Breaking News

7 ಲಕ್ಷ ಸಾಲ ಮಾಡಿ ಏರ್ ಆಂಬುಲೆನ್ಸ್ ಬುಕ್ : ಒಬ್ಬನನ್ನು ಉಳಿಸಲು ಹೋಗಿ ಸತ್ತಿದ್ದು ಏಳು ಜನ

Spread the love

ಒಬ್ಬರನ್ನು ಉಳಿಸುವುದಕ್ಕೆ ಹೊರಟ ಪ್ರಯಾಣವೊಂದು 7 ಜನರ ಸಾವಿನೊಂದಿಗೆ ಅಂತ್ಯವಾಗಿದೆ. ಹೌದು ನಿನ್ನೆ ಸಂಜೆ ನಡೆದ ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತಕ್ಕೂ ಮೊದಲು ಕುಟುಂಬವೊಂದು ತಮ್ಮ ಕುಟುಂಬದ ಬಹಳ ಅಮೂಲ್ಯವಾದ ವ್ಯಕ್ತಿಯ ಜೀವ ಉಳಿಸುವುದಕ್ಕೆ ವಿದೇಶದಲ್ಲೂ ಚಿಕಿತ್ಸೆ ನೀಡುವುದಕ್ಕೆ ಬಯಸಿ ಏಳು ಲಕ್ಷ ಸಾಲ ಮಾಡಿ ಏರ್ ಆಂಬುಲೆನ್ಸ್ ಬುಕ್ ಮಾಡಿತ್ತು. ಆದರೆ ವಿಧಿ ವಿಪರ್ಯಾಸವೋ ಏನೋ ಒಬ್ಬರ ಉಳಿಸಲು ಜಾರ್ಖಂಡ್‌ನಿಂದ ಆರಂಭಿಸಿದ ಈ ಪ್ರಯಾಣವೂ 7 ಜನರ ಸಾವಿನಲ್ಲಿ ಅಂತ್ಯವಾಗಿದೆ.

ನಿನ್ನೆ ಸಂಜೆ ನಡೆದ ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತದ ಹಿಂದಿನ ಮನ ಮಿಡಿಯುವ ಕತೆ ಇದು. ಬೆಂಕಿಯಿಂದ ಶೇಕಡಾ 60ರಷ್ಟು ಸುಟ್ಟು ಹೋಗಿದ್ದ ಸಂಜಯ್ ಕುಮಾರ್ ಶಾ ಅವರನ್ನು ಉಳಿಸಿಕೊಳ್ಳುವುದಕ್ಕೆ ಅವರ ಕುಟುಂಬ ಏನೂ ಮಾಡಬೇಕೋ ಅದೆಲ್ಲವನ್ನೂ ಮಾಡುವುದಕ್ಕೆ ಸಿದ್ದವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು ನೋಡಿ, ಅವರನ್ನು ಉಳಿಸುವ ಈ ಪಯಣದಲ್ಲಿ ಅವರ ಪತ್ನಿ ಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್ ಕೂಡ ಪ್ರಾಣ ಬಿಟ್ಟಿದ್ದಾರೆ.

ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ಸಂಜೆ 7.11 ಕ್ಕೆ ಹೊರಟಿತು. ಸುಮಾರು 20 ನಿಮಿಷಗಳ ನಂತರ ರಾಡಾರ್ ಜೊತೆ ಇದು ಸಂಪರ್ಕ ಕಳೆದುಕೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಚತ್ರಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತು.


Spread the love

About Laxminews 24x7

Check Also

ಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆ

Spread the loveರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಗಲಾಟೆ ಬಳಿಕ ಇಂದಿನ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