Home / ಜಿಲ್ಲೆ / ದಕ್ಷಿಣ ಕನ್ನಡ (page 4)

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ, ಉಡುಪಿಯಲ್ಲಿ ರವಿವಾರ ರಂಜಾನ್ ಹಬ್ಬ……….

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾನುವಾರ ರಂಜಾನ್ ಆಚರಿಸುವಂತೆ ಖಾಝಿಗಳು ಕರೆ ನೀಡಿದ್ದಾರೆ. ಮಂಗಳೂರಿನ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿಯ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ತಮ್ಮ ಜಿಲ್ಲೆಯ ಜನತೆಗೆ ಭಾನುವಾರ ಆಚರಿಸುವಂತೆ ಹೇಳಿದ್ದಾರೆ. ಇಂದು ರಾತ್ರಿ ಪ್ರಥಮ ಚಂದ್ರ ದರ್ಶನ ಎಲ್ಲೂ ಆಗಿಲ್ಲ. ಸಾಂದರ್ಭಿಕ ಚಿತ್ರ ಭಾನುವಾರವೇ ಈದುಲ್ ಫಿತ್ರ ಆಚರಿಸುವ ಸಾಧ್ಯತೆಗಳು ಹೆಚ್ಚಿದ್ದು, ಆದ್ರೆ ಸರ್ಕಾರ ಪ್ರತಿ ರವಿವಾರ ಸಂಪೂರ್ಣ ಲಾಕ್‍ಡೌನ್ …

Read More »

ಮಂಗ್ಳೂರಿನಲ್ಲಿ ಸುರಕ್ಷತಾ ಕ್ರಮದೊಂದಿಗೆ ಸಲೂನ್, ಬ್ಯೂಟಿ ಪಾರ್ಲರ್ ಓಪನ್

ಮಂಗಳೂರು: ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಂಗಳೂರಿನಲ್ಲಿ ಇಂದಿನಿಂದ ಸಲೂನ್, ಬ್ಯೂಟಿ ಪಾರ್ಲರ್‍ಗಳು ಕಾರ್ಯ ಆರಂಭಿಸಿವೆ. ಆರೋಗ್ಯ ಇಲಾಖೆ ನಿರ್ದೇಶನದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಂಗಳೂರಿನ ಬಳ್ಳಾಲ್ ಬಾಗ್‍ನ ಜನತಾ ಡಿಲಕ್ಸ್ ಹೋಟೆಲ್ ಬಳಿಯ ಡಿ ನೋವಾ ಯುನಿಸೆಕ್ಸ್ ಹೇರ್ ಸ್ಟುಡಿಯೋದಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಮಾದರಿಯ ಗಾರ್ಡ್ ಬಳಸಿ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ. ಗ್ರಾಹಕರು ಶಾಪ್ ಒಳಗೆ ಬರುವಾದ ಇಡೀ ದೇಹಕ್ಕೆ ಸ್ಯಾನಿಟೈಜರ್ ಸ್ಪ್ರೇ ಮಾಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಜರ್ …

Read More »

