Breaking News
Home / Uncategorized / ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಯುವ ಮೋರ್ಚಾ ಪ್ರತಿಭಟನೆ, ಪೊಲೀಸರೊಂದಿಗೆ ಜಟಾಪಟಿ

ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಯುವ ಮೋರ್ಚಾ ಪ್ರತಿಭಟನೆ, ಪೊಲೀಸರೊಂದಿಗೆ ಜಟಾಪಟಿ

Spread the love

 

ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿರುವ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಧ್ವಜವನ್ನು ತೆರವುಗೊಳಿಸದೇ ಅಲ್ಲಿಯೇ ಮುಂದುವರಿಸಬೇಕು ಎಂದು ಧರಣಿ ಮುಂದುವರಿಸಿದ್ದಾರೆ.. ಆದರೆ ಇನ್ನೊಂದೆಡೆ ಎಂಇಎಸ್ ಯುವ ಸಂಘಟನೆಯವರು ಧ್ವಜ ತೆರವುಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಧ್ವಜ ತೆರವುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಸವಾಲು ಎಸೆದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಮಂಗಳವಾರ ಕನ್ನಡ ಧ್ವಜ ಹಾರಿಸಿ, ಕರ್ನಾಟಕದಲ್ಲಿ ಕನ್ನಡ ಧ್ವಜ ಎಲ್ಲಿ ಬೇಕಾದರೂ ಇರಬಹುದು ಎಂದು ಸಂದೇಶ ರವಾನಿಸಿದ್ದರು. ಈಗ ಪಾಲಿಕೆ ಎದುರು ಕನ್ನಡಪರ ಸಂಘಟನೆಗಳ ಹೋರಾಟ ಮುಂದುವರಿದಿದದ್ದು, ಇನ್ನೊಂದೆಡೆ ಎಂಇಎಸ್ ಯುವ ಸಂಘಟನೆಯವರು ಧ್ವಜ ತೆರವುಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಧ್ವಜ ತೆರವುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಎಸೆದರು. ಹಾಗಾಗಿ ಈಗ ಬೆಳಗಾವಿಯಲ್ಲಿ ಕನ್ನಡ ಮರಾಠಿ ಗುಂಪುಗಳ ನಡುವೆ ಜಿದ್ದಾಜಿದ್ದಿ ಭುಗಿಲ್ಲೆದ್ದಿದೆ.

ಈ ವೇಳೆ ಎಂಇಎಸ್ ಯುವ ಮೋರ್ಚಾ ಅಧ್ಯಕ್ಷ ಶುಭಂ ಶೇಳಕೆ ಮಾತನಾಡಿ, ಪಾಲಿಕೆ ಮೇಲೆ ಯಾವುದೇ ಧ್ವಜ ಹಾರಿಸಬಾರದು ಎಂದು ಕೋರ್ಟ್ ನಿರ್ದೇಶನ ಇದೆ. ನಿನ್ನೆ ಧ್ವಜ ಹಾರಿಸಿದವರ ಮೇಲೆ ಪೊಲೀಸರು, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ನಿನ್ನೆ ರಾಷ್ಟ್ರಗೀತೆ, ಭಗವಾ ಧ್ವಜಕ್ಕೂ ಅವಮಾನವಾಗಿದೆ. ಶಾಸಕರು ಮರಾಠಿ ಭಾಷಿಕರ ಪರ ನಿಲ್ಲದಿದ್ದರೆ ಮನೆಯಲ್ಲೇ ಕುಳಿತುಕೊಳ್ಳಲಿ. ಜಿಲ್ಲಾಡಳಿತ ಧ್ವಜ ತೆರವುಗೊಳಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸವಾಲು ಹಾಕಿದರು.

ಈ ನಡುವೆ ಮಾರ್ಕೇಟ್ ಎಸಿಪಿ ಸದಾಶಿವ ಕಟ್ಟೀಮನಿ ಮತ್ತು ಪೊಲೀಸ್ ಅಧಿಕಾರಿಗಳು ಎಂಇಎಸ್ ಮುಖಂಡರ ಮನವೊಲಿಸುವ ಪ್ರಯತ್ನ ನಡೆಸಿದರು. ಕೇವಲ 5 ಜನರು ಬಂದು ಚರ್ಚಿಸಬಹುದು ಎಂದು ಆಹ್ವಾನ ನೀಡಿದರೂ ಬರಲು ಒಪ್ಪುತ್ತಿಲ್ಲ.

ಈ ವೇಳೆ ಎಂಇಎಸ್ ಮುಖಂಡರೊಬ್ಬರು ಮಾತನಾಡಿ, ಡಿಸೆಂಬರ್ 31ರೊಳಗೆ ಕನ್ನಡ ಧ್ವಜ ತೆರವುಗೊಳಿಸಬೇಕು. ಇಲ್ಲವಾದರೆ ಜನವರಿ 1ರಿಂದ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸಬೇಕು. ಇಲ್ಲವಾದರೆ ಎಂಇಎಸ್‍ನಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಒಟ್ಟಿನಲ್ಲಿ ಪಾಲಿಕೆ ಎದುರು ಕನ್ನಡ ಧ್ವಜ ವಿವಾದ ಈಗ ಸಂಘರ್ಷದತ್ತ ತಿರುಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಸೌಹಾರ್ದಯುತ ವಾತಾವರಣ ನೆಲೆಸಲು ಅವಕಾಶ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.


Spread the love

About Laxminews 24x7

Check Also

ಗುದದ್ವಾರಕ್ಕೆ ಏರ್‌ಬಿಟ್ಟು ಯುವಕ ದುರ್ಮರಣ!

Spread the loveಬೆಂಗಳೂರು: ಇಬ್ಬರು ಸ್ನೇಹಿತರು ತಮಾಷೆ ಮಾಡುವ ಬರದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ವಾಹನ ಸರ್ವೀಸ್‌ ಸೆಂಟರ್‌ನಲ್ಲಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