Breaking News
Home / ಜಿಲ್ಲೆ / ಚಾಮರಾಜ ನಗರ (page 3)

ಚಾಮರಾಜ ನಗರ

ಮಲೆ ಮಹದೇಶ್ವರ ದೇವಾಲಯಕ್ಕೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಆದ್ರೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿಯಮ ಉಲ್ಲಂಘಿಸಿ ಇಂದು ಬೆಳಗ್ಗೆ ದೇವರ ದರ್ಶನ ಪಡೆದುಕೊಂಡಿದ್ದಾರೆ.

ಚಾಮರಾಜನಗರ: ಕರೊನಾ ಭೀತಿ ಹಿನ್ನೆಲೆಯಲ್ಲಿ ಜೂ.21ರವರೆಗೂ ಮಲೆ ಮಹದೇಶ್ವರ ದೇವಾಲಯಕ್ಕೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದ್ರೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿಯಮ ಉಲ್ಲಂಘಿಸಿ ಇಂದು ಬೆಳಗ್ಗೆ ದೇವರ ದರ್ಶನ ಪಡೆದುಕೊಂಡಿದ್ದಾರೆ. ಕೋವಿಡ್19 ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಲೆ ಮಹದೇಶ್ವರ ದೇವಾಲಯಕ್ಕೆ ಜೂ.19ರಿಂದ 21ರವರೆಗೆ ಸಾರ್ವಜನಿಕರು ಹಾಗೂ ಭಕ್ತರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಕೆ.ಎಸ್. …

Read More »

ಇದೀಗ ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಗೂ ಮಹಾಮಾರಿ ಕೊರೊನಾ ಬರುವ ಆತಂಕ……..

ಚಾಮರಾಜನಗರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದೀಗ ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಗೂ ಮಹಾಮಾರಿ ಕೊರೊನಾ ಬರುವ ಆತಂಕ ಈಗ ಹೆಚ್ಚಾಗಿದೆ. ಮಹಾರಾಷ್ಟ್ರದ ಪುಣೆಯಿಂದ ಬಂದ ಕುಟುಂಬದಲ್ಲಿನ ಯುವಕನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಶನಿವಾರ ಮಹಾರಾಷ್ಟ್ರದಿಂದ ಬಂದಿದ್ದ 22 ವರ್ಷದ ಮೆಡಿಕಲ್ ವಿದ್ಯಾರ್ಥಿ ಒಬ್ಬನಿಗೆ ಬೇಧಿ, ಹೊಟ್ಟೆನೋವು, ವಿಪರೀತ ಕೆಮ್ಮು ಕಾಣಿಸಿಕೊಂಡಿದೆ. ಈ ಮೂಲಕ ಚಾಮರಾಜನಗರಕ್ಕೂ ಕೊರೊನಾ ಬರುತ್ತಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ …

Read More »

ನೀರಿನ ಬೃಹತ್ ಟ್ಯಾಂಕ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ.

ಚಾಮರಾಜನಗರ: ನೀರಿನ ಬೃಹತ್ ಟ್ಯಾಂಕ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ. ಚಾಮರಾಜನಗರದ ತಾಲೂಕು ಕಚೇರಿ ಹಿಂಭಾಗದಲ್ಲಿ ಘಟನೆ ನಡೆದಿದ್ದು, ತಾಲೂಕು ಕಚೇರಿ ಹಿಂಭಾಗದಲ್ಲಿರುವ ಚನ್ನಿಪುರಮೋಳೆ ಹೊಸಬಡಾವಣೆಯಲ್ಲಿದ್ದ ನೀರಿನ ಬೃಹತ್ ಟ್ಯಾಂಕ್ ಕುಸಿದಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಪಕ್ಕದ ಮನೆಗಳ ಮೇಲೆ ಕುಸಿದುಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದು ತುಂಬಾ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಆಗಿದ್ದು, 50 ಸಾವಿರ …

Read More »

ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ ಪ್ರಯುಕ್ತರಕ್ತದಾನ ಶಿಬಿರ

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ ಪ್ರಯುಕ್ತ ಕೊಳ್ಳೆಗಾಲದ ಸತೀಶ ಜಾರಕಿಹೊಳಿ ವಿಚಾರ ವೇದಿಕೆಯ ಕಾರ್ಯಕರ್ತರು ಸೋಮವಾರ ರಕ್ತದಾನ ಶಿಬಿರ ಏರ್ಡಿಸಿದ್ದರು. ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಶಿವು ಸಂಕರ, ಜಿಯಾ ಸುಲ್ತಾನ್, ಸಿದ್ದಪ್ಪಾ ನಾಯಕ, ನಿತೀನ್ ಸೇರಿದಂತೆ ಇತರರು ಇದ್ದರು.

Read More »

ರಂಜಾನ್ ಮುಗಿದ ಬೆನ್ನಲ್ಲೇ ನಾಲ್ವರ ಬರ್ಬರ ಕೊಲೆ, ಗುಂಡ್ಲುಪೇಟೆ ಪ್ರಕ್ಷುಬ್ಧ..!

ಕೊಳ್ಳೇಗಾಲ, ಮೇ 27- ಪವಿತ್ರ ರಂಜಾನ್ ಹಬ್ಬ ಮುಗಿದ ಬೆನ್ನಲ್ಲೇ ಮುಸಲ್ಮಾನ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ನಾಲ್ಕು ಮಂದಿ ಭೀಕರವಾಗಿ ಹತ್ಯೆಗೀಡಾಗಿರುವ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಜಾಕಿರ್‍ಹುಸೇನ್ ಗ್ರಾಮದ ನಿವಾಸಿಗಳಾದ ಜಕಾವುಲ್ಲಾ, ಇದ್ರೀಶ್, ಕೈಸರ್ ಹಾಗೂ ನಸ್ರುಲ್ಲಾ ಕೊಲೆಯಾದ ನತದೃಷ್ಟರು. ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಅಸ್ಲಾಂ, ಜಮೀರ್ ಮತ್ತಿತರರ ಗುಂಪು …

Read More »

ಇವರನ್ನ ಇಟ್ಟುಕೊಂಡರೆ ಪಂಚಾಯಿತಿ ಉದ್ಧಾರವಾಗಲ್ಲ: ಪಿಡಿಒ ವಿರುದ್ಧ ಶಾಸಕ ಗರಂ

ಚಾಮರಾಜನಗರ: ಬಡ ಕೂಲಿಗಾರರಿಗೆ ಭಾರೀ ಮೊಸ ಮಾಡ್ತಿದ್ದಾರೆ, ಇವರನ್ನ ಇಲ್ಲೇ ಇಟ್ಟುಕೊಂಡರೆ ಪಂಚಾಯಿತಿ ಖಂಡಿತ ಉದ್ಧಾರ ಆಗುವುದಿಲ್ಲ ಎಂದು ಶಾಸಕ ಆರ್.ನರೇಂದ್ರ ಪಿಡಿಒಗೆ ಚಳಿ ಬಿಡಿಸಿದರು. ಮಂಗಳವಾರ ಮಂಗಲ ಗ್ರಾಮಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆನಂದ್ ಬಂಡವಾಳ ಬಯಲಾಗಿದೆ. ಒಟ್ಟು 1,137 ಜಾಬ್ ಕಾರ್ಡ್ ಇದ್ದರೂ ಕೇವಲ 100-150 ಮಂದಿಗೆ ಮಾತ್ರ ಕೆಲಸ ನೀಡಲಾಗಿದೆ. ಅಲ್ಲದೆ 637 ಮಂದಿ ಕೂಲಿ …

Read More »

