Breaking News

Laxminews 24x7

ಬೆಳಗಾವಿ | ₹4,746 ಕೋಟಿ ಕಬ್ಬಿನ ಬಿಲ್‌ ಬಾಕಿ: 10 ಸಕ್ಕರೆ ಕಾರ್ಖಾನೆಗೆ ನೋಟಿಸ್‌

ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಶೇ 60ಕ್ಕಿಂತ ಕಡಿಮೆ ಬಿಲ್‌ ಪಾವತಿಸಿದ (ಫೆ.28ರ ವರೆಗೆ) 10 ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಆಯುಕ್ತರು ನೋಟಿಸ್‌ ಕೊಟ್ಟಿದ್ದಾರೆ. ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳು 550 ಲಕ್ಷ ಟನ್‌ ಕಬ್ಬು ನುರಿಸಿ, 47.35 ಲಕ್ಷ ಟನ್‌ ಲಿ ಸಕ್ಕರೆ ಉತ್ಪಾದಿಸಿವೆ. ಒಟ್ಟು ₹22,171 ಕೋಟಿ ಬಿಲ್‌ ಪಾವತಿಸಬೇಕಿದ್ದು,₹4,741 ಕೋಟಿ ಬಾಕಿ ಉಳಿಸಿಕೊಂಡಿವೆ. ‘ವಿವಿಧ ಕಾರ್ಖಾನೆಗಳು ಬಿಲ್‌ ಪಾವತಿಸಿದ ಪ್ರಮಾಣ ಶೇ 78ರಷ್ಟಿದೆ. …

Read More »

ಮಾನವೀಯತೆಯನ್ನ ಮಾರಿಕೊಂಡ ವಿಕ್ಟೋರಿಯಾ ಆಸ್ಪತ್ರೆ..!?

ಫೆವಿಕಲ್ ಕುಡಿದು 2 ವರ್ಷದ ಮಗು ಮೃತಪಟ್ಟಿತ್ತು. ಪೋಸ್ಟ್ ಮಾರ್ಟಂ ಗೆ ವಿಕ್ಟೋರಿಯಾ ಆಸ್ಪತ್ರೆಗೆ ಶವ ತೆಗೆದುಕೊಂಡು ಹೋಗಿದ್ರು. ರಾಜಸ್ಥಾನ ರಾಜ್ಯದಿಂದ ಬಂದ ಕುಟುಂಬ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡ್ತಿತ್ತು. ಆಟ ಆಡುವಾಗ ಮಗು ಫೆವಿಕಲ್ ಕುಡಿದು ಜೀವ ಬಿಟ್ಟಿತ್ತು. ಪೋಸ್ಟ್ ಮಾರ್ಟಂ ಮಾಡಲು ಅಲ್ಲಿನ ಸಿಬ್ಬಂಧಿ, ಮಧ್ಯವರ್ತಿಗಳು ಸೇರಿ 10 ಸಾವಿರ ಹಣ ಪೀಕಿದ್ದಾರೆ. ಬೆಳಗ್ಗೆಯಿಂದ ಮಗುವಿನ ತಂದೆ ಆಸ್ಪತ್ರೆಯ ಆವರಣದಲ್ಲಿ ಕಂಡ ಕಂಡವ್ರ ಬಳಿ ಕೈ ಚಾಚಿ …

Read More »

15 ದಿನದ ಮಗುವಿಗೆ ತಂದೆ ವಿಷಪ್ರಾಶನ ?: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ

