Breaking News
Home / ಜಿಲ್ಲೆ / ಬೆಂಗಳೂರು / ದೇವನಹಳ್ಳಿ ಬಳಿ ವಿದೇಶದಿಂದ ಕರೆತರುವ ಕನ್ನಡಿಗರ ಕ್ವಾರಂಟೈನ್, ಸ್ಥಳೀಯ ಶಾಸಕರ ವಿರೋಧ

ದೇವನಹಳ್ಳಿ ಬಳಿ ವಿದೇಶದಿಂದ ಕರೆತರುವ ಕನ್ನಡಿಗರ ಕ್ವಾರಂಟೈನ್, ಸ್ಥಳೀಯ ಶಾಸಕರ ವಿರೋಧ

Spread the love

ಬೆಂಗಳೂರು, ಮೇ.5- ವಿದೇಶದಿಂದ ಕರೆತರುತ್ತಿರುವ ಕನ್ನಡಿಗರನ್ನು ದೇವನಹಳ್ಳಿ ಬಳಿ ಕ್ವಾರಂಟೈನ್ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿದೇಶಿಗರನ್ನು ದೇವನಹಳ್ಳಿಯಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಶಾಸಕರಾದ ನಾರಾಯಣಸ್ವಾಮಿ ಹಾಗೂ ವೆಂಕಟರಮಣಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನ ಹೆಮ್ಮಾರಿ ಇಡೀ ಪ್ರಪಂಚವನ್ನೆ ಕಿತ್ತು ತಿನ್ನುತ್ತಿದ್ದು ಲಕ್ಷಾಂತರ ಜನರನ್ನ ಬಲಿ ಪಡೆಯುತ್ತಿದೆ. ದೇಶದಲ್ಲೂ 46 ಸಾವಿರದ ಗಡಿ ದಾಟಿದ್ದು ಗುಣಮಖ ಆದವರ ಸಂಖ್ಯೆ ಕೇವಲ 12 ಸಾವಿರದಲ್ಲಿದೆ. ಮಹಾಮಾರಿಗೆ ಬಲಿಯಾದವರು 1568 ಜನ ಇರೋದ್ರಿಂದ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಪರಿಸ್ಥಿತಿ ಅಲ್ಪ ಮಟ್ಟಕ್ಕೆ ತೃಪ್ತಿದಾಯಕ ಆದರೂ ಸಮಾಧಾನ ಪಡುವಷ್ಟೇನಿಲ್ಲ.

ಸಧ್ಯ ಇದೀಗ ಮತ್ತೊಂದು ಸಮಸ್ಯೆ ಎದರಾಗಿರೋದು ಬೇರೆ ದೇಶಗಳಲ್ಲಿ ಇರೋ ಭಾರತೀಯರನ್ನ ದೇಶಕ್ಕೆ ಮರಳಿ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ಉತ್ತಮ ವಾಗಿದ್ದರೂ, ದೇಶದಲ್ಲಿ ಕೊರೋನ ಹರಡಲು ವಿದೇಶಿ ಪ್ರಯಾಣಿಕರೆ ಕಾರಣ ಎನ್ನೋದು ಎಲ್ಲರಿಗೂ ತಿಳಿದ ವಿಷಯವೆ, ಆದರೆ ಇದೀಗ ಸಮಸ್ಯೆ ಉಲ್ಬಣ ಆಗ್ತಿರೋದೆ ಇಲ್ಲಿ.

ವಿದೇಶದಿಂದ ಕರೆತರುವ ಭಾರತೀಯರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ, ದೊಡ್ಡಬಳ್ಳಾಪುರ ಗಳಲ್ಲಿ ಕ್ವಾರೆಂಟೇನ್ ಮಾಡಲು ತೆಗೆದುಕೊಂಡಿರುವ ನಿರ್ಧಾರಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 22 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ, ಇದ್ದ 5 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಅಲ್ಲಿದೆ ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಇಲ್ಲವಾದರೂ ರೆಡ್ ಝೋನ್ ಗೆ ಸೇರ್ಪಡೆ ಮಾಡಿರುವುದು ಸರಿಯಲ್ಲ ಎಂದು ಶಾಸಕರು ಅತೃಪ್ತಿ ಹೊರಹಾಕಿದ್ದಾರೆ.

ಕಟ್ಟುನಿಟ್ಟಿನ ನಿಯಮದ ಮೂಲಕ ಸೋಂಕು ಹರಡದ ಹಾಗೆ ಕ್ರಮ ಕೈಗೊಂಡಿರುವ ಹಾಗೂ ನಿಯಮ ಪಾಲಿಸಿರುವ ಜಿಲ್ಲೆಯ ಆರೋಗ್ಯ ಹಾಳೂ ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂಧ್ರ ಸರ್ಕಾರ ದವೇಶದ ರಾಜಕಾರಣಕ್ಕೆ ಮುಂದಾಗಿದೆ ಎಂಬ ಗಂಬೀರ ಆರೋಪ ಮಾಡಿದ್ದಾರೆ.

ಇನ್ನು ವಿದೇಶದಲ್ಲಿರುವ ಸುಮಾರು 12 ಸಾವಿರಕ್ಕೂ ಹೆಚ್ಚು ಕರ್ನಾಟಕ ಮೂಲದವರನ್ನ ಒಂದೆಡೆ ಕ್ವರೆಂಟೇನ್ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿರುವ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಸಿದ್ದಾರೆ. ಏರï ಲಿ¥s್ಟï ಮೂಲಕ ಇದೇ 7ರಿಂದ ದೇಶಕ್ಕೆ ಮರಳಿ ತರುವವರನ್ನ ಆಯಾ ವ್ಯಾಪ್ತಿಗಳಲ್ಲೆ ಕ್ವಾರೆಂಟೈನ್ ಮಾಡಬೇಕೆಂದು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಅತ್ಯಾಧುನಿಕ ಅಗ್ನಿಶಾಮಕ ಠಾಣೆ ಉದ್ಘಾಟನೆ ಮಾಡಿದ ಸಿಎಂ.

Spread the loveಬೆಂಗಳೂರು (ಡಿ.6) : ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದಿಂದ ಸುಮಾರು .18 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