Breaking News
Home / Uncategorized / ರಾಜ್ಯಾದ್ಯಂತ ಸಂಭ್ರಮದ ಕನ್ನಡ ರಾಜ್ಯೋತ್ಸವ; ಬೆಳಗಾವಿಯಲ್ಲಿ ಶಿವಸೇನೆ ಪುಂಡರಿಗೆ ಬ್ರೇಕ್

ರಾಜ್ಯಾದ್ಯಂತ ಸಂಭ್ರಮದ ಕನ್ನಡ ರಾಜ್ಯೋತ್ಸವ; ಬೆಳಗಾವಿಯಲ್ಲಿ ಶಿವಸೇನೆ ಪುಂಡರಿಗೆ ಬ್ರೇಕ್

Spread the love

ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯೋತ್ಸವ ಜೊತೆಗೆ ಅಪ್ಪು ಆರಾಧನೆ ಕಾರ್ಯಕ್ರಮ ಕೂಡ ನಡೆಯಲಿದೆ. ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದ್ದು, ಪ್ರತಿ ಶಾಲೆ, ಗ್ರಾಮ, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದೆ.

ಬೆಂಗಳೂರಿನ (Bengaluru) ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕನ್ನಡ ಧ್ವಜಾರೋಹಣ (Kannada Flag) ಮಾಡಲಿದ್ದಾರೆ. ಬಳಿಕ ರಾಜ್ಯವನ್ನುದ್ದೇಶಿಸಿ ಸಿಎಂ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್ ಬಳಿಯ ನೃಪತುಂಗ ಕಲ್ಯಾಣ ಮಂಟಪದಿಂದ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ ಹಾಗೂ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಜೊತೆ ಸಂತೋಷ ಕೂಟ ನಡೆಯಲಿದೆ.

 

ಮೆರವಣಿಗೆಗೆ ಬಂದ್ರೆ ಹೋಳಿಗೆ ಊಟ

 

ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಹೋಳಿಗೆ ಊಟ ನೀಡಲಾಗ್ತಿದೆ. ಹಾಗಾಗಿ 1 ಲಕ್ಷ ಹೋಳಿಗೆ ತಯಾರಾಗ್ತಿದೆ.

 

50 ಸಾವಿರ ಕನ್ನಡಿಗರಿಗೆ ತಲಾ 2 ಹೋಳಿಗೆ ಜೊತೆಗೆ ಅನ್ನ ಸಾಂಬಾರ್, ವಿವಿಧ ಪಲ್ಯಗಳನ್ನ ನೀಡಲು ಸಿದ್ಧತೆ ನಡೆದಿದೆ. ಬೆಳಗಾವಿ ಸರ್ದಾರ್ ಮೈದಾನದಲ್ಲಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋಳಿಗೆ ದಾಸೋಹ ನಡೆಯಲಿದೆ. ಯಮಕನಮರಡಿ 200 ಜನ ಬಾಣಸಿಗರಿಂದ ಅಡುಗೆ ಸಿದ್ಧತೆ ಆಗ್ತಿದೆ.

ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಲು ಶಿವಸೇನೆ ಮಾಡಿದ್ದ ಕುತಂತ್ರ ಫೇಲ್ ಆಗಿದೆ. ವಿಜಯ ಜ್ಯೋತಿ ಹಿಡಿದು ಬೆಳಗಾವಿಯತ್ತ ಬರ್ತಿದ್ದ ಶಿವಸೇನೆ ಪುಂಡರಿಗೆ ಬೆಳಗಾವಿ ಪೊಲೀಸರು ಗಡಿಯಲ್ಲೇ ಬ್ರೇಕ್ ಹಾಕಿದ್ದಾರೆ.

 

ಶಿವಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಮೂಲಕ ಬೆಳಗಾವಿಗೆ ಹೊರಟಿದ್ರು. ಬೆಳಗಾವಿಗೆ ತೆರಳಲು ಬಿಡಬೇಕು ಎಂದು ಕ್ಯಾತೆ ತೆಗೆದು ಪ್ರತಿಭಟನೆಗೆ ಕುಳಿತ್ರು. ಆದ್ರೆ ಪೊಲೀಸರು ಶಿವಸೇನೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಲಾಗಿದೆ.

 

ಕರಾಳ ದಿನ ಆಚರಣೆಗೆ ಮುಂದಾಗಿದ್ದ ಎಂಇಎಸ್

 

ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದ್ದು, ರಾಜ್ಯೋತ್ಸವ ಆಚರಣೆಗೆ ವಿರುದ್ಧವಾಗಿ ಎಂಇಎಸ್ ಕರಾಳ ದಿನ ಆಚರಣೆಗೆ ಮುಂದಾಗಿತ್ತು.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿ

Spread the love ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