ಬೆಂಗಳೂರು: ಕೊರೊನಾ ಲಾಕ್‍ಡೌನ್ ಎಫೆಕ್ಟ್ ಸರ್ಕಾರಿ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಪಾಠ ಕೇಳುವ ಸಮಯದಲ್ಲಿ ಪಾಠದಿಂದ ವಂಚನೆಗೆ ಒಳಗಾಗ್ತಿವೆ. ಖಾಸಗಿ ಶಾಲೆಗಳಿಗೆ ಪ್ರೀತಿ ತೋರಿರುವ ಸರ್ಕಾರ, ಸರ್ಕಾರಿ ಶಾಲೆಗಳನ್ನೆ ಮರೆತಿದೆ. ಮಹಾ ಮಾರಿ ಕೊರೊನಾ ಹೊಡೆತ ಸರ್ಕಾರಿ ಶಾಲಾ ಮಕ್ಕಳಿಗೆ ಎಫೆಕ್ಟ್ ಜೋರಾಗಿಯೇ ಬಿದ್ದಿದೆ. ಮಕ್ಕಳ ಭವಿಷ್ಯದ ಮೇಲೆ ಕರಿನೆರಳು ಮೂಡುವಂತೆ ಮಾಡಿದೆ. ಶೈಕ್ಷಣಿಕ ವರ್ಷ ಪ್ರಾರಂಭ ಮಾಡಿ ಪಾಠ ಕೇಳಬೇಕಿದ್ದ ಮಕ್ಕಳು, ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ …
Read More »ದೈಹಿಕವಾಗಿ ಬಳಸಿಕೊಂಡು ಪ್ರಿಯಕರ ಮೋಸ – ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ
ಬೆಂಗಳೂರು: ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ ನಡೆದಿದೆ. ಚಂದನಾ (29) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇದೇ ಮೇ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕನ ಮೋಸಕ್ಕೆ ಬಲಿಯಾದ ನಟಿ ಸೆಲ್ಫಿ ವಿಡಿಯೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://youtu.be/OYEMtBeW6b0 ಮೃತ ಚಂದನಾ ಮತ್ತು ಪ್ರಿಯಕರ …
Read More »ಕೊರೊನಾ ದೃಢಪಟ್ಟ ಐವರ ಫೋನ್ ಸ್ವಿಚ್ ಆಫ್- ಆತಂಕದಲ್ಲಿ ಉಡುಪಿ ಜನ………….
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಇಂದು ಒಂದೇ ದಿನ 73 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ. ಜಿಲ್ಲೆಯ 73 ಸೋಂಕಿತರ ಪೈಕಿ 68 ಜನರನ್ನು ಪತ್ತೆ ಮಾಡಲಾಗಿದೆ. ಕೋವಿಡ್-19 ದೃಢಪಟ್ಟಿರುವ ಐದು ಮಂದಿ ಫೋನ್ ಸ್ವಿಚ್ ಆಫ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಫೋನ್ ಸ್ವಿಚ್ ಆಫ್ ಮಾಡಿದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ …
Read More »ಒಂದ್ಕಡೆ ಸೈಕ್ಲೋನ್, ಮತ್ತೊಂದು ಕಡೆ ಮುಂಗಾರು- ವರುಣನ ಆರ್ಭಟ……….
ಬೆಂಗಳೂರು: ರಾಜ್ಯದ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ 3 ದಿನ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಿನ್ನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ವರ್ಷಧಾರೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ನಿಸರ್ಗ ಚಂಡಮಾರುತ ಮತ್ತಷ್ಟು ಆತಂಕ ಸೃಷ್ಟಿಸುತ್ತಾ ಅನ್ನೋ ಆತಂಕ ಮನೆ ಮಾಡಿದೆ. ದಾವಣಗೆರೆಯ ಹರಿಹರ ಸೇರಿ ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ದಾವಣಗೆರೆಯ ಹೆಮ್ಮನಬೇತೂರು ಗ್ರಾಮದ ರಸ್ತೆಗಳಲ್ಲಿ ನದಿಯಂತೆ ನೀರು …
Read More »ಭಾನುವಾರ ದಾಖಲೆ ಬರೆದಿದ್ದ ಕೊರೊನಾ ವೈರಸ್ ಇಂದು ಸೆಂಚುರಿ ಬಾರಿಸಿದೆ.