ಟೆಸ್ಟ್ ಮಾಡಿಸದೇ ಮನೆಗೆ ಬರ್ಬೇಡ’- ಮಗನನ್ನೇ ಹೊರಗಿಟ್ಟ ಪೋಷಕರು

ಮಂಗಳೂರು: ಹೊಸದಾಗಿ ಮಂಗಳೂರಿನಲ್ಲಿ ದೃಢಪಟ್ಟಿರುವ ರೋಗಿ-1094ನ ಕೊರೊನಾ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ಹಾಗೂ ಈತನ ಟ್ರಾವಲ್ ಹಿಸ್ಟರಿ ಭಯಾನಕವಾಗಿದೆ. ಮಂಗಳೂರಿನ ಹೊರವಲಯದ ಜೆಪ್ಪುಪಟ್ನದ 31 ವರ್ಷದ ಸೋಂಕಿತ ಕಳೆದು 10 ದಿನಗಳ ಹಿಂದೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದಾನೆ. ಲಾಕ್‍ಡೌನ್ ಇದ್ದರೂ ಕಾಲ್ನಡಿಗೆಯಲ್ಲಿ ದೆಹಲಿಯಿಂದ ಹೊರಟು, ಅಲ್ಲಲ್ಲಿ ಸಿಕ್ಕ-ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು, ಚೆಕ್‍ಪೋಸ್ಟ್ ಗಳಲ್ಲಿ ವಂಚಿಸಿ ಮನೆ ತಲುಪಿದ್ದಾನೆ. ದೆಹಲಿಯಿಂದ ಮನೆಗೆ ಬಂದ ಮಗನನ್ನು ತಂದೆ-ತಾಯಿ ಮನೆಗೆ ಸೇರಿಸಿಲ್ಲ. ಮೊದಲು ಹೋಗಿ …

Read More »

ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕೆರೆಯಂತಾದ ರಸ್ತೆ……….

ಮಂಗಳೂರು: ಕಳೆದ ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಭಾರೀ ಮಳೆ ಸುರಿದಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ದೇವಸ್ಥಾನದ ಬಳಿಯ ರಸ್ತೆ ಪೂರ್ತಿ ನೀರು ನಿಂತು ಕೆರೆಯಂತಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ನೀರು ಹರಿಯುವುದಕ್ಕೆ ಸಾಧ್ಯವಾಗದೇ ರಸ್ತೆ ಕೆರೆಯಂತಾಗಿತ್ತು. ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ, ಕಾರು ಕೃತಕ ನೆರೆಗೆ ಭಾಗಶಃ ಮುಳುಗಿ ಹೋಗಿತ್ತು. ವಾಹನ ಸವಾರರು …

Read More »

ಕುಂಬಾರರಿಗೂ ವಿಶೇಷ ಪರಿಹಾರ ನೆರವು ನೀಡಲು ಸಿಎಂಗೆ ಮನವಿ…………

ಮಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ಕುಂಬಾರಿಕೆ ವೃತ್ತಿ ಮಾಡುವವರಿಗೂ ಐದು ಸಾವಿರ ರೂಪಾಯಿಗಳ ವಿಶೇಷ ಪರಿಹಾರ ನೆರವು ನೀಡಬೇಕೆಂದು ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇದಿಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಇರುವವರ ನೆರವಿಗೆ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಪರಿಹಾರ ಘೋಷಿಸುವ ಮೂಲಕ ಹೆಚ್ಚಿನ ನೆರವು ನೀಡಿರುವ ತಮ್ಮ ನಡೆ ಸ್ವಾಗತಾರ್ಹ. ಆದರೆ ರಾಜ್ಯಾದ್ಯಂತ ಸಂಕಷ್ಟಕ್ಕೆ ಸಿಲುಕಿರುವ ಇನ್ನೂ …

Read More »

ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತ ರೋಗಿಗಳ ನೆರವಿಗಾಗಿ ಜೀವ ರಕ್ಷಕ ಸಾಧನವೊಂದನ್ನು ಮಂಗಳೂರಿನ ವೈದ್ಯರ ತಂಡ ಅವಿಷ್ಕಾರಿಸಿದೆ.

ಮಂಗಳೂರು: ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತ ರೋಗಿಗಳ ನೆರವಿಗಾಗಿ ಜೀವ ರಕ್ಷಕ ಸಾಧನವೊಂದನ್ನು ಮಂಗಳೂರಿನ ವೈದ್ಯರ ತಂಡ ಅವಿಷ್ಕಾರಿಸಿದೆ. ನಗರದ ಮಂಗಳಾ ಹಾಸ್ಪಿಟಲ್‍ನ ಮೆಡಿಕಲ್ ಡೈರೆಕ್ಟರ್ ಡಾ.ಗಣಪತಿ ಅವರ ತಂಡ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್‍ನ್ನು ರೆಡಿ ಮಾಡಿದೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾದ ರೋಗಿಗಳಿಗೆ ಈ ಸಾಧನ ಬಹಳಷ್ಟು ಉಪಯೋಗಕಾರಿಯಾಗಲಿದೆ. ಕೊರೊನಾ ಸೋಂಕಿನಿಂದ ರೋಗಿಯ ಆರೋಗ್ಯ ಸ್ಥಿತಿ ಗಂಭೀರ ಆಗಿ ಉಸಿರಾಟ ಸಮಸ್ಯೆ ಎದುರಾದಾಗ ಕೃತಕ ಉಸಿರಾಟದ ವ್ಯವಸ್ಧೆ …

