Breaking News

ಜಿಲ್ಲೆ

ಅಥಣಿ ಪೊಲೀಸ್ ಠಾಣೆ ಸೀಲ್ ಡೌನ್……………..

ಅಥಣಿ:  ಮೃತ ಕೊರೊನಾ ಸೋಂಕಿತ ವ್ಯಕ್ತಿ ಕಳೆದ ಕೆಲವು ದಿನಗಳ ಹಿಂದೆ ಅಥಣಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಎಂಬ  ಆಘಾತಕಾರಿ ಮಾಹಿತಿ ಹೊರ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಥಣಿ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಐವರು ಪೊಲೀಸರಿಗೆ ಕ್ವಾರಂಟೈನ್ ಒಳಪಡಿಸಲಾಗಿದೆ. ಸಂಕೋನಟ್ಟಿ ಮೂಲಕ  32 ವರ್ಷದ ವ್ಯಕ್ತಿ.  ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿ ಕೆದಕಿದಾಗ ಆತ ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು …

Read More »

ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸುವುದಾಗಿ ಮಾತುಕೊಟ್ಟರೆ, 5- ಎ ಕಾಲುವೆ ಕಾಮಗಾರಿಯನ್ನು ಮಾಡಿಕೊಡುತ್ತೇನೆ’

ರಾಯಚೂರು: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತಾಪಗೌಡ ಕೂಡಾ ಕಾರಣಿಕರ್ತರು. ‘ಮಸ್ಕಿ ಕ್ಷೇತ್ರದ ರೈತರು ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸುವುದಾಗಿ ಮಾತುಕೊಟ್ಟರೆ, 5- ಎ ಕಾಲುವೆ ಕಾಮಗಾರಿಯನ್ನು ಮಾಡಿಕೊಡುತ್ತೇನೆ’ ಎಂದು ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಮಸ್ಕಿ ತಾಲ್ಲೂಕು ಬುದ್ದಿನ್ನಿ ಗ್ರಾಮದಲ್ಲಿ ಬುಧವಾರ ಕೃಷ್ಣಾ ಜಲಭಾಗ್ಯ ನಿಗಮ ನಿಯಮಿತದ ನಂದವಾಡಗಿ ಏತ ನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.  5-ಎ ಕಾಲುವೆಯು …

Read More »

ಲೋಕಾಯುಕ್ತ ಕಚೇರಿಗೂ ಕೊರೊನಾ ಎಂಟ್ರಿ …………

ಬೆಂಗಳೂರು,ಜು.1- ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಕಚೇರಿಗೂ ಕೊರೊನಾ ಎಂಟ್ರಿ ಕೊಟ್ಟಿದೆ. ವಿಕಾಸಸೌಧದ ಭದ್ರತೆಗೆ ನಿಯೋಜಿಸಿದ್ದ ಪೆÇಲೀಸ್ ಕಾನ್‍ಸ್ಟೆಬಲ್‍ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸೋಂಕಿತ ಕಾನ್‍ಸ್ಟೆಬಲ್ ಲೋಕಾಯುಕ್ತ ಕಚೇರಿಗೂ ಎಂಟ್ರಿ ಕೊಟ್ಟಿದ್ದ. ಹೀಗಾಗಿ ಇಡೀ ಲೋಕಾಯುಕ್ತ ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆ.ಕಚೇರಿ ಸಿಬ್ಬಂದಿಗೆ ಒಂದು ದಿನ ರಜೆ ಕೊಟ್ಟು ಕಳುಹಿಸಲಾಗಿದೆ. ಸೋಂಕಿತ ಕಾನ್‍ಸ್ಟೆಬಲ್ ಜೊತೆ ಸಂಪರ್ಕವಿರಿಸಿಕೊಂಡಿದ್ದ ಲೋಕಾಯುಕ್ತ ಸಿಬ್ಬಂದಿಯಲ್ಲಿ ಆತಂಕ ಎದುರಾಗಿದೆ.

Read More »

ಬೆಚ್ಚಿಬಿದ್ದ ಬೆಂಗಳೂರಿಗರು, 4197 ಮಂದಿಗೆ ಕೊರೊನಾ ಪಾಸಿಟಿವ್….!

