Breaking News

ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

Spread the love

ಬೆಳಗಾವಿ: ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕೊರೊನಾ ಡ್ಯೂಟಿಯನ್ನು ನಿರಂತರವಾಗಿ ಮಾಡುತ್ತಿರುವ ಕೆಎಸ್‍ಆರ್‍ಪಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸವನ್ನ ಇಂದು ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್ ಕುಮಾರ್ ಮಾಡಿದ್ದಾರೆ. ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅಲೋಕ್ ಕುಮಾರ್ ಕೆಎಸ್‍ಆರ್‍ಪಿ ತುಕಡಿಗಳು ಕೆಲಸ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಮಾಡಿದರು.

ಪ್ರತಿಯೊಬ್ಬ ಪೇದೆಗಳ ಜೊತೆಗೆ ಮಾತನಾಡಿದ ಅವರು, ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಎಂದು ಕೇಳುವುದರ ಜೊತೆಗೆ ಊಟ, ಮಾಸ್ಕ್ ಸ್ಯಾನಿಟೈಸರ್ ವ್ಯವಸ್ಥೆಯನ್ನ ಹೇಗೆ ಮಾಡಿದ್ದಾರೆ ಎಂದು ಕೇಳುವ ಮೂಲಕ ಮಾಹಿತಿ ಪಡೆದರು. ಈ ವೇಳೆ ಕೆಲ ಮದುವೆಯಾದ ಸಿಬ್ಬಂದಿಗೆ ಆದಷ್ಟು ಬೇಗ ಮದುವೆ ಮಾಡಿಸಿ ಎಂದು ಪಕ್ಕದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.


Spread the love

About Laxminews 24x7

Check Also

ಆಸ್ತಿ ತೆರಿಗೆ ಏರಿಕೆ ವಿರುದ್ಧ ಹಿರಿಯ ನಾಗರಿಕರ ಆಕ್ರೋಶ

Spread the loveಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಏರಿಕೆ ವಿಚಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಿಯಮ ಬಾಹಿರವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