ಚಾಮರಾಜನಗರಕ್ಕೆ ಬಿಗ್ ರಿಲೀಫ್: ಆತಂಕ ಹುಟ್ಟಿಸಿದ್ದ ಪೇದೆ ಕೊರೊನಾ ನೆಗೆಟಿವ್

ಚಾಮರಾಜನಗರ: ಬೆಂಗಳೂರಿನಿಂದ ಜಿಲ್ಲೆಯ ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಬಂದು ಹೋಗಿದ್ದ ಪೇದೆಯ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರ ಆತಂಕ ದೂರವಾಗಿದೆ. ಬೇಗೂರು ಠಾಣೆಯ ಮುಖ್ಯಪೇದೆ ಕುಟುಂಬ ಸಮೇತ ಬೆಳ್ತೂರಿಗೆ ಬಂದಿದ್ದ ವೇಳೆ ಕೊರೊನಾ ಪಾಸಿಟಿವ್ ಸಂಬಂಧ ಹಲವಾರು ಗೊಂದಲಗಳು ಉಂಟಾಗಿದ್ದವು. ಆದರೆ ಈಗ ಅವರ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರನ್ನು ಹಾಗೂ …

Read More »

ರಾಜ್ಯದಲ್ಲೇ ಅತ್ಯುತ್ತಮ ಕೋವಿಡ್ ಪ್ರಯೋಗಾಲಯ ಚಾಮರಾಜನಗರದಲ್ಲಿ ಸ್ಥಾಪನೆ: ಸುರೇಶ್ ಕುಮಾರ್

ಚಾಮರಾಜನಗರ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 1.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೋವಿಡ್-19 ಪರೀಕ್ಷಾ ಪಿಸಿಆರ್ ಪ್ರಯೋಗಾಲಯ ರಾಜ್ಯದಲ್ಲಿಯೇ ಅತ್ಯುತ್ತಮ ಪ್ರಯೋಗಾಲಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಈ ಕೋವಿಡ್-19 ಪಿಸಿಆರ್ ಪ್ರಯೋಗಾಲಯಕ್ಕೆ 1.79 ಕೋಟಿ ರೂ. ಬಿಡುಗಡೆಯಾಗಿದೆ. ಐಸಿಎಂಆರ್ ನಿಯಮಾವಳಿಯ ಅನುಗುಣವಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ …

Read More »

ಹಸಿರು ವಲಯದಲ್ಲಿರೋ ಚಾಮರಾಜನಗರಕ್ಕೆ ಕಂಟಕವಾಗ್ತಾರಾ ಪೊಲೀಸ್ ಪೇದೆ?

ಬೆಂಗಳೂರು: ಇಷ್ಟು ದಿನ ಲಾಕ್‍ಡೌನ್ ಆದಾಗಿನಿಂದ ಹಸಿರು ವಲಯದಲ್ಲಿರೋ ಚಾಮರಾಜನಗರ ಕೆಂಪು ವಲಯಕ್ಕೆ ಸೇರ್ಪಡೆಯಾಗುತ್ತಾ ಅನ್ನೋ ಆತಂಕ ಮನೆ ಮಾಡಿದೆ. ಕೊರೊನಾ ಸೋಂಕಿತ ಪೊಲೀಸ್ ಪೇದೆ ಚಾಮರಾಜನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿರೋ ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿದೆ. ಇಂದು ಇವರೆಲ್ಲರ ವರದಿ ಬರುವ ಸಾಧ್ಯತೆಗಳಿವೆ. ಪೊಲೀಸ್ ಪೇದೆ ಬೆಂಗಳೂರಿನಲ್ಲಿಯೂ ನಾಲ್ಕು ಜನರ ಜೊತೆ ಸಂಪರ್ಕದಲ್ಲಿದ್ದನು. …

Read More »

ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು: ಶಾಸಕ ಎನ್.ಮಹೇಶ್

ಚಾಮರಾಜನಗರ: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಈ ಮಧ್ಯೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು. ಹಳ್ಳಿಗಳಿಗೆ ಒಂದು ಬಾರಿ ಭೇಟಿ ಕೊಟ್ಟು ನೋಡಿ, ಎಷ್ಟೋ ಜನ ಆರೋಗ್ಯ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಣ್ಣೆ ಹಾಕುವುದಿಲ್ಲ ಎಂದರೆ ಸತ್ತು ಹೋಗುತ್ತಾರೆ, ನರ ದೌರ್ಬಲ್ಯ ಬರುತ್ತೆ …

Read More »