Breaking News

ಜಿಲ್ಲೆ

ಪೋಲಿಸ್ ಸ್ಟೇಷನ್ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಸೋಂಕು ಪತ್ತೆ.ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆ ಸೀಲ್ ಡೌನ್.

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸ್ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ ಎಂದು ವಿವರಿಸಿದ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು …

Read More »

ಭಾನುವಾರ ಮದ್ವೆ ಸಮಾರಂಭಕ್ಕೆ ಅವಕಾಶ – ಷರತ್ತುಗಳು ಅನ್ವಯ………….

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತೆಗಟ್ಟಲು ಕೈಗೊಂಡಿದ್ದ ಲಾಕ್ ಡೌನ್ 4ನೇ ಹಂತದ ನಿಯಮಗಳ ಬಗ್ಗೆ ಸರ್ಕಾರ ಸ್ಪಷ್ಠೀಕರಣ ನೀಡಿದೆ. ಮೇ 31 ರವರೆಗೆ ಈ ನಿಯಮಗಳು ಜಾರಿಯಲ್ಲಿರಲಿದೆ. ಪ್ರತಿ ದಿನ ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರ ಕಟ್ಟು ನಿಟ್ಟಾಗಿ ನಿಷೇಧ ಮಾಡಲಾಗಿದೆ. ಭಾನುವಾರ ಹೆಚ್ಚುವರಿಯಾಗಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಪೂರ್ತಿ ದಿನ ಲಾಕ್ ಡೌನ್ ಆಗಿರಲಿದೆ. …

Read More »

ಚಿಕ್ಕೋಡಿ:ಮಹಾಮಾರಿ ಕೊರೊನಾ ವೈರಸ್ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ.

ಬೆಳಗಾವಿ/ಚಿಕ್ಕೋಡಿ: ಮಹಾಮಾರಿ ಕೊರೊನಾ ವೈರಸ್ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ. ಜಿಲ್ಲೆಯ ಕಾಗವಾಡ ತಾಲೂಕಿನ ಮೊಳವಾಡ, ಹುಕ್ಕೇರಿ ತಾಲೂಕಿನ ದೊಂಡಗಟ್ಟಿ ಹಾಗೂ ಮೊದಗಾ ಗ್ರಾಮದವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮೊಳವಾಡ ಗ್ರಾಮದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಹುಕ್ಕೇರಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ದೊಂಡಗಟ್ಟಿ ಹಾಗೂ ಮೊದಗಾ ಗ್ರಾಮದ ತಲಾ ಒಬ್ಬ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಲಾಕ್‍ಡೌನ್‍ಗೂ ಮುನ್ನವೇ ಮೊಳವಾಡ ಗ್ರಾಮದ 15 ಜನರ ತಂಡ …

Read More »

ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ,ಇನ್ಸ್ಪೆಕ್ಟರ್ ನನ್ನು ಅಮಾನತುಗೊಳಿಸಿ: ಡಿಕೆಶಿ ಆಗ್ರಹ

ಬೆಂಗಳೂರು: ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ  ಬಿಜೆಪಿ ಕಾರ್ಯಕರ್ತನೊಬ್ಬ ನೀಡಿರುವ ಸುಳ್ಳು ದೂರು ಆಧರಿಸಿ ಸೋನಿಯಾಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿ ತನ್ನ ಅಧಿಕಾರ‌ ದುರುಪಯೋಗಪಡಿಸಿಕೊಂಡು ಎಫ್​​ಐಆರ್ ದಾಖಲಿಸಿದ್ದಾರೆ. ಕೂಡಲೇ ಆ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು …

Read More »

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಅಂಗಡಿಗಳೂ ತೆರೆಯುವಂತಿಲ್ಲ.

ಬೆಂಗಳೂರು – ರಾಜ್ಯದಲ್ಲಿ ಮೇ 31ರ ವರೆಗೂ 4ನೇ ಹಂತದ ಲಾಕ್ ಡೌನ್ ಮುಂದುವರಿಯಲಿದೆ. ಆದರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಟ್ಟುನಿಟ್ಟಾದ ಲಾಕ್ ಡೌನ್ ಇರುವುದಿಲ್ಲ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಮಾದರಿಯಲ್ಲಿ ಲಾಕ್ ಡೌನ್ ಇರಲಿದೆ. ಎಲ್ಲಾ ಅಂಗಡಿಗಳೂ 7 ಗಂಟೆಗೆ ಬಾಗಿಲು ಹಾಕಬೇಕು. ವಾಹನ ಸಂಚಾರವೂ ಸ್ಥಗಿತವಾಗಬೇಕು. ಜನರೂ ಅನಗತ್ಯವಾಗಿ ಸಂಚರಿಸಬಾರದು. ಇದರ ಜೊತೆಗೆ ಪ್ರತಿ ಭಾನುವಾರ ಸಂಪೂರ್ಣ …

