Home / ಜಿಲ್ಲೆ / ಹಿರೇಬಾಗೇವಾಡಿ ಗ್ರಾಮವನ್ನ ಸೀಲ್‍ಡೌನ್ ಮಾಡಿ ಸುಮ್ಮನಾಗಿದೆ. ಸ್ಯಾನಿಟೈಸರ್ ಮಾಡುವ ಗೋಜಿಗೆ ಹೋಗಿಲ್ಲ. ಅಗತ್ಯ ಮುಂಜಾಗ್ರತೆ ತೆಗೆದುಕೊಂಡಿಲ್ಲ ಅಂತ ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ..

ಹಿರೇಬಾಗೇವಾಡಿ ಗ್ರಾಮವನ್ನ ಸೀಲ್‍ಡೌನ್ ಮಾಡಿ ಸುಮ್ಮನಾಗಿದೆ. ಸ್ಯಾನಿಟೈಸರ್ ಮಾಡುವ ಗೋಜಿಗೆ ಹೋಗಿಲ್ಲ. ಅಗತ್ಯ ಮುಂಜಾಗ್ರತೆ ತೆಗೆದುಕೊಂಡಿಲ್ಲ ಅಂತ ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ..

Spread the love

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ತಗ್ಲೀಘಿಗಳ ನಂಜು ವ್ಯಾಪಿಸುತ್ತಿದ್ದು, 69 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ಗ್ರಾಮದಲ್ಲಿ 36 ಜನರಲ್ಲಿ ಸೋಂಕು ದೃಢವಾಗಿದೆ.

20 ಸಾವಿರ ಜನಸಂಖ್ಯೆ ಇರುವ ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮದಲ್ಲಿ ಇದೀಗ ಕೊರೊನಾ ರಣಕೇಕೆ ಹಾಕುತ್ತಿದೆ. ಈ ಗ್ರಾಮದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 36 ಜನರಿಗೆ ಕೊರೊನಾ ಸೋಂಕು ತಗುಲಿದೆ. ಓರ್ವ ಯುವಕನಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿದೆ. ದೆಹಲಿಯ ನಿಜಾಮುದ್ದಿನ್ ಮರ್ಕಜ್‍ಗೆ ಹೋಗಿ ಬಂದಿರುವ ರೋಗಿ ನಂಬರ್ 128ರ 20 ವರ್ಷದ ಯುವಕ 36 ಮಂದಿಗೆ ಕೊರೊನಾ ಹಬ್ಬಿಸಿದ್ದಾನೆ.

ತಂದೆ ಜೊತೆಯಲ್ಲಿ ಈರುಳ್ಳಿ ಮಾರಿದ್ದ ಯುವಕ, ಸ್ನೇಹಿತರ ಜೊತೆಯಲ್ಲಿ ಊರೆಲ್ಲಾ ಸುತ್ತಾಡಿದ್ದ. ದೆಹಲಿಯಿಂದ ಮರಳಿದ ಬಳಿಕ ಅಕ್ಕಪಕ್ಕದ ಜನರನ್ನ ಕರೆದು ಊಟ ಕೂಡ ಹಾಕಿಸಿದ್ದ. ಇಷ್ಟೊತ್ತಿಗೆ ಈತನಿಗೆ ಕೊರೊನಾ ತಗಲುವ ಜೊತೆಗೆ, ಈತನ ತಂದೆ-ತಾಯಿ ಮತ್ತು ಅಣ್ಣನಿಗೂ ವಕ್ಕರಿಸಿತ್ತು. ಇದರ ನಡುವೆ ಈತನ 80 ವರ್ಷದ ಅಜ್ಜಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಯುವಕ, ತಂದೆ ತಾಯಿ ಸೇರಿದಂತೆ ಅಕ್ಕಪಕ್ಕದ 30 ಜನರನ್ನ ಒಂದೇ ಕಡೆ ಕ್ವಾರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆಲವರಿಗೆ ಸೋಂಕು ತಗುಲಿದ್ದರೆ, ಇನ್ನೂಳಿದವರಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗುಲಿದೆ.

