Breaking News

ಜಿಲ್ಲೆ

ಆಲ್ ಇಂಡಿಯಾ ಕ್ರಿಕೆಟ್ ಟೂರ್ನಿ 12ರಿಂದ

ಬೆಳಗಾವಿ: ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಮುರುಘೇಂದ್ರಗೌಡ ಫೌಂಡೇಷನ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಪಟುಗಳನ್ನು ಒಳಗೊಂಡಿರುವ ‘ಆಲ್ ಇಂಡಿಯಾ ಓಪನ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ-26’  ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಮುರೇಂದ್ರಗೌಡ ಪಾಟೀಲ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ ಮೈದಾನದಲ್ಲಿ ಫೆ.12ರಿಂದ ಫೆ.22ರ ವರೆಗೆ 11 ದಿನಗಳ ಕಾಲ ನಡೆಯಲಿರುವ  ಟೂರ್ನಿಯಲ್ಲಿ 48 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಕರ್ನಾಟಕ ಮಾತ್ರವಲ್ಲದೆ ಉತ್ತರಪ್ರದೇಶ, …

Read More »

belagavi-ರಾಮಕೃಷ್ಣ ಮಿಷನ್ ಆಶ್ರಮದ ವಾರ್ಷಿಕೋತ್ಸವ

ಬೆಳಗಾವಿ : ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ವಾರ್ಷಿಕೋತ್ಸವ ಫೆ.6ರಿಂದ 8ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರ(ಫೆ.6) ಬೆಳಗ್ಗೆ 10ಕ್ಕೆ ವ್ಯಕ್ತಿತ್ವ ನಿರ್ಮಾಣ ಕುರಿತ ಯುವ ಸಮ್ಮೇಳನದಲ್ಲಿ ‘ನಮ್ಮ ಆಂತರಿಕ ಸಾಮರ್ಥ್ಯ ಅನ್ವೇಷಣೆ’ ಕುರಿತು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ, ‘ವ್ಯಕ್ತಿತ್ವ ನಿರ್ಮಾಣದಲ್ಲಿ ಧ್ಯಾನದ ಪ್ರಾಮುಖ್ಯ ಮತ್ತು ಅಭ್ಯಾಸ ವಿಧಾನ’ ಕುರಿತು ಸ್ವಾಮಿ ಮೋಕ್ಷಾತ್ಮನಾನಂದ, ‘ನವತಾರುಣ್ಯದ ಆಶಾಕಿರಣ ಸ್ವಾಮಿ ವಿವೇಕಾನಂದ’ ವಿಷಯವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು. ನಂತರ …

Read More »

ಬ್ಯಾಲೆಟ್ ಪೇಪರ್​​ನಲ್ಲೇ ಗ್ರಾಮ ಪಂಚಾಯ್ತಿ ಎಲೆಕ್ಷನ್: ಸಚಿವ ಸಂಪುಟ ಮಹತ್ವದ ನಿರ್ಧಾರ

ಬೆಂಗಳೂರು:ಕರ್ನಾಟಕದ ಬಹುತೇಕ ಗ್ರಾಮ ಪಂಚಾಯಿತಿಗಳ   ಅಧಿಕಾರಾವಧಿ ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯಲಿದೆ. ಹೀಗಾಗಿ ಚುನಾವಣೆ ನಡೆಯುವವರೆಗೂ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಆದೇಶ ಹೊರಡಿಸಿದೆ. ಮತ್ತೊಂದೆಡೆ  2026ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ  ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪೂರ್ವಸಿದ್ಧತೆಗೆ ನಿರ್ದೇಶನ ನೀಡಲಾಗಿದೆ. ಈ ಎಲ್ಲಾ ಬೆಳವಣಿಗಗಳ ನಡುವೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಇಂದಿನ ಸಚಿವ ಸಂಪುಟ  ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು (ಫೆಬ್ರವರಿ 05) ಸಿದ್ದರಾಮಯ್ಯ …

Read More »