ಬೆಂಗಳೂರು, ಜು.1- ಸಿಲಿಕಾನ್ ಸಿಟಿ ಜನರೇ ಎಚ್ಚರ..! ಮನೆ ಬಿಡುವ ಮುನ್ನ ಸ್ವಲ್ಪ ಯೋಚಿಸಿ. ಇಲ್ಲದಿದ್ದರೆ ಮಾರಿಯನ್ನು ನೀವೇ ಮನೆಗೆ ಆಹ್ವಾನಿಸಿದಂತಾಗುತ್ತದೆ. ಏಕೆಂದರೆ ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ 4197 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜುಲೈನಲ್ಲಿ ಸೋಂಕಿತರ ಸಂಖ್ಯೆ 15 ಸಾವಿರ ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನೀವು ಉದಾಸೀನವಾಗಿ ಓಡಾಡುವುದು, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಕಾದಿದೆ ಗ್ರಹಚಾರ… ಕಳೆದ ಮಾರ್ಚ್‍ನಿಂದ …

Read More »

ಗೋವಾದ ಬಿಜೆಪಿ ಶಾಸಕರೊಬ್ಬರಿಗೆ ಕೋವಿಡ್-19 ಸೋಂಕು ತಗಲಿದೆ

ಪಣಜಿ: ಗೋವಾದ ಬಿಜೆಪಿ ಶಾಸಕರೊಬ್ಬರಿಗೆ ಕೋವಿಡ್-19 ಸೋಂಕು ತಗಲಿದೆ ಎಂದು ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕರನ್ನು ಮಾರ್ಗೊವಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನ ವೈರಸ್ ಸೋಂಕು ತಗಲಿರುವುದು ಮಂಗಳವಾರ ನಡೆಸಲಾಗಿರುವ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಕಳೆದ ತಿಂಗಳು ಮಾಜಿ ಆರೋಗ್ಯ ಸಚಿವರಿಗೆ ಕೋವಿಡ್-19ರೋಗ ತಗಲಿದ್ದು, ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ಮಂಗಳವಾರ ತನಕ ಗೋವಾದಲ್ಲಿ 1,315   ಪ್ರಕರಣಗಳು ಪತ್ತೆಯಾಗಿದ್ದು ಮತ್ತು ಮೂರು ಸಾವುಗಳು …

Read More »

ಕೊರೊನಾ ಸೋಂಕಿನಿಂದ ಮೃತಪಟ್ಟ ಟೆಕ್ಕಿಯ ಅಂತ್ಯಸಂಸ್ಕಾರ

ಅಥಣಿ:  ಕೊರೊನಾ ಸೋಂಕಿನಿಂದ ಮೃತಪಟ್ಟ ಟೆಕ್ಕಿಯ ಅಂತ್ಯಸಂಸ್ಕಾರವನ್ನು ತಾಲೂಕಾಡಳಿತ  ಕೋವಿಡ್ ಮಾರ್ಗಸೂಚಿ ಪ್ರಕಾರ ನಿನ್ನೆ ತಡರಾತ್ರಿ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನೆರವೇರಿಸಿದೆ. ಲಂಡನ್ ನಲ್ಲಿ ನೆಲೆಸಿದ್ದ  ಖಾಸಗಿ ಕಂಪನಿಲ್ಲಿ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ ಟಿಕ್ಕಿ. ಜನೇವರಿ 15 ರಂದು ಅಥಣಿಗೆ ಮರಳಿದ್ದ . ಲಾಕ್ ಡೌನ್  ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ ಮೂಲಕ ಕೆಲಸ ಮಾಡುತ್ತಿದ್ದ. ತೀವ್ರ ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ …

Read More »

