ರಾಮನಗರ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಹಿನ್ನೆಲೆ ಬಿಜೆಪಿ ರಾಜ್ಯಾದ್ಯಂತ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಮುಂದಾಗಿದ್ದು, ಇಂದು ಸಿಎಂ ಸ್ವಕ್ಷೇತ್ರ ಕನಕಪುರದಲ್ಲಿ ಬಿಜೆಪಿ ನಿಯೋಗ ಬರ ಅಧ್ಯಯನ ಪರಿಶೀಲನೆ ಮಾಡಿದೆ.
ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕನಕಪುರ ತಾಲೂಕಿಗೆ ಭೇಟಿ ನೀಡಿದ ಬಿಜೆಪಿ ನಿಯೋಗ ಸ್ಥಳೀಯ ರೈತರ ಸಂಕಷ್ಟ ಆಲಿಸಿತು. ತಾಲೂಕಿನ ಮಲ್ಲೇಗೌಡನದೊಡ್ಡಿ ಹಾಗೂ ಸಾಸಲಾಪುರ ಗ್ರಾಮಗಳಿಗೆ ಭೇಟಿ ನೀಡಿ, ನೀರಿಲ್ಲದೆ ಒಣಗುತ್ತಿರುವ ಬಾಳೆ ಮತ್ತು ಅಡಿಕೆ ತೋಟಗಳನ್ನು ಪರಿಶೀಲಿಸಿ, ಒಣಗಿರುವ ಕೆರೆ-ಕಟ್ಟೆಗಳಿಗೂ ಭೇಟಿ ನೀಡಿ ಸ್ಥಿತಿಗತಿಯನ್ನು ಅವಲೋಕಿಸಿತು.
ಮಾಜಿ ಶಾಸಕ ಎನ್. ಮಹೇಶ್, ಶಾಸಕ ಶ್ರೀವತ್ಸ, ಎಂಎಲ್ಸಿಗಳಾದ ಗೋಪಿನಾಥ್ ರೆಡ್ಡಿ, ರಘುಕೌಟಿಲ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರನ್ನೊಳಗೊಂಡ ನಿಯೋಗ, ರಾಜ್ಯ ಸರ್ಕಾರವು ಬರ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಮತ್ತು ಸಂಕಷ್ಟದಲ್ಲಿರುವ ಬೆಳೆಗಾರರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿತು.
Laxmi News 24×7