Breaking News

ಜಿಲ್ಲೆ

ಲೈಟ್ ಆಫ್ ಮಾಡಿ ಕೊರೊನಾ ಸೋಂಕಿತೆಯ ಕೈ ಹಿಡಿದು ಎಳೆದಾಡಿದ ಕಾಮುಕ

ಕೋಲಾರ: ಕೋವಿಡ್-19 ಆಸ್ಪತ್ರೆಗೆ ನುಗ್ಗಿದ ವ್ಯಕ್ತಿ ಕೊರೊನಾ ಸೋಂಕಿತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಭಾನುವಾರ ಘಟನೆ ನಡೆದಿದ್ದು, ಈ ಸಂಬಂಧ ಆಸ್ಪತ್ರೆಯ ರಕ್ಷಣಾಧಿಕಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶ್ವನಾಥಾಚಾರಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ. ಈತ ನಗರದ ಬೆಸ್ತರ ಬೀದಿಯ ಗೆಲ್ಪೇಟ್ ನಿವಾಸಿ ಎಂದು ತಿಳಿದು ಬಂದಿದೆ. ಶ್ರೀನಿವಾಸಪುರ ತಾಲೂಕಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅರೋಗ್ಯ ಸಹಾಯಕನಾಗಿದ್ದಾನೆ ಎಂದು ತಿಳಿದು ಬಂದಿದೆ.   …

Read More »

ಐಎಎಸ್ ಅಧಿಕಾರಿವಿಜಯ್ ಶಂಕರ್ಆತ್ಮಹತ್ಯೆಗೆ ಶರಣಾಗಿದ್ದಾರೆ.

ias sucide

ಬೆಂಗಳೂರು: ಬಹುಕೋಟಿ ಐಎಂಎ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಇಂದು ಬೆಂಗಳೂರಿನ ಜಯನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮಾನತುಗೊಂಡಿದ್ದ ವಿಜಯ್ ಶಂಕರ್ 20 ದಿನಗಳ ಹಿಂದೆ ಕೆಲಸಕ್ಕೆ ಮರಳಿದ್ದರು. ಇಂದು ಬೆಳಗ್ಗೆ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ. 1.5 ಕೋಟಿ ಲಂಚದ ಆರೋಪ: ಐಎಂಎ ಪ್ರಕರಣದಲ್ಲಿ 1.5 ಕೋಟಿ ರೂ. ಲಂಚ …

Read More »

ನೆಮ್ಮದಿಯಿಂದ ಇದ್ದ ಜನರು ಈಗ ಭಯದ ವಾತಾವರಣದಲ್ಲೇ ಜೀವನಸ್ವಯಂಪ್ರೇರಿತವಾಗಿ ಚನ್ನಗಿರಿ ಲಾಕ್‍ಡೌನ್

ದಾವಣಗೆರೆ: ಬೆಣ್ಣೆ ನಗರಿಯ ಕೊರೊನಾ ಸೋಂಕಿನ ಜಾಡು ಇದುವರೆಗೂ ಕಂಡು ಹಿಡಿಯಲು ಆಗುತ್ತಿಲ್ಲ. ಇಷ್ಟು ದಿನ ಕೇವಲ ಸಿಟಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ಅಟ್ಟಹಾಸ ಈಗ ತಾಲೂಕು ಮಟ್ಟಕ್ಕೆ ತಲುಪಿದೆ. ನೆಮ್ಮದಿಯಿಂದ ಇದ್ದ ಜನರು ಈಗ ಭಯದ ವಾತಾವರಣದಲ್ಲೇ ಜೀವನ ನಡೆಸುವಂತಾಗಿದೆ. ಇದಕ್ಕೆ ಅಲ್ಲಿನ ಜನತೆಯೇ ಮದ್ದನ್ನು ಕಂಡುಕೊಂಡಿದ್ದಾರೆ. ದಾವಣಗೆರೆಯಲ್ಲಿ ಕೊರೊನಾರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ದಾವಣಗೆರೆ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಈ ಹಳ್ಳಿಗಳಿಂದ ತಾಲೂಕು …

Read More »

ಕೊರೊನಾ ಭಯದ ಮಧ್ಯೆನಾಳೆಯಿಂದ SSLC ಪರೀಕ್ಷೆ……….

ಬೆಂಗಳೂರು: ಕೊರೊನಾ ಭಯದ ಮಧ್ಯೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆತಂಕ ಶುರುವಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಅಂತ ಶಿಕ್ಷಣ ಇಲಾಖೆ ಹೇಳಿದೆ. ಜೊತೆಗೆ ಸಿದ್ಧತೆ ಕೂಡ ನಡೆಸಿದೆ. ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ಆರ್ಭಟದ ನಡುವೆಯೂ ನಿಗದಿಯಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಿಯೇ ತೀರಲು ಶಿಕ್ಷಣ ಇಲಾಖೆ ಪಣ ತೊಟ್ಟಿದೆ. ನಾಳೆಯಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಲಿದೆ. ಕೊರೊನಾ ಆತಂಕದ ನಡುವೆಯೇ 8.5 ಲಕ್ಷ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. …

Read More »

ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕುತಪಾಸಣೆ ಮಾಡೋ ಸಿಬ್ಬಂದಿಯಂತೂ ಕಾಳಜಿಯನ್ನೆ ವಹಿಸ್ತಿಲ್ಲ…..