ಬೆಳಗಾವಿ: ಪ್ರಪಂಚವನ್ನೇ ಕಾಣದ 15 ದಿನದ ಮಗುವಿಗೆ ಪಾಪಿ ತಂದಯೇ ವಿಷಪ್ರಾಶನ ಮಾಡಿದ್ದಾನೆ ಎಂದು ಹೆತ್ತ ತಾಯಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ಘೋರ ಘಟನೆ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿದೆ. ಉಸಿರು ಚೆಲ್ಲಿದ ಮಗುವನ್ನು ನೋಡಲಾಗದೇ ಹೆತ್ತತಾಯಿ ಮೌನಕ್ಕೆ ಜಾರಿದ್ದಾರೆ. ಎರಡಯ ವಾರಗಳ ಹಿಂದೆಯಷ್ಟೇ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಮಗುವನ್ನು ನೋಡಲು ಬಂದ ತಂದನೇ ಕರುಳು ಬಳ್ಳಿಗೆ ವಿಷಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಇಂತಹ …

Read More »

ಭಾರಿ ಮಳೆ,ಗೋಡೆ ಕುಸಿದು ಮಹಿಳೆ ಸಾವು

ಬೆಳಗಾವಿ : ನಗರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಮಹಿಳೆಯೊಬ್ಬಳು ಮೃತಪಟ್ಟಿದ್ದು ಪತಿ ಸ್ವಲ್ಪದರಲ್ಲೇ ಪಾರಾದ ಘಟನೆ ಹೊಸೂರ ಗ್ರಾಮದಲ್ಲಿ ನಡೆದಿದೆ. ವಂಟಮೂರಿ ಗ್ರಾಮದ ಪರ್ವಿನ್ ಬೇಪಾರಿ (34) ಮೃತ ದುರ್ದೈವಿ. ಸ್ವಲ್ಪದರಲ್ಲೇ ಪತಿ ಶರೀಫ್ ಪಾರಾಗಿದ್ದಾನೆ. ಕೋಳಿ ವ್ಯಾಪಾರಕ್ಕೆ ಹೊರಟಿದ್ದ ದಂಪತಿ ಮಳೆ ಬಂದ ಕಾರಣಕ್ಕೆ ಹಳೆಯದಾದ ಮನೆ ಪಕ್ಕ ನಿಂತಿದ್ದರು. ಈ ವೇಳೆ ಗೋಡೆ ಕುಸಿದಿದೆ. ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಬಿಜೆಪಿ ಅವಧಿಯ ಅಭಿವೃದ್ಧಿ ಕೆಲಸಗಳೆ ಗೆಲುವಿಗೆ ಶ್ರೀರಕ್ಷೆ : ಪಿ. ರಾಜೀವ

ಬಿಜೆಪಿಯಿಂದ ಉಪ ಚುನಾವಣಾ ಪೂರ್ವ ಭಾವಿ ಸಭೆ ಬಾಗಲಕೋಟೆ : ಕಳೆದ ಮೂರು ವರ್ಷಗಳ ಅಭಿವೃದ್ಧಿ ಶೂನ್ಯ, ಬರಿ ಹಗರಣಗಳ ಕಾಂಗ್ರೆಸ್ಸ ಸರಕಾರದಿಂದ ಜನ ಬೇಸತ್ತು ಹೋಗಿದ್ದು ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಲು ಬಾಗಲಕೋಟೆ ಜನ ತುದಿಗಾಲಿನ ಮೇಲೆ ನಿಂತಿದ್ದಾರೆ, ಇಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮಂತ್ರವಾಗಿದೆ ಎಂದು ರಾಜ್ಯ ಪ್ರದಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು, ಅವರು ನವನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ …

Read More »

ಸಿದ್ದರಾಮಯ್ಯ ಸಂಧಾನ ಯಶಸ್ವಿ: ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಫೈನಲ್

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ  ಘೋಷಣೆಯಾಗು ತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ‘ಕುಟುಂಬ ರಾಜಕಾರಣ’ದ ಬಿಸಿ ತಟ್ಟಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಹೌದು…ಮಾಜಿ ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದಲ್ಲಿ ಟಿಕೆಟ್‌ಗಾಗಿ ಭಿನ್ನಮತ ಸ್ಪೋಟಗೊಂಡಿತ್ತು. ಇದರ ಬೆನ್ನಲ್ಲೇ ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಇಂದು (ಮಾರ್ಚ್ 18) ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಮೇಟಿ …

Read More »

ಜೆಡಿಎಸ್‌ನಲ್ಲಿ ಇದ್ದೀನಿ, ಮುಂದೆಯೂ ಇರ್ತೀನಿ – ಕ್ಷೇತ್ರದಲ್ಲಿ ಭಾವನಾತ್ಮಕ ದಾಳ ಪ್ರಯೋಗಿಸಿದ ಜಿಟಿಡಿ

ಮೈಸೂರು: ಮುಂದಿನ ಚುನಾವಣೆಯಲ್ಲಿ  ಜೆಡಿಎಸ್  ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಮೈಸೂರಿನ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ  ಸ್ಪಷ್ಟಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ  ಜಯಪುರ ಗ್ರಾಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡದಿದ್ದರೆ ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ ಎಂದು ಕ್ಷೇತ್ರದ ಜನರ ಮುಂದೆ ಭಾವನಾತ್ಮಕ ದಾಳ ಉರುಳಿಸಿದ್ದಾರೆ. ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ, ಇರುತ್ತೇನೆ. ಟಿಕೆಟ್ ಕೊಡದಿದ್ರೆ ಮತದಾರರು ನೀವು ಏನು …

Read More »

ಹೃದಯಾಘಾತದಿಂದ ಹೆಡ್‌ ಕಾನ್ಸ್‌ಟೇಬಲ್ ಸಾವು

ಕೋಲಾರ: ಹೃದಯಾಘಾತಕ್ಕೊಳಗಾಗಿ ಪೊಲೀಸ್ ಮುಖ್ಯಪೇದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ  ನಡೆದಿದೆ. ಕೋಲಾರ ತಾಲೂಕಿನ ಸೀಸಂದ್ರ ಗ್ರಾಮದ ವೆಂಕಟರಮಣಪ್ಪ (50) ಮೃತ ದುರ್ದೈವಿ. ವೆಂಕಟರಮಣಪ್ಪ ಕೆಜಿಎಫ್ ಜಿಲ್ಲಾ ಪೊಲೀಸ್‌ನ ಊರಿಗಾಂ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ತೂಕ ಕಡಿಮೆ ಮಾಡುವ ಹಿನ್ನೆಲೆ ವೆಂಕಟರಮಣಪ್ಪ ಡಯಟ್ ಸೇರಿದಂತೆ ಔಷಧ ತೆಗೆದುಕೊಳ್ಳುತ್ತಿದ್ದರು. ಇಂದು ಮುಂಜಾನೆ ಮನೆಯಲ್ಲೇ ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

Read More »

ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಉಪಮೇಯರ್ ಆಯ್ಕೆ

ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್, ಉಪಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಆಯ್ಕೆ ಕೋರ ಕಮಿಟಿ ಸಭೆ ನಡೆಸಿ ಮೇಯರ್, ಉಪಮೇಯರ್ ಸ್ಥಾನಗಳಿಗೆ ಹೆಸರು ಅಂತಿಮ 24ನೇ ಅವಧಿಗೆ ಮೇಯರ್ ಆಗಿ ನೇಕಾರರು ಸಮಾಜದ ಪ್ರೀತಿ ಕಾಮಕರ್ ಮೇಯರ್ ಉಪ ಮೇಯರ್ ಸ್ಥಾನಕ್ಕೆ ಲಿಂಗಾಯತ ಸಮಾಜದ ಹನುಮಂತ ಕೊಂಗಾಲಿ ಆಯ್ಕೆ ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ ಹೇಳಿಕೆ ಪ್ರೀತಿ ಕಾಮಕರ್, ಹನುಮಂತ ಕೊಂಗಾಲಿ ಉಪಮೇಯರ್ ಆಗಿ ಆಯ್ಕೆ …

Read More »

ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಎಸ್‌ಐಟಿ 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್‌ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್‌ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಪ್ರಕರಣದಲ್ಲಿ 52 …

Read More »