ಬೆಳಗಾವಿ : ಕೆಎಲ್ ಇ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಹಂಜಿ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ಪ್ರತಿಷ್ಠಿತ ಉದ್ಯಮಿಯಾಗಿರುವ ಹಂಜಿ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೊಡುಗೆ ನೀಡಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆತ್ಮೀಯ ಸ್ನೇಹಿತ ಹಂಜಿ ನಮ್ಮನಲ್ಲಿದ್ದು, ಪ್ರತಿಭಾವಂತ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸತೀಶ …
Read More »ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಸೇರಿ 7 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸ್ ಪಿ ಸೇರಿದಂತೆ 7 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕದ ಸಿಂಗಂ ಖ್ಯಾತಿಯ ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್, ಎಸ್ ಪಿ ಸೀಮಂತ್ ಕುಮಾರ್ ಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಕಚೇರಿಯನ್ನು ಒಂದು ವಾರ ಕಾಲ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಸ್ ಪಿ ಪಿಎ …
Read More »ಕೋವಿಡ್ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ಜನಜಾಗೃತಿ
ಧಾರವಾಡ: ಕೋವಿಡ್ ಸರಪಳಿ ತುಂಡರಿಸಲು ಜನಜಾಗೃತಿಯೇ ಮುಖ್ಯವಾಗಿರುವದರಿಂದ ಜಿಲ್ಲಾಡಳಿತ ಹಾಗೂ ಅರಣ್ಯ ,ಅಬಕಾರಿ ಇಲಾಖೆಯ ಸಹಯೋಗದಲ್ಲಿ ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಜನಜಾಗೃತಿ ಚಟುವಟಿಕೆಗಳು ಜರುಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಕಲಕೇರಿ, ದೇವಗಿರಿ ಹಾಗೂ ಬೆಣಚಿ ಗ್ರಾಮಗಳ ಅರಣ್ಯ ವಲಯ ಪ್ರದೇಶಗಳಲ್ಲಿ ಕೋವಿಡ್ ಜಾಗೃತಿ ಚಟುವಟಿಕೆಗಳನ್ನು ನಡೆಸಿದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಬಳಸುವುದು, ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮಹತ್ವವನ್ನು ಗ್ರಾಮಸ್ಥರಿಗೆ …
Read More »ಆಯಂಬ್ಯುಲೆನ್ಸ್ ಸಿಗದೇ ಒಂದೂವರೆ ಗಂಟೆ ಕಾಲ ಬೀದಿಯಲ್ಲೇ ಜ್ವರದಿಂದ ತೀವ್ರವಾಗಿ ನರಳಿದ ಘಟನೆ
ವಿಜಯಪುರ: ಜಿಲ್ಲೆಯ ಆಲಮೇಲದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಆಯಂಬ್ಯುಲೆನ್ಸ್ ಸಿಗದೇ ಒಂದೂವರೆ ಗಂಟೆ ಕಾಲ ಬೀದಿಯಲ್ಲೇ ಜ್ವರದಿಂದ ತೀವ್ರವಾಗಿ ನರಳಿದ ಘಟನೆ ನಡೆದಿದೆ. ಶಂಕರ್ ಜಂಬಗಿ(50) ಜ್ವರದಿಂದ ನರಳಾಡಿದ ರೋಗಿ. ಸ್ಥಳೀಯವಾಗಿ ಚಿಕಿತ್ಸೆ ಸಿಗದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಲು ಆಯಂಬ್ಯುಲೆನ್ಸ್ಗಾಗಿ ಕಾದರೂ ಒಂದೂವರೆ ಗಂಟೆಗಳ ಕಾಲ ಆಯಂಬುಲೆನ್ಸ್ ಬಂದಿಲ್ಲ. ನಂತರ ಸ್ಥಳೀಯ ಯುವಕರು ಕರೆಮಾಡಿ ಆಯಂಬುಲೆನ್ಸ್ ಕರೆಸಿ ಪತ್ನಿ ಶೋಭಾ ಜೊತೆ ರೋಗಿಯನ್ನ ಸಿಂದಗಿ …
Read More »ಗೋಕಾಕದಲ್ಲಿ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟ್ರೀಟ್ಮೆಂಟ್ ನೀಡಲು ಸಿದ್ಧರಾಗುತ್ತಿದ್ದಾರೆ.
