ಬೋರಗಾಂವ: ರಾಜ್ಯ ಸರ್ಕಾರ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿದೆ. ಬಡವರಿಗೆ ಭೂಮಿ ಮತ್ತು ಆಶ್ರಯ ನೀಡಲು ಯೋಜನೆ ರೂಪಿಸಲಾಗುತ್ತಿದ್ದು, ಬೋರಗಾಂವ ಪಟ್ಟಣದಿಂದ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸಾಹಿತ್ಯ ರತ್ನ, ಡಾ.ಅಣ್ಣಾಭಾವು ಸಾಠೆ ಅವರ 106ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತ ನಾಡಿ, ಅಣ್ಣಾಭಾವು ಸಾಠೆ ಅವರ ಕಾರ್ಯ ಮಾದಿಗ ಸಮುದಾಯ ಸೇರಿದಂತೆ ಕೆಳಮಟ್ಟದಲ್ಲಿರುವರಿಗೆ ಸ್ಫೂರ್ತಿದಾಯಕವಾಗಿದೆ.
ಸಮಾಜವು ಮಾನಸಿಕ ಗುಲಾಮಗಿರಿಯ ಚೌಕಟ್ಟಿನಿಂದ ಹೊರಬರಬೇಕಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನೀತಾ ಐವಾಳೆ ಮಾತನಾಡಿ, ದಲಿತ ಸಮುದಾಯದ ಸಮಗ್ರ ಅಭಿವದ್ಧಿಗೆ ಸಚಿವರು ಪ್ರಯತ್ನಿಸುತ್ತಿದ್ದು, ಅವರ ಕಾರ್ಯ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಅಣ್ಣಾಸಾಹೇಬ ಹಾವಲೆ ಮಾತನಾಡಿ, ಮಾದಿಗ ಮತ್ತು ದಲಿತ ವಸಾಹತುಗಳಲ್ಲಿ ಸಿಸಿ ರಸ್ತೆ, ಕಷಿ ಜಮೀನಿಗೆ ಸಂಪರ್ಕ ರಸ್ತೆ ನಿರ್ಮಿಸಬೇಕು. ಮಾದಿಗ ಸಮುದಾಯಕ್ಕೆ ಸ್ಮಶಾನ ಭೂಮಿ, ಬ್ಯಾರೇಜ್ ಕಾಮಗಾರಿ ಪೂರ್ಣ ಮತ್ತು ಹಳೆಯ ಬ್ಯಾರೇಜ್
ದುರಸ್ತಿ ಮಾಡಲು ಪ್ರಯತ್ನಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಮಾಜಿ ಶಾಸಕ ರಾಜೀವ ಅವಳೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಅಣ್ಣಾಸಾಹೇಬ ಹವಲೆ, ರಾಜೇಂದ್ರ ವಡರ, ರುಬೇನ್ ಅವಳೆ, ಸುಪ್ರಿಯಾ ಪಾಟೀಲ, ರಾಜೇಶ ಕದಮ, ರೋಹನ ಸಾಳವೆ, ನೀಕು ಪಾಟೀಲ, ಅನುಜ ಹವಲೆ, ಸುಜಯ ಪಾಟೀಲ, ಮಹಾವೀರ ಐಹೊಳೆ, ಸುರೇಶ ಐಹೊಳೆ, ನಿಖಿತಾ ಹೆಗಡೆ, ಪ್ರವೀಣ ಹೆಗಡೆ, ಭೂಪಾಲ ಹಿರೇಮನಿ, ಸುಭಾಸ ಐಹೊಳೆ ಇತರರು ಇದ್ದರು.
Laxmi News 24×7