Read More »

ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ:ಕೋಟಾ ಶ್ರೀನಿವಾಸ್ ಪೂಜಾರಿ

ಬೆಂಗಳೂರು: ಇಷ್ಟು ದಿನ ಕೊರೊನಾ ವೈರಸ್ ಭೀತಿಗೆ ಬಂದ್ ಆಗಿದ್ದ ದೇವಲಯಗಳಲ್ಲಿ ಈಗ ಭಕ್ತರಿಗೆ ಆನ್‍ಲೈನ್ ಮೂಲಕ ಹಣ ಪಾವತಿಸಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತಿದೆ. ಮೇ 26, 27ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ ಆಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆನ್‍ಲೈನ್‍ನಲ್ಲಿ ಭಕ್ತರು ದೇವಸ್ಥಾನಗಳಿಗೆ ಹಣ ಪಾವತಿ ಮಾಡಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತದೆ. 15ರಿಂದ 20 …

Read More »

ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆಶಾಕ್ ಕ್ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆ ಶಾಕ್ ನೀಡಿದೆ.ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆಯಾಗಿದೆ ಇಂದು ಪತ್ತೆಯಾಗಿರುವ ಕೊರೋನಾ ಸಂಕಿತರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 125 ಕ್ಕೇ ಏರಿದಂತಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ 8 ಜನ ಅಜ್ಮೇರ್ ದರ್ಗಾ ದರ್ಶನ ಮಾಡಿ ಸಂಪಗಾಂವ ಮರಳಿದ್ದರು ಇವರನ್ನು …

Read More »

ಉಡುಪಿಯಲ್ಲಿ ಕೊರೊನಾ ಆತಂಕ- 950 ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

ಉಡುಪಿ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇಂದು ಫುಲ್ ಆತಂಕದಲ್ಲಿದೆ. ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುವ ಆತಂಕವಿದೆ. ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿಯನ್ನು ಜಿಲ್ಲಾಡಳಿತ ನಿರೀಕ್ಷೆ ಮಾಡುತ್ತಿದೆ. ಡಿಎಚ್‍ಒ ಕೊಡುವ ಮಾಹಿತಿ ಪ್ರಕಾರ ಇಂದು 950ಕ್ಕೂ ಹೆಚ್ಚು ಮಂದಿಯ ವೈದ್ಯಕೀಯ ವರದಿ ಕೈಸೇರಲಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ದುಬೈನಿಂದ ಬಂದಿದ್ದ 49 …

Read More »

ಮಂಗ್ಳೂರಿನಲ್ಲಿ ಸುರಕ್ಷತಾ ಕ್ರಮದೊಂದಿಗೆ ಸಲೂನ್, ಬ್ಯೂಟಿ ಪಾರ್ಲರ್ ಓಪನ್

ಮಂಗಳೂರು: ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಂಗಳೂರಿನಲ್ಲಿ ಇಂದಿನಿಂದ ಸಲೂನ್, ಬ್ಯೂಟಿ ಪಾರ್ಲರ್‍ಗಳು ಕಾರ್ಯ ಆರಂಭಿಸಿವೆ. ಆರೋಗ್ಯ ಇಲಾಖೆ ನಿರ್ದೇಶನದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಂಗಳೂರಿನ ಬಳ್ಳಾಲ್ ಬಾಗ್‍ನ ಜನತಾ ಡಿಲಕ್ಸ್ ಹೋಟೆಲ್ ಬಳಿಯ ಡಿ ನೋವಾ ಯುನಿಸೆಕ್ಸ್ ಹೇರ್ ಸ್ಟುಡಿಯೋದಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಮಾದರಿಯ ಗಾರ್ಡ್ ಬಳಸಿ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ. ಗ್ರಾಹಕರು ಶಾಪ್ ಒಳಗೆ ಬರುವಾದ ಇಡೀ ದೇಹಕ್ಕೆ ಸ್ಯಾನಿಟೈಜರ್ ಸ್ಪ್ರೇ ಮಾಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಜರ್ …

Read More »

ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

ಚಿಕ್ಕಮಗಳೂರು: ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಭಾರೀ ಗಾತ್ರದ ನಾಗರಹಾವಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಗೋಪಾಲಾಚಾರ್ ಅವರು ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಭೂಮಿಯೊಳಗಿದ್ದ ಬೃಹತ್ ಗಾತ್ರದ ನಾಗರಹಾವು ಸಿಲುಕಿಕೊಂಡಿದೆ. ನೇಗಿಲಿಗೆ ಸಿಕ್ಕ ನಾಗರಹಾವು ಬಿಡಿಸಿಕೊಳ್ಳಲಾಗದೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಹಾವಿನ ಸ್ಥಿತಿ ಕಂಡ …

Read More »