತರಣೆ ಮಾಡಲಾಯಿತು. ಕಳೆದ ಬುಧವಾರವೂ ಹೀಗೆ ಕರ್ತವ್ಯದಲ್ಲಿದ್ದ ನೂರಾರು ಪೊಲೀಸರಿಗೆ ಬಿರಿಯಾನಿ …

Read More »

ವಿಜಯಪುರದಲ್ಲಿ 686 ಜನರ ಮೇಲೆ ನಿಗಾ, 335ಕ್ಕೂ ಹೆಚ್ಚು ಜನ ಐಸೋಲೇಷನ್‍ಗೆ

ವಿಜಯಪುರ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 686 ಜನರ ಮೇಲೆ ನಿಗಾ ವಹಿಸಲಾಗಿದ್ದು, 335ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‍ ನಲ್ಲಿ ಇಡಲಾಗಿದೆ. ಒಟ್ಟು 362 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 256 ಸ್ಯಾಂಪಲ್ ನೆಗೆಟಿವ್ ಬಂದಿವೆ, 10 ಪಾಸಿಟಿವ್ ಬಂದಿವೆ. ಅಲ್ಲದೆ ಇನ್ನೂ 96 ಪ್ರಕರಣಗಳ ಕುರಿತು ಫಲಿತಾಂಶ ಬರಬೇಕಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇಂದು ಮತ್ತೆ 60 ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗುವದು. ಇಂದಿನ ಮೂರು …

Read More »