ಕಸ ಬಿಸಾಡುವಂತೆ ಗುಂಡಿಗೆ ಶವ ಬಿಸಾಕಿದ ಜೆಸಿಬಿ!ನಿನ್ನೆ ಬಳ್ಳಾರಿ, ಇಂದು ದಾವಣಗೆರೆ

ದಾವಣಗೆರೆ: ಸತ್ತ ಮೇಲೆ ನೂರಾರು ಜನ ಮೆರವಣಿಗೆ ಮಾಡಿ ಕಳುಹಿಸಿಕೊಡಬೇಕು ಎಂದು ಪ್ರತಿಯೊಬ್ಬರದ್ದು ಕೊನೆ ಆಸೆಯಾಗಿರುತ್ತೆ. ಆದರೆ ಈ ಕೋವಿಡ್ ಬಂದು ಸಾವನ್ನಪ್ಪಿದರೆ ಮಾತ್ರ ಯಾರೂ ಕೂಡ ಊಹಿಸಲಾಗದಷ್ಟೆ ಮಟ್ಟಿಗೆ ನಮ್ಮ ಶವಸಂಸ್ಕಾರ ಇರುತ್ತೆ. ಹೌದು. ದಾವಣಗೆರೆಯ ಚನ್ನಗಿರಿ ತಾಲೂಕಿನ 56 ವರ್ಷದ ಮಹಿಳೆಯೊಬ್ಬರು ಕಳೆದ 17 ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದು ಕೂಡ ಅಂದೇ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ …

Read More »

ಅಟ್ಟಾಡಿಸಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ………..

ಬೆಂಗಳೂರು: ವ್ಯಕ್ತಿಯೊಬ್ಬ ರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ರಾಜಗೋಪಾಲನಗರದ ಲವಕುಶನಗರದಲ್ಲಿ ನಡೆದಿದೆ. ಹೇಮಾ ಕೊಲೆಯಾದ ದುರ್ದೈವಿ. ಆರೋಪಿ ಪತಿ ಮಂಜುನಾಥ್ ರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಕುಣಿಗಲ್ ಮೂಲದ ಹೇಮಾಗೆ ಆರೋಪಿ ಮಂಜುನಾಥ್ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೃತ ಹೇಮಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳವಾರ ಸಂಜೆ ಹೇಮಾ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಳು. ಅದೇ ವಿಚಾರವಾಗಿ …

Read More »

ಸರ್ಕಾರ ಲಾಕ್‍ಡೌನ್ ಮಾಡಲಿಲ್ಲ ಅಂದರೂ ನಾವೇ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುತ್ತೇವೆ

ಬೆಂಗಳೂರು: ಕೊರೊನಾ ಕಾಟಕ್ಕೆ ಬೆಂಗಳೂರು ನಲುಗಿ ಹೋಗಿದೆ. ಸರ್ಕಾರ ಲಾಕ್‍ಡೌನ್ ಮಾಡಲಿಲ್ಲ ಅಂದರೂ ನಾವೇ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುತ್ತೇವೆ ಅಂತ ಬೆಂಗಳೂರಿನ ಕಮರ್ಷಿಯಲ್ ಏರಿಯಾದ ಜನ ಮುಂದಾಗಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ದಿನಕ್ಕೆ ನಾಲ್ಕೈದು ಪ್ರಕರಣಗಳು ಬರುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಸಡಿಲಿಕೆ ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದ ಕೊರೊನಾ ಈಗ ದಿನಕ್ಕೆ 800ರ ಬಳಿ ಬಂದಿದೆ. ಹೀಗೆ ಹೋದರೆ ಬೆಂಗಳೂರು ಮತ್ತೊಂದು ಮುಂಬೈ ನಗರ ಆಗುವುದರಲ್ಲಿ ಅನುಮಾನವೇ ಇಲ್ಲ. …

Read More »

ಭಿಕ್ಷೆ ಬೇಡಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ…………

ದಾವಣಗೆರೆ: ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ ಹೌಸ್ ಸರ್ಜನ್‍ಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು 16 ತಿಂಗಳ ಶಿಷ್ಯ ವೇತನ ಬಿಡುಗಡೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ನಡೆಸುತ್ತಿರುವ ಪ್ರತಿಭಟನೆ 2 ದಿನ ಪೂರೈಸಿದೆ. ಆದರೆ ಪ್ರತಿಭಟನೆ ಹಿಂಪಡೆಯದಿದರೆ ಲೈಸೆನ್ಸ್ ರದ್ದು ಮಾಡುವುದಾಗಿ ಎಸ್‍ಪಿ, ತಹಶೀಲ್ದಾರ್ ಬೆದರಿಕೆ ಹಾಕಿದ್ದು, ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆ ಬಗೆಹರಿಸುವ ಅಶ್ವಾಸನೆ ನೀಡಿದರು. ಆದರೆ ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಲ್ಲ. ಬದಲಿಗೆ ಸಾರ್ವಜನಿಕವಾಗಿ …

Read More »