ಬೆಂಗಳೂರು: ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡಿದ ಹಲವು ಇಲಾಖೆಗಳಿಗೆ ಕೊರೊನಾ ವಾರಿಯರ್ಸ್ ಅಂತ ಹೆಸರು ಕೊಡಲಾಯ್ತು. ಜೀವಕ್ಕೆ ಹೆದರದೆ ಕೊರೊನಾ ಸೋಂಕಿತರಿಗಾಗಿ ಕೆಲಸ ಮಾಡಿದವರಿಗೆ ಮನ್ನಣೆ ಕೊಡಲಾಯ್ತು. ಆದರೆ ಕೆಇಬಿಯ ಲೈನ್‍ಮ್ಯಾನ್‍ಗಳಿಗೆ ಯಾವುದೇ ಗೌರವ ಸಲ್ಲಲಿಲ್ಲ ಅನ್ನೋ ಬೇಸರ ಹಲವರಲ್ಲಿದೆ. ಲಾಕ್‍ಡೌನ್ ಟೈಮ್‍ನಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು..? ಏನಾಯ್ತು ಅನ್ನೊದ್ರ ಬಗ್ಗೆ ಲೈನ್‍ಮ್ಯಾನ್‍ಗಳು ಡಿಟೈಲ್ ಆಗಿ ಹೇಳಿಕೊಂಡಿದ್ದಾರೆ.
ಲಾಕ್‍ಡೌನ್ ಅನೌನ್ಸ್ ಆಯ್ತು. ಕೊರೊನಾ ಕಂಟಕದಿಂದ ಪಾರಾಗಲು ಮನೆಯಲ್ಲೇ ಇರಬೇಕು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೌನ್ಸ್ ಮಾಡಿತ್ತು. ಪ್ರಾಣ ಉಳಿಸಿಕೊಳ್ಳಲು ಜನ ಮನೆ ಸೇರಿದರು. ಬೇಸಿಯ ಧಗೆಗೆ ಪ್ಯಾನ್ ಹಾಕಿಕೊಂಡು ಟಿವಿ ನೋಡ್ಕೊಂಡು ಆರಾಮಾಗಿದ್ದರು. ಆದರೆ ಮನೆ ಸೇರಿರೋ ಜನ ಮನೆಬಿಟ್ಟು ಹೊರಗೆ ಬರದಂತೆ ನೋಡಿಕೊಳ್ಳುವಲ್ಲಿ ವಿದ್ಯುತ್ ಸರಬರಾಜು ಮಂಡಳಿಯ ಲೈನ್ ಮ್ಯಾನ್‍ಗಳು ಅತಿ ಮುಖ್ಯ ಪಾತ್ರವಹಿಸಿದ್ರು. ಯಾವುದೇ ದೂರು ಬಂದರೂ ಅದನ್ನ ಆದಷ್ಟು ಬೇಗ ಅಟೆಂಡ್ ಮಾಡಿ ಜನ ರೋಡಿಗಿಳಿಯದಂತೆ ನೋಡಿಕೊಂಡ್ರು.
ಒಂದು ದಿನ ಪವರ್ ಕಟ್ ಆದರೂ ಮನೆಯಲ್ಲಿ ಸೆಕೆ ಜಾಸ್ತಿ, ಟಿವಿ ಇಲ್ಲ ಎಸಿ ಇಲ್ಲ ಅಂತ ಜನ ಮನೆ ಬಿಟ್ಟು ಬೀದಿಗೆ ಬಂದು ಬಿಡುತ್ತಿದ್ದರು. ಈ ರೀತಿಯ ಅವಘಡಗಳು ನಡೆಯದಂತೆ ಲೈನ್‍ಮ್ಯಾನ್‍ಗಳು ಒಳ್ಳೆ ಕೆಲಸ ಮಾಡಿದರು. ಆದರೆ ಸರ್ಕಾರ ಮಾತ್ರ ಇವರನ್ನ ಮರೆತು ಬಿಟ್ಟಿರೋ ಹಾಗೆ ಕಾಣ್ತಿದೆ. ಕೆಇಬಿಯ ಲೈನ್‍ಮ್ಯಾನ್‍ಗಳಿಗೆ ಯಾವುದೇ ಮನ್ನಣೆ ಕೊಡದ ಸರ್ಕಾರದ ನಡೆಯ ಬಗ್ಗೆ ಹಲವರಿಗೆ ಬೇಸರವಾಗಿದೆ.
ಕೆಲವು ಲೈನ್‍ಮ್ಯಾನ್‍ಗಳು ನಮ್ಮ ಕೆಲಸ ನಾವು ಮಾಡಿದ್ದೀವಿ ಬಿಡಿ ಸಾರ್ ಅಂತಿದ್ದಾರೆ. ಆದರೆ ಇನ್ನು ಕೆಲವರು ನಾವು ಮಾಡಿದ ಕೆಲಸಕ್ಕೆ ಸರ್ಕಾರ ಸೂಕ್ತ ಗೌರವ ಕೊಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಮಗಾಗಿ ಕೊರೊನಾ ಮಹಾಮಾರಿಯನ್ನ ಲೆಕ್ಕಿಸದೆ ಹಗಲು ರಾತ್ರಿ ದುಡಿದ ನಮ್ಮ ಲೈನ್‍ಮ್ಯಾನ್‍ಗಳಿಗೆ ಮನ್ನಣೆ ಸಿಗುವಂತಾಗಲಿ ಅನ್ನೊದೇ ಎಲ್ಲರ ಆಶಯ.