ಹಾವೇರಿ: ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ತಗುಲಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಷ್ಕಾಳಜಿ ತೋರುತ್ತಿದೆ. ಅದರಲ್ಲೂ ಈ ಜಿಲ್ಲೆಯಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ ಮಾಡೋ ಸಿಬ್ಬಂದಿಯಂತೂ ಕಾಳಜಿಯನ್ನೆ ವಹಿಸ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿರೋ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ದೃಢಪಟ್ಟಿರೋ ಬಹುತೇಕ ಪ್ರಕರಣಗಳು ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರು. ಹೀಗಿದ್ದರೂ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ …

Read More »

KSRTCಗೂ ಕಾಲಿಟ್ಟ ಕೊರೊನಾ- ಯಲ್ಲಾಪುರದಿಂದ ಬೆಂಗ್ಳೂರಿಗೆ ಬಂದ ಕಂಡಕ್ಟರ್‌ಗೆ ಪಾಸಿಟಿವ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಷ್ಟು ದಿನ ಹೊರ ದೇಶ ಹಾಗೂ ರಾಜ್ಯದಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿತ್ತು. ಆದರೆ ಇದೀಗ ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಬಸ್ ಕಂಡಕ್ಟರ್‌ಗೆ ಪಾಸಿಟಿವ್ ದೃಢವಾಗಿದ್ದು ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಸವಾರಿ ಮಾಡುತ್ತಿರುವ ಚೀನಾ ಮಾರಿ ಈಗ ಕೆಎಸ್‌ಆರ್‌ಟಿಸಿ ಬಸ್ಸಿಗೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದ ನಿರ್ವಾಹಕನಿಗೆ ಕೊರೊನಾ ಸೋಂಕು ದೃಢವಾಗಿದೆ. …

Read More »

14 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಾಗಾಟ ಮಾಡುತ್ತಿದ್ದ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಅಕ್ರಮವಾಗಿ ಸುಮಾರು 14 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಾಗಾಟ ಮಾಡುತ್ತಿದ್ದ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಕೆರಲೆ ಗ್ರಾಮದ ಸುಹಾಸ್ ಗಾಯಕವಾಡ್, ಮಗ ಸಂದೀಪ್ ಸುಹಾಸ್ ಗಾಯಕವಾಡ ಹಾಗೂ ಹಿಂಡಲಗಾ ಗೋಕುಲ ನಗರದ ಮಾರುತಿ ಮುರುಗೇಶ್ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಕ್ರೂಸರ್ ವಾಹನದಲ್ಲಿ ಮಹರಾಷ್ಟ್ರದಿಂದ ಬೆಳಗಾವಿಗೆ ಬೆಳ್ಳಿ ಸಾಗಿಸುತ್ತಿದ್ದರು, ಹತ್ತರಗಿ ಟೋಲ್ ಬಳಿ  ಪೊಲೀಸರು ವಾಹನ ತಪಾಸಣೆ ವೇಳೆ ಅಕ್ರಮವಾಗಿ ಬೆಳ್ಳಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ …

Read More »

ಧಾರವಾಡದಲ್ಲಿ ದ್ವಿಶತಕ ಬಾರಿಸಿದ ಕೊರೊನಾ ಸಂಖ್ಯೆ…………..

ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಧೃಡಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 200ಕ್ಕೆ ತಲುಪಿದೆ. ನವಲಗುಂದ ತಾಲೂಕಿನ ಮೊರಬ ಗ್ರಾಮದ ಮೂವರಿಗೆ ಸೋಂಕು ತಗುಲಿದ್ದು, ಇದೇ ಗ್ರಾಮದಲ್ಲಿ ಈಗಾಗಲೇ 31 ಜನರಿಗೆ ಸೋಂಕು ತಗುಲಿದೆ. ಕಳೆದ ಜೂನ್ 14 ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾದ ದಿನವೇ ಮೃತಪಟ್ಟಿದ್ದ 65 ವರ್ಷದ ವೃದ್ಧ ರೋಗಿ ನಂ.7060 ಯಿಂದ ಇಂದು ಮೂವರಿಗೆ ಕೊರೊನಾ ಧೃಡಪಟ್ಟದೆ. ರೋಗಿ ನಂ.9158, 72 …

Read More »

ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಸಿದ್ದರಾಗುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್,ಸ್ಯಾನಿಟೈಸರ್ ವಿತರಣೆ: ಸತೀಶ ಜಾರಕಿಹೊಳಿ

ಬೆಳಗಾವಿ: ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಸಿದ್ದರಾಗುತ್ತಿರುವ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಸೋಮವಾರ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು. ಯಮಕನಮರಡಿ ಸೇರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಸ್ಕ್‌ ವಿತರಸಿದರು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಇರುವಂತೆ ವಿದ್ಯಾರ್ಥಿಗಳಿಗೆ ಶಾಸಕ ಸತೀಶ ಜಾರಕಿಹೊಳಿ ಅವರು ಕರೆ …

Read More »

ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ………

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಇಂದು ಬೋನಿಗೆ ಬಿದ್ದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಬಳಿಯ ಸೀಗೆಪಾಳ್ಯ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಅನೇಕ ದಿನಗಳಿಂದ ಉಪಟಳ ನೀಡುತ್ತಿದ್ದ ಸುಮಾರು 8 ವರ್ಷದ ಗಂಡು ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನ್ ಇಟ್ಟು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸೆರೆಯಾದ ಸ್ಥಳಕ್ಕೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು …

Read More »