ಬಾಗಲಕೋಟೆ | ಅತಿಥಿ ಉಪನ್ಯಾಸಕರ ವಿರುದ್ಧ ನಕಲಿ PhD ಪ್ರಮಾಣ ಪತ್ರ ಸಲ್ಲಿಕೆ ಆರೋಪ

ಬಾಗಲಕೋಟೆ: ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ವಿರುದ್ಧ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ  ಸಲ್ಲಿಸಿ ನೌಕರಿ ಪಡೆದ ಆರೋಪ ಕೇಳಿಬಂದಿದೆ. ಬಾಗಲಕೋಟೆ  ಜಿಲ್ಲೆಯಲ್ಲಿರುವ 18 ಸರ್ಕಾರಿ ಕಾಲೇಜಗಳಲ್ಲಿ 100ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅದ್ರಲ್ಲಿ ಶೇ.60 ರಷ್ಟು ಅತಿಥಿ ಉಪನ್ಯಾಸಕರು ಹೊರ ರಾಜ್ಯದಿಂದ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಪಡೆದು ಕೆಲಸ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಒಂದೊಂದು ಪ್ರಮಾಣಪತ್ರಕ್ಕೆ 3-4 ಲಕ್ಷ ಹಣ …

Read More »

ಖಾಸಗಿ ಆಸ್ಪತ್ರೆ ಮುಂದೆ ಕಸ ಸುರಿದು ಬಿಸಿ ಮುಟ್ಟಿಸಿದ ಬಳ್ಳಾರಿ ಪಾಲಿಕೆ‌ ಸಿಬ್ಬಂದಿ

ಬಳ್ಳಾರಿ: ಖಾಸಗಿ ಅಸ್ಪತ್ರೆಯವರಿಗೆ ಬುದ್ದಿ ಕಲಿಸಲು ಮಹಾನಗರ ಬಳ್ಳಾರಿ  ಪಾಲಿಕೆ ಸಿಬ್ಬಂದಿ ಕಸವನ್ನು ತಂದು ಅಸ್ಪತ್ರೆ ಮುಂದೆ ಸುರಿದು ಬಿಸಿ ಮುಟ್ಟಿಸಿದ್ದಾರೆ. ಬಳ್ಳಾರಿಯ ಪಾರ್ವತಿ ನಗರದ ಪದ್ಮಾವತಿ ಕಿಡ್ನಿಕೇರ್ ಸೆಂಟರ್ ಮತ್ತು ಮೋಕಾ ರಸ್ತೆಯ ದ್ವಾರಕಾ ಆಸ್ಪತ್ರೆ ಮುಂದೆ ಪಾಲಿಕೆ ಸಿಬ್ಬಂದಿ ವಾಹನದಲ್ಲಿ ಕಸ ತಂದು ಸುರಿದಿದ್ದಾರೆ. ಪದ್ಮಾವತಿ ಕಿಡ್ನಿಕೇರ್ ಆಸ್ಪತ್ರೆ ಮತ್ತು ದ್ವಾರಕ ಅಸ್ಪತ್ರೆ ಸಿಬ್ಬಂದಿ ಮೆಡಿಕಲ್ ‌ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಈ ಎರಡು ಅಸ್ಪತ್ರೆಗೆ ಪಾಲಿಕೆ ನೋಟಿಸ್ …

Read More »

ಮುಸ್ಲಿಂ ಮಹಿಳೆ ಜೊತೆ ಇದ್ದಿದ್ದಕ್ಕೆ ಹಿಂದೂ ಯುವಕನಿಗೆ ಥಳಿತ

ಕೊಪ್ಪಳ: ಮುಸ್ಲಿಂ ಮಹಿಳೆ ಜೊತೆ ಹಿಂದೂ ಯುವಕನನ್ನು ನೋಡಿದ ಮುಸ್ಲಿಂ ಯುವಕರು ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ  ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ವೆಂಕಟೇಶ್ ಎನ್ನುವ ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದೆ. ಬಸಾಪಟ್ಟಣ ಗ್ರಾಮದ ಅಜ್ಮೀರ್, ಆಫೀಯಾ ದಂಪತಿ ಜಗಳ ಮಾಡುತ್ತಿದ್ದರು. ಈ ವೇಳೆ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ ಇಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಗಂಡನ ಜೊತೆ ಜಗಳವಾಡಿ …

Read More »

