Breaking News

Laxminews 24x7

ಜನಸಾಮಾನ್ಯರಿಂದ ಹಾಗೂ ವ್ಯಾಪಾರಸ್ಥರಿಂದ ಕರ್ಪ್ಯೂಗೆ ಸಂಪೂರ್ಣ ಬೆಂಬಲ:ಘಟಪ್ರಭಾ

ಘಟಪ್ರಭಾ : ಪಟ್ಟಣದಲ್ಲಿ ಜನಸಾಮಾನ್ಯರಿಂದ ಹಾಗೂ ವ್ಯಾಪಾರಸ್ಥರಿಂದ ಕರ್ಪ್ಯೂಗೆ ಸಂಪೂರ್ಣ ಬೆಂಬಲ ಘಟಪ್ರಭಾ-ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶಿಸಿದಂತೆ ಇಂದು ಕರ್ಪ್ಯೂಗೆ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ವ್ಯಾಪಾರಸ್ಥರಿಂದ ಮತ್ತು ಸಾರ್ವಜನಿಕರಿಂದ ಉತ್ತಮ ಸಹಕಾರ ನೀಡಿದ್ದು ಸಂಪೂರ್ಣ ನಿನ್ನೆಯಿಂದಲೇ ಸ್ತಬ್ಧವಾಗಿದೆ. ಪಟ್ಟಣದಲ್ಲಿ ತುರ್ತು ಸೇವೆ ಇರುವಂತವರು ಹಾಗೂ ದ್ವಿಚಕ್ರ ವಾಹನಗಳು ಮೂಲಕ ಕಂಡು ಬಂದರೆ ಉಳಿದೆಲ್ಲಾ ಪೂರ್ಣ ಸ್ತಬ್ಧವಾಗಿದೆ.ಅಗತ್ಯ ಸೇವೆಗೆಂದು ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಹೊರತು ಪಡಿಸಿ ಉಳಿದ ಎಲ್ಲವೂ …

Read More »

ಗೋಕಾಕ್ : ಕ್ವಾರಂಟೈನಲ್ಲಿದ್ದ ಮಹಿಳೆ ಪರಾರಿ, ಜನರಲ್ಲಿ ಆತಂಕ

ಗೋಕಾಕ : ಗೋಕಾಕನಗರದ ಹಾಸ್ಟೇಲೊಂದರಲ್ಲಿ ಕ್ವಾರಂಟನ್‍ನಲ್ಲಿದ್ದ ಮಹಿಳೆಯೊರ್ವಳು ಪರಾರಿಯಾಗಿದ್ದ ಘಟನೆ ಶನಿವಾರದಂದು ಸಂಜೆ ಜರುಗಿದೆ. ಮಹಾರಾಷ್ಟ್ರದ ಗಡಹಿಂಗ್ಲಜ್‍ದ ನೂಲಿ ಗ್ರಾಮದ ಮಹಿಳೆಯು ತನ್ನ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಕಳೆದ 4 ದಿನಗಳ ಹಿಂದೆ ಗೋಕಾಕ ತಾಲೂಕಿನ ಪಂಜಾನಟ್ಟಿ ಗ್ರಾಮದ ತವರು ಮನೆಗೆ ಬಂದಿದ್ದಳು. ಮಹಿಳೆಯು ಮಹಾರಾಷ್ಟ್ರ ರಾಜ್ಯದಿಂದ ಬಂದಿದ್ದಾಳೆಂದು ಗ್ರಾಮಸ್ಥರು ಪೋಲೀಸರಿಗೆ ತಿಳಿಸಿ ಅವರ ಸಹಾಯದಿಂದ ನಗರದ ಬಿಸಿಎಮ್ ಹಾಸ್ಟೇಲ್‍ನಲ್ಲಿ ಕ್ವಾರಂಟನ್‍ನಲ್ಲಿ ಇರಿಸಿದ್ದರು. ಆದರೆ ಮಹಿಳೆಯು ಫೇರೋಲ್ ಮೇಲೆ …

Read More »

ಕೊರೊನಾಗೆ ದೆಹಲಿ ಏಮ್ಸ್‌ನ ಹಿರಿಯ ವೈದ್ಯ ಬಲಿ – ಪತ್ನಿಗೂ ಸೋಂಕು……..