ಬೆಂಗಳೂರು: ಭಾನುವಾರ ದಾಖಲೆ ಬರೆದಿದ್ದ ಕೊರೊನಾ ವೈರಸ್ ಇಂದು ಸೆಂಚುರಿ ಬಾರಿಸಿದೆ. ಇವತ್ತು 187 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 3408ಕ್ಕೇರಿಕೆಯಾಗಿದೆ. ಇಂದು ಪತ್ತೆಯಾದ ಬಹುತೇಕ ಸೋಂಕಿತರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 28, ಕಲಬುರಗಿ 24, ಮಂಡ್ಯ 15, ಉಡುಪಿ 73, ಹಾಸನ 16, ಬೀದರ್ 2, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4, ವಿಜಯಪುರ …
Read More »ಯಾವ ನೌಕರರು ಹೆದರುವ ಅವಶ್ಯಕತೆ ಇಲ್ಲಾ ಎಂದು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ
ಬಳ್ಳಾರಿ: ಕಳೆದ ಎರಡು ತಿಂಗಳ ಲಾಕ್ ಡೌನ್‍ನಿಂದಾಗಿ ಸಾರಿಗೆ ಇಲಾಖೆ ಸಾಕಷ್ಟು ನಷ್ಟ ಅನುಭವಿಸಿದೆ. ಆದರೆ ಆ ನಷ್ಟವನ್ನು ಸರಿದೂಗಿಸಲು ಸದ್ಯಕ್ಕೆ ಕಷ್ಟ ಸಾಧ್ಯ. ಹೀಗಾಗಿ ಸಾರಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಅದು ಶುದ್ಧ ಸುಳ್ಳು. ಯಾವ ನೌಕರರು ಹೆದರುವ ಅವಶ್ಯಕತೆ ಇಲ್ಲಾ ಎಂದು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ …
Read More »ಬಿಜೆಪಿಯಲ್ಲಿ ಯಾವ ಗದ್ದಲವೂ ಇಲ್ಲ, ಗೊಂದಲವೂ …….: ಡಾ.ಪ್ರಭಾಕರ ಕೋರೆ
ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿಕೆ ಬಿಜೆಪಿಯಲ್ಲಿ ಯಾವ ಗದ್ದಲವೂ ಇಲ್ಲ, ಗೊಂದಲವೂ ಇಲ್ಲ ಯಾವುದೇ ಚುನಾವಣೆ ನಡೆದರೂ ದೊಡ್ಡ ಪಕ್ಷದಲ್ಲಿ ಟಿಕೆಟ್‍ಗಾಗಿ ಆಕಾಂಕ್ಷಿಗಳಿರುವುದು ಸಹಜ ಟಿಕೆಟ್ ಕೇಳುವುದು ತಪ್ಪಲ್ಲ, ಅಷ್ಟಕ್ಕೂ ಇನ್ನೂ ರಾಜ್ಯ ಸಭೆ ಚುನಾವಣೆಗೆ ನೋಟಿಫಿಕೇಶನ್ ಕೂಡ ಜಾರಿಗೊಂಡಿಲ್ಲ ಬೆಳಗಾವಿಯಲ್ಲಿ ಹೇಳಿಕೆ ನೀಡಿದ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆಟಿಕೆಟ್ ವಿಷಯದಲ್ಲಿ ಪಕ್ಷ ಮುಕ್ತವಾಗಿ ನಿರ್ಣಯ ಕೈಗೊಳ್ಳುತ್ತೆ ಉಮೇಶ ಕತ್ತಿ ಅವರು ಶಾಸಕ ಮಿತ್ರರನ್ನು ಊಟಕ್ಕೆ ಕರೆದಿದ್ದರು ಅದು …
Read More »ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ
ಘಟಪ್ರಭಾ :ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಮತ್ತು ಘಟಪ್ರಭಾ ಗ್ರಾಮ ಘಟಕ ಅಧ್ಯಕ್ಷರಾದ ಬಸವರಾಜ. ಹುಬ್ಬಳ್ಳಿ ಹಾಗೂ ಅರಬಾಂವಿ ಅಧ್ಯಕ್ಷರಾದ ಆನಂದ.ಪೂಜೇರಿ ಇವರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನಡುವ ಕಾರ್ಯಕ್ರಮ ಮತ್ತು ರೋಗಿಗಳಿಗೆ ಹಾಲು ಬಿಸ್ಕೆಟ್ ಹಂಚಲಾಯಿತ್ತು. ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಪ್ರವೀಣ,ಕರಗಾಂವಿ ಗೋಕಾಕ ತಾಲೂಕಾಧ್ಯಕ್ಷರು ಸಂತೋಷ. ಕಂಡ್ರಿ,ತಾಲೂಕಾಉಪಾಧ್ಯಕ್ಷರು ಮಾರುತಿ.ಚೌಕಾಶಿ ಶಿಂಧಿಕುರಬೇಟ ಗ್ರಾಮದ ಅಧ್ಯಕ್ಷರು …
Read More »ಬೆಳಗಾವಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ- ಲಕ್ಷ್ಮಣ್ ಸವದಿ
ಬಳ್ಳಾರಿ: ಚರ್ಚೆ ಮಾಡಿದ ಮಾತ್ರಕ್ಕೆ ಭಿನ್ನಮತ ಇದೆ ಎಂದಲ್ಲ, ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಅವರ ವೈಯಕ್ತಿಕ ವಿಷಯ. ರಮೇಶ್ ಕತ್ತಿ ತಮ್ಮ ಬೇಡಿಕೆ ಹೇಳಿದ್ದಾರೆ. ಇದರಲ್ಲಿ ತಪ್ಪಿಲ್ಲ. ಬೆಳಗಾವಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ಮೂಲಕ ಬೆಳಗಾವಿ ಶಾಸಕರ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಶಾಸಕರ ಹೈ ಡ್ರಾಮಾ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ …
Read More »ಬಿಬಿಎಂಪಿ ಸಹಾಯಕ ಆಯುಕ್ತರೂ ಮೂವರು ಅಧಿಕಾರಿಗಳಿಗೆ ಕೊರೊನಾ ಸಾಧ್ಯತೆ..!
ಬೆಂಗಳೂರು, ಜೂ.1- ಕೊರೊನಾ ಸೋಂಕಿತ ಬಿಬಿಎಂಪಿ ಸದಸ್ಯನೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ಪಾಲಿಕೆಯ ಸಹಾಯಕ ಆಯುಕ್ತರೊಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಲಿಕೆ ಸದಸ್ಯನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಹಾಯಕ ಆಯುಕ್ತರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಅವರ ಗಂಟಲ ದ್ರವ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಬಿಬಿಎಂಪಿ ಸದಸ್ಯನಿಂದ ಸೋಂಕು ತಗುಲಿರುವ ಅಧಿಕಾರಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಓಡಾಡಿದ್ದರು ಹಾಗೂ ವಾರ್‍ರೂಮ್‍ನಲ್ಲೂ ಕೆಲಸ ಮಾಡಿದ್ದರು. ಅಧಿಕಾರಿಯೊಂದಿಗೆ ಪ್ರಾಥಮಿಕ …
Read More »
Laxmi News 24×7