ತತ್ವ ಶ್ರೀಮಂತಿಕೆ ವೀರಶೈವ ಸಮಾಜದ ಶಕ್ತಿ : ಅನ್ನದಾನೀಶ್ವರ ಮಹಾಸ್ವಾಮಿಗಳು

ಬಾಗಲಕೋಟೆ: ವೀರಶೈವ-ಲಿಂಗಾಯತ ಎರಡು ಒಂದೆಯಾಗಿದ್ದು ತತ್ವ ಶ್ರೀಮಂತಿಕೆ ವೀರಶೈವ ಸಮಾಜದ ಶಕ್ತಿಯಾಗಿದೆ,ಲಿಂಗದ ಪ್ರಾಣವೇ ಜಂಗಮರು ಎಂದು ಸಾರುವ ಮೂಲಕ ಎಲ್ಲರನ್ನು ಏಕತೆಯಿಂದ ನೋಡುವ ಏಕೈಕ ಧರ್ಮವಾಗಿದೆ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠದ ಮನ್ನಿರಂಜನ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ನಿಮಿತ್ಯ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ 159 ನೆಯ …

Read More »

ಬೆಳಗಾವಿ : ಪತ್ರಕರ್ತರ ಸೋಗಿನಲ್ಲಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ; ಮೂವರ ಹೆಡೆಮುರಿ ಕಟ್ಟಿದ ಪೊಲೀಸ್…!

ಬೆಳಗಾವಿ : ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳ ವೀಡಿಯೋ ಮಾಡಿಕೊಂಡು ಸಮಾಜಿಕ ಜಾಲತಾಣ ಸೇರಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದಾಗಿ ಹೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದ್ದು ಈ‌ ಕುರಿತು ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸರಕಾರಿ ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ಹಿಡನ್ ಕ್ಯಾಮರಾ ಬಳಸಿ ಬ್ಲ್ಯಾಕ್ ಮೇಲೆ ಮಾಡಿದ್ದ ಮೂವರು ಪತ್ರಕರ್ತರ ಸೋಗಿನಲ್ಲಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. …

Read More »

ಬೆಳಗಾವಿ:ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಹತ್ಯೆ

ಬೆಳಗಾವಿ : ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರಕ್ಕೆ ನಾಲ್ವರು ಯುವಕರು ಅಂಗಡಿ ಮಾಲೀಕನನ್ನು ಥಳಿಸಿರುವುದರಿಂದ ಗಂಭೀರವಾಗಿ ಗಾಯಗೊಂಡ ಅಂಗಡಿ ಮಾಲೀಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೊಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ವ್ಯಕ್ತಿ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22) ನಿಖಿಲ್ ಮಹೇಶ್‌ ಚೌಗಲೆ (22) ವಿವೇಕ್ ರಾಜೇಂದ್ರ ಚೌಗುಲೆ (22) ಮತ್ತು ಶ್ರೀಧ‌ರ್ ರತನ ಪಾಟಿಲ್ (21) ಹಲ್ಲೆ ಮಾಡಿದ ಆರೋಪಿಗಳು. …

Read More »

ತಾಯಿ ಜೊತೆ ಅಕ್ರಮ ಸಂಭಂಧ… ನಡು ರಸ್ತೆಯಲ್ಲಿ ಕೊಂದ ಮಗ…ಶವದ ಬೆನ್ನ ಮೇಲೆ ಕಾಲಿಟ್ಟು ಪೊಲೀಸರಿಗಾಗಿ ಕಾದ ಹಂತಕ

ತಾಯಿ ಜೊತೆ ಅನೈತಿಕ ಸಂಭಂಧ ಇಟ್ಟುಕೊಂಡಿದ್ದ ಪ್ರಿಯಕರನನ್ನ ಮಗ ನಡು ರಸ್ತೆಯಲ್ಲಿ ಕೊಚ್ಚಿ ಕೊಂದು ಶವದ ಬೆನ್ನ ಮೇಲೆ ಕಾಲಿಟ್ಟು ಪೊಲೀಸರಿಗಾಗಿ ಕಾದು ಶರಣಾದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಬರೋಬ್ಬರಿ 16 ಬಾರಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದ್ದಾನೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಕೊಲೆಯಾದ ವ್ಯಕ್ತಿ. ಈರಯ್ಯ ಮಠಪತಿ ಕೊಲೆ ಆರೋಪಿ.ನಿನ್ನೆ ಸಂಜೆ ರಸ್ತೆ ಮಧ್ಯೆ ಬರುತ್ತಿದ್ದ ಬಸಪ್ಪ ಹೊಸಮನಿಯನ್ನ …

Read More »