ನವದೆಹಲಿ: ಕೊರೊನಾ ದೇಶದಲ್ಲಿ ರುದ್ರನರ್ತನ ಮಾಡುತ್ತಿದ್ದು, ದೆಹಲಿ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಸೋಂಕು ತಗಲಿ ಸಾವನ್ನಪ್ಪಿದ್ದಾರೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನ ಹಿರಿಯ ವೈದ್ಯರರಾದ ಡಾ.ಜಿತೇಂದ್ರ ನಾಥ್ ಪಾಂಡೆ (78) ಶನಿವಾರ ಸಾವನ್ನಪ್ಪಿದ್ದಾರೆ. ಇವರು ಏಮ್ಸ್‌ನ ಶ್ವಾಸಕೋಶಶಾಸ್ತ್ರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವಿಭಾಗ ಒಂದು ವಾರದಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಜಿತೇಂದ್ರ ನಾಥ್ ಪಾಂಡೆ ಮತ್ತು ಅವರ ಪತ್ನಿಗೂ ಕಳೆದ …

Read More »

ಟಿಕ್‍ಟಾಕ್ ಬ್ಯಾನ್ ಮಾಡಿದ್ರೆ ಜನರ ಮನಸ್ಥಿತಿ ಬದಲಾಗಲ್ಲ: ಸಂಯುಕ್ತಾ ಹೆಗ್ಡೆ

ಬೆಂಗಳೂರು: ಟಿಕ್‍ಟಾಕ್ ಬ್ಯಾನ್ ಮಾಡಿದರೆ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ. ಸ್ವದೇಶಿ ವಸ್ತುಗಳನ್ನು ಬಳಸಿ ಚೀನಾದ ವಸ್ತುಗಳನ್ನು ಬಹಿಷ್ಕಾರ ಮಾಡಿ ಎಂಬ ಕೂಗು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿಬರುತ್ತಿದೆ. ಹೀಗಾಗಿ ಟಿಕ್‍ಟಾಕ್ ಆ್ಯಪ್ ಚೀನಾದ ದೇಶದ್ದು ಎಂಬ ಕಾರಣಕ್ಕೆ ಅದನ್ನು ಭಾರತದಲ್ಲಿ ಬ್ಯಾನ್ ಮಾಡಿ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಈಗ ಪರ-ವಿರೋಧ ಚರ್ಚೆಗಳು ಜೋರಾಗಿ …

Read More »

ನಟ ಧ್ರುವ ಸರ್ಜಾರ ಡೈಲಾಗ್ ಮೆಮೊರಿ ಪವರ್‌ಗೊಂದು ಸಲಾಂ: ಹರಿಪ್ರಿಯಾ

ಬೆಂಗಳೂರು: ನಟ ಧ್ರುವ ಸರ್ಜಾರ ಡೈಲಾಗ್ ಮೆಮೊರಿ ಪವರ್‌ಗೊಂದು ಸಲಾಂ ಎಂದು ನಟಿ ಹರಿಪ್ರಿಯಾ ಅವರು ಹೇಳಿದ್ದಾರೆ. ಲಾಕ್‍ಡೌನ್‍ನಿಂದ ಸಿನಿಮಾ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕುಳಿತಿರುವ ಹರಿಪ್ರಿಯಾ ಅವರು, ತಮ್ಮ ಬ್ಲಾಗ್‍ನಲ್ಲಿ ಕಥೆಗಳನ್ನು ಅವರ ಅನುಭವಗಳನ್ನು ಬರೆಯುತ್ತಿರುತ್ತಾರೆ. ಹೀಗೆ ಹರಿಪ್ರಿಯಾ ತಮ್ಮ ಬ್ಲಾಗ್‍ನಲ್ಲಿ ನಟ ಧ್ರುವ ಸರ್ಜಾ ಅವರ ಬಗ್ಗೆ ಬರೆದಿದ್ದು, ಧ್ರುವ ಸಿಂಪಲ್ ಹುಡುಗ ಎಂದು ಹಾಡಿಹೊಗಳಿದ್ದಾರೆ. ಜೊತೆಗೆ ಲಾಕ್‍ಡೌನ್ ನಡುವೆ ಧ್ರುವ ಸರ್ಜಾಗೆ ಕರೆ ಮಾಡಿ ಮಾತನಾಡಿರುವ …

Read More »

ಹಾಸನ:ಪೊಲೀಸ್ ಪೇದೆ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಪಾಸಿಟಿವ್

ಹಾಸನ: ಇಂದು ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆ ಕಂಡಿದೆ. ಪೊಲೀಸ್ ಪೇದೆ ಮತ್ತು ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಹಾಸನದಲ್ಲಿಂದು ಮತ್ತೆ 14 ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸತ್ಯವಂಗಲ ಹಾಗೂ ಉತ್ತರ ಬಡಾವಣೆಯ ಒಂದು ರಸ್ತೆ ಸೀಲ್‍ಡೌನ್ ಮಾಡಲಾಗಿದೆ. ಕೊರೊನಾ ದೃಢಪಟ್ಟಿರುವ ಪೇದೆ ಹಾಸನ ನಗರದ ಪೊಲೀಸ್ …

Read More »

ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ,ಬೇಸತ್ತ ಪೊಲೀಸರ ಲಾಠಿ ಚಾರ್ಜ್

ರಾಯಚೂರು: ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಇದರಿಂದ ಬೇಸತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ತಿಂಗಳ ಅಂತ್ಯದ ವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಜನ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಹೀಗೆ ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ರಾಜ್ಯದ ಬಹುತೇಕ ಕಡೆ ಲಾಕ್‍ಡೌನ್ ಉಲ್ಲಂಘಿಸಲಾಗುತ್ತಿದ್ದು, ಜನ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ರಾಯಚೂರಿನಲ್ಲಿ ಸಹ ಇಂದು ಬೈಕ್ ಸಂಚಾರ ಹೆಚ್ಚಾಗಿತ್ತು. ಹೀಗಾಗಿ ಪೊಲೀಸರು …

Read More »

ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿದೆ.

ಬೆಂಗಳೂರು: 1,450 ಪ್ರವಾಸಿ ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿ ಘಾಜಿಯಾಬಾದ್ ತಲುಪಿದೆ. ಗುರುವಾರ ಸಂಜೆ ಬೆಂಗಳೂರಿನ ಚಿಕ್ಕಬಾಣವಾರ ಸ್ಟೇಶನ್ ನಿಂದ ಹೊರಟಿದ್ದ ರೈಲು ಉತ್ತರ ಪ್ರದೇಶದ ಬಸ್ತಿ ತಲುಪಬೇಕಿತ್ತು. 20 ಗಂಟೆಗೂ ಅಧಿಕ ಸಮಯದವರೆಗೆ ಪ್ರವಾಸಿ ಕಾರ್ಮಿಕರು ಊಟ ಮಾಡಿಲ್ಲ. ಇನ್ನು ಹಲವರಿಗೆ ತಾವು ಊರು ಸೇರುತ್ತೇವೆ ಎಂಬ ನಂಬಿಕೆ ಇಲ್ಲ ಅನ್ನೋ ಅನುಮಾನ ಮೂಡಿದೆ. ಗುರುವಾರ ಸಂಜೆ 6.45ಕ್ಕೆ ಚಿಕ್ಕಬಾಣವಾರದಿಂದ ಈ …

Read More »

“ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರ ಏಟು ಆತನ ಸಾವಿಗೆ ಕಾರಣವಾಯ್ತು ಎನ್ನುವ ವದಂತಿ ಹರಡಿದೆ”.?

ಅಥಣಿ –  ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರ ಏಟು ಆತನ ಸಾವಿಗೆ ಕಾರಣವಾಯ್ತು ಎನ್ನುವ ವದಂತಿ ಹರಡಿದೆ. ಜಗದೀಶ್ ಸುರೇಶ ತೆಗ್ಗಿನವರ (26)ಮೃತ ಯುವಕ. ಅಂಗಡಿ ಬಾಗಿಲು ಹಾಕದ ಹಿನ್ನೆಲೆಯಲ್ಲಿ ಕಾಗವಾಡ ಪೋಲಿಸರು ಈ ಯುವಕನಿಗೆ ಥಳಿಸಿದ್ದರೆನ್ನಲಾಗಿದೆ. ಸ್ವಲ್ಪ ಹೊತ್ತಿನ ನಂತರ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಆತ ಸಾವಿಗೀಡಾಗಿದ್ದಾನೆ. ಸಾವಿನಲ್ಲಿ ಅನುಮಾನವಿದೆ, ತನಿಖೆ ನಡೆಸಬೇಕೆಂದು …

Read More »

ಕೊರೊನಾ ವರದಿ ನೆಗೆಟಿವ್ ಬಂದಿದ್ರೂ ಆತ್ಮಹತ್ಯೆ……….

ಚಿಕ್ಕಮಗಳೂರು: ವ್ಯಕ್ತಿಯೋರ್ವ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೇ 19ರಂದು ಕೊಪ್ಪ ಮೂಲದ 53 ವರ್ಷದ ವ್ಯಕ್ತಿಯ ಗಂಟಲು ಮೂಗಿನ ದ್ರವ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಹಾಗಾಗಿ ವ್ಯಕ್ತಿಯನ್ನು ಮೇ 20ರಂದು ಚಿಕ್ಕಮಗಳೂರಿನ ಕೆಎಸ್‍ಓಯು ಕಟ್ಟಡದಲ್ಲಿರುವ ಕೋವಿಡ್-19 ಕೇರ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿತ್ತು. ಸಾಂದರ್ಭಿಕ ಚಿತ್ರ ನೋವು ಮತ್ತು ರಕ್ತಸ್ರಾವದ ಮೂಲವ್ಯಾಧಿ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಐಸೋಲೇಶನ್ ವಾರ್ಡಿಗೆ …

Read More »