ಗೋಕಾಕ : ದೇಶ ಹಾಗೂ ರಾಜ್ಯಾದ್ಯಂತ ಉಲ್ಬಣಗೊಂಡಿರುವ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಗೋಕಾಕ ತಾಲೂಕಿನ ಸ್ಥಳೀಯ ಕೆಲ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಐಸೋಲೇಶನ್ ವಾರ್ಡ್ಗಳನ್ನು ಸ್ಥಾಪಸಿ ಚಿಕಿತ್ಸೆ ನೀಡಬೇಕು ಎಂದು ಸರಕಾರದ ಆದೇಶವಿದೆ.1)ಆರೋಗ್ಯ ಆಧಾರ್ ಹಾಸ್ಪಿಟಲ ಗೋಕಾಕ 2)ಘೋಡಗೇರಿ ಆಸ್ಪತ್ರೆ ಗೋಕಾಕ 3)ಅಥರ್ವ ಅಥೋ ಹಾಸ್ಪಿಟಲ್ ಗೋಕಾಕ 4)ಕಪ್ಪಲಗುದ್ದಿ ಆಸ್ಪತ್ರೆ ಗೋಕಾಕ 5)ಗಂಗಾ ಹಾಸ್ಪಿಟಲ್ ಗೋಕಾಕ 6)ಜಯರತ್ನ ಹಾಸ್ಪಿಟಲ್ ಗೋಕಾಕ 7)ಕೆ ಎಲ್ ಇ ಹಾಸ್ಪಿಟಲ್ ಗೋಕಾಕ …
Read More »ಕಲಬುರಗಿಲಾಕ್‍ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಆದೇಶ
ಕಲಬುರಗಿ: ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜು.14 ರಿಂದ 20 ವರೆಗೆ ಕಲಬುರಗಿ ನಗರ & ಜಿಲ್ಲೆಯ ನಗರ-ಸ್ಥಳೀಯ ಸಂಸ್ಥೆಗಳ ಪ್ರದೇಶದಲ್ಲಿ ವಿಧಿಸಲಾಗಿದ್ದ ಸಂಪೂರ್ಣ ಲಾಕ್‍ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಆದೇಶ ಹೊರಡಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆದು ಮುಚ್ಚತಕ್ಕದು. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಈ ಸಮಯದ ನಿರ್ಬಂಧ …
Read More »ಡಿಸಿಎಂ ಕ್ಷೇತ್ರದ ‘ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ‘ಗೆ ಆರ್ಥಿಕ ಸಂಕಷ್ಟ: ಕ್ಯಾರೇ ಎನ್ನದ ಗೋವಿಂದ ಕಾರಜೋಳ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳದ ತಿಮ್ಮಾಪುರ ಬಳಿಯಿರುವ ಜಿಲ್ಲೆಯ ಏಕೈಕ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಈ ಬೆನ್ನಲ್ಲೇ ಇದೀಗ ಅಧ್ಯಕ್ಷ ರಾಮಣ್ಣ ತಳೇವಾಡ ಸೇರಿದಂತೆ 14ಮಂದಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳದ ತಿಮ್ಮಾಪುರ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದೆ. ಸಕ್ಕರೆ ಕಾರ್ಖಾನೆ ಸಬಲೀಕರಣಕ್ಕೆ ಮುಂದಾಗದೇ ರಾಜೀನಾಮೆ ಕೊಡುವ ಮೂಲಕ …
Read More »ಪಿಎಸ್‍ಎಸ್‍ಕೆಯಿಂದ ಕಬ್ಬು ತೆಗೆದುಕೊಂಡು ಹೋಗದಂತೆ ನಿರ್ಬಂಧ ಹಾಕುವಂತೆ ಮುರುಗೇಶ್ ನಿರಾಣಿ ಮನವಿ
ಮಂಡ್ಯ ಜಿಲ್ಲೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಮೀಸಲಿಟ್ಟಿರುವ ಕಬ್ಬನ್ನು ಇತರರು ತೆಗೆದುಕೊಂಡು ಹೋಗದಂತೆ ತಕ್ಷಣವೇ ಜಿಲ್ಲಾಡಳಿತ ನಿರ್ಬಂಧ ಹಾಕಬೇಕೆಂದು ಮಾಜಿ ಶಾಸಕ ಹಾಗೂ ನಿರಾಣಿ ಶುಗರ್ಸ್ ಲಿಮಿಟೆಡ್‍ನ ಅಧ್ಯಕ್ಷ ಮುರುಗೇಶ್ ನಿರಾಣಿ ಒತ್ತಾಯ ಮಾಡಿದ್ದಾರೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ವ್ಯಾಪ್ತಿಯ ಕಬ್ಬನ್ನು ಜಿಲ್ಲಾಡಳಿತ ಮೀಸಲಿಟ್ಟಿದೆ.ಆದರೆ ನಮಗೆ ಮೀಸಲಿಟ್ಟಿರುವ ವ್ಯಾಪ್ತಿಯಿಂದ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ತೆಗೆದುಕೊಂಡು ಹೋಗುತ್ತಿವೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. …
Read More »ರಾತ್ರಿ ರಕ್ತ ತರುವಂತೆ ಹೇಳಿ ಬೆಳಗ್ಗೆ ಸಾವಿನ ಸುದ್ದಿ ತಿಳಿಸಿದ್ರು’- ವೈದ್ಯರ ವಿರುದ್ಧ ಕಿಡಿ
ವಿಜಯಪುರ: ಹೆರಿಗೆ ಸಮಯದಲ್ಲಿ ತಾಯಿ-ಮಗು ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆಗೆಂದು ಕವಿತಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ. ತಡರಾತ್ರಿ ರಕ್ತ ತೆಗೆದುಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಆದರೆ ಬೆಳಗ್ಗೆ ಸಾವಿನ ವಿಚಾರವನ್ನೇ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಹಾಗೂ ಮಗುವಿನ …
Read More »ಕನ್ನಡದ ಹಿರಿಯ ಕಲಾವಿದೆ ಬಿ.ಶಾಂತಮ್ಮ (95) ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಮೈಸೂರು: ಕನ್ನಡದ ಹಿರಿಯ ಕಲಾವಿದೆ ಬಿ.ಶಾಂತಮ್ಮ (95) ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಇಂದು ಸಂಜೆ ಸುಮಾರು 5.45ಕ್ಕೆ ಶಾಂತಮ್ಮ ನಿಧನರಾಗಿದ್ದಾರೆ. ಸುಮಾರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಾಂತಮ್ಮ ಅವರು ಮೂಲತಃ ಚೆನ್ನೈ ನಿವಾಸಿ. ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಗಳೂರಿನಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದರು ಶಾಂತಮ್ಮ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಪುತ್ರಿ ಸುಮಾ ತಾಯಿಯನ್ನು ಮೈಸೂರಿನಲ್ಲಿ ತಮ್ಮ …
Read More »
Laxmi News 24×7