Read More »

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ’

ಮಂಗಳೂರು: ಕೊರೊನಾ ವಿಶೇಷ ಪ್ಯಾಕೇಜ್ ಘೋಷಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೂವಿನ ಬೆಳೆಗೆ ಎಕರೆಗೆ 50 ಲಕ್ಷ ಎಲ್ಲಿ ಖರ್ಚು ಮಾಡಲಾಗುತ್ತೆ ಎಂಬ ಬಗ್ಗೆ ಸಿದ್ದರಾಮಯ್ಯ ಅಧ್ಯಯನ ಮಾಡಲಿ, ಸಿದ್ದರಾಮಯ್ಯನವರು ಯೋಚನೆ ಮಾಡಿ ಮಾತಾಡೋದು ಒಳ್ಳೆಯದು. ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ …

Read More »

ಮಂಗಳೂರು: ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು

ಮಂಗಳೂರು: ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ತಗುಲಿದೆ. ಮೊದಲು ವೃದ್ಧೆ (ರೋಗಿ-536)ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾದಾಗ ವೃದ್ಧೆಗೆ ಕೊರೊನಾ ತಗುಲಿರೋದು ದೃಢಪಟ್ಟಿತ್ತು. ತದನಂತರ ವೃದ್ಧೆಯ ಪತಿ, ಅಳಿಯ, ಮಗಳು ಮತ್ತು ಮೊಮ್ಮಗಳಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಎಲ್ಲರಿಗೂ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೃದ್ಧೆಯ ಆರೋಗ್ಯ ತೀವ್ರ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. …

Read More »

ಕೊರೊನಾ ಹಾಟ್‍ಸ್ಪಾಟ್ ಆಯ್ತು ಮಂಗ್ಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ………

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗಲಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿಸಿಕೊಂಡಿದ್ದ ಇಬ್ಬರು ಮಹಿಳೆಯರಿಂದ ಅವರ ಮಕ್ಕಳಿಗೂ ಸೋಂಕು ಹರಡಿದೆ. ಎಪ್ರಿಲ್ 19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾ ನಿವಾಸಿ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಆಗಿದ್ದರೆ, ಬೋಳೂರಿನ ವೃದ್ಧ ಮಹಿಳೆಯ ಸಂಪರ್ಕದಲ್ಲಿದ್ದ 11 ವರ್ಷದ ಬಾಲಕಿ ಮೊಮ್ಮಗಳು ಮತ್ತು 35 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಿಂದ …

Read More »

ಕೆರೆಗೆ ವಿಷ ಹಾಕಿದ ಕಿಡಿಗೇಡಿಗಳು – ಸಾವಿರಾರು ಮೀನುಗಳ ಮಾರಣಹೋಮ……….

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಾಡೇಲು ಎಂಬಲ್ಲಿ ಕಿಡಿಗೇಡಿಗಳು ಫಲ್ಗುಣಿ ನದಿಗೆ ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ಬೆಳ್ತಂಗಡಿಯ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲಿನ ದಾಡೇಲು ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದೆ. ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಪ್ರಾಣಿ ಪಕ್ಷಿಗಳು ಈ ವಿಷ ನೀರನ್ನೇ ಕುಡಿಯುತ್ತಿದ್ದು, ಅವುಗಳು ಕೂಡ …

Read More »