ಒಬ್ಬ ಯುವಕನಿಂದ ಹರಡುತ್ತಾ ಹೋದ ಕೊರೊನಾ ಸೋಂಕು ಇಲ್ಲಿವರೆಗೂ 36 ಜನರಿಗೆ ಸೋಂಕು ಹರಡಿದೆ. ಅಪ್ಪ-ಅಮ್ಮ, ಅಣ್ಣ, ಅಕ್ಕಪಕ್ಕದವರು ಸೇರಿ 36 ಮಂದಿಗೆ ಸೋಂಕು ತಟ್ಟಿದೆ. ಈ ಪೈಕಿ ಅಂಗನವಾಡಿ ಶಿಕ್ಷಕಿಗೂ ವೈರಸ್ ಬಂದಿದೆ. ಗುರುವಾರ ಇದೇ ಗ್ರಾಮದ 11 ಜನರಿಗೆ ಕೊರೊನಾ ಸೋಂಕು ಹರಡಿದೆ. ರೋಗಿ ನಂಬರ್ 487 ಅಂದರೆ ಅಂಗನವಾಡಿ ಶಿಕ್ಷಕಿಯಿಂದ ಮೂರು ಜನರಿಗೆ ಸೋಂಕು ತಗುಲಿದೆ. ರೋಗಿ 486 ಮಹಿಳೆಯಿಂದ 3 ಜನ ಕುಟುಂಬಸ್ಥರಿಗೆ ಸೋಂಕು ತಗುಲಿದೆ. ರೋಗಿ ನಂಬರ್ 483, 484ರ ತಾಯಿ ಮಗನಿಂದ ಇದೀಗ 5 ಜನ ಕುಟುಂಬಸ್ಥರಿಗೆ ಸೋಂಕು ಹರಡಿದೆ. ಮನೆಯ ಮಕ್ಕಳು, ಸೊಸೆ, ಅಣ್ಣ ಸೇರಿದಂತೆ ಕುಟುಂಬ ಎಲ್ಲರಿಗೂ ಸೋಂಕು ತಗುಲಿದೆ.

ಹಿರೇಬಾಗೇವಾಡಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 797 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯದ ಪರಿಸ್ಥಿತಿಯನ್ನ ನೋಡುತ್ತಿದ್ದರೆ ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಂಕಿತ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಿದ್ದರೂ ಜಿಲ್ಲಾಡಳಿತ ಕೇವಲ ಹಿರೇಬಾಗೇವಾಡಿ ಗ್ರಾಮವನ್ನ ಸೀಲ್‍ಡೌನ್ ಮಾಡಿ ಸುಮ್ಮನಾಗಿದೆ. ಸ್ಯಾನಿಟೈಸರ್ ಮಾಡುವ ಗೋಜಿಗೆ ಹೋಗಿಲ್ಲ. ಅಗತ್ಯ ಮುಂಜಾಗ್ರತೆ ತೆಗೆದುಕೊಂಡಿಲ್ಲ ಅಂತ ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 69 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ 8 ಜನರು ಗುಣಮುಖರಾಗಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮೂರು ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ ಮನೆಯ ಮುಂದೆ ಸೋಂಕಿತ ಬಾಲಕನೊಂದಿಗೆ ಆಟವಾಡಿದ್ದ 9 ವರ್ಷದ ಬಾಲಕ, 8 ವರ್ಷದ ಬಾಲಕಿ ಮತ್ತು 75 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಇಬ್ಬರು ಮಕ್ಕಳು ಅಜ್ಜಿ ಮನೆಗೆ ರಜೆಗೆ ಬಂದಿದ್ದು, ಇದೀಗ ಈ ಮಕ್ಕಳಿಗೂ ಕೊರೊನಾ ಸೋಂಕು ಬಂದಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