ರಾಮದುರ್ಗ:ಸುರೇಬಾನ ಉಪ ಠಾಣೆಯನ್ನು 2018ರಲ್ಲಿಯೇ ಮೇಲ್ದರ್ಜೆಗೇರಿಸಿ, ಪೊಲೀಸ್ ಠಾಣೆಯಾಗಿ ಪರಿವರ್ತನೆ ಮಾಡಿಸಿದ್ದೇನೆ. ಈಗ ಮತ್ತೆ ಅದರ ಕಟ್ಟಡ ನಿರ್ಮಾಣ ಕಾಮಗಾರಿಗೂ ಸಹ ಅಧಿಕಾರದ ಅವಧಿಯಲ್ಲಿ ಚಾಲನೆ ನೀಡಿದ್ದೇನೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು. ತಾಲೂಕಿನ ಸುರೇಬಾನ ಪೊಲೀಸ್ ಠಾಣೆಗೆ 1.80 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪೊಲೀಸರು ಹೆಲ್ಮೆಟ್ ಹಾಕುವಂತೆ ಸೂಚಿಸಿದರೂ ಧರಿಸದೇ ವಾಹನ ಚಲಾಯಿಸುವುದು ಸರಿಯಲ್ಲ. …
Read More »ಅಭಿವೃದ್ಧಿಯ ಹರಿಕಾರರು ಶೋಷಿತ ವರ್ಗಗಳ ಆಶಾಕಿರಣ ಬಡವರ ಬಂಧು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಜನ್ಮದಿನಾಚರಣೆ ಸಂಭ್ರಮ
ದೇವನಹಳ್ಳಿ: ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರ ಜನ್ಮದಿನಾಚರಣೆಯನ್ನು ದೇವನಹಳ್ಳಿ ತಾಲ್ಲೂಕಿನ ಕ್ರೀಡಾಂಗಣದಲ್ಲಿ (ಕೋರ್ಟ್ ಮುಂಭಾಗ) ಭಕ್ತಿಪೂರ್ವಕವಾಗಿ ಹಾಗೂ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಧಾರ್ಮಿಕ ಮೆರಗು ನೀಡಿದರು. ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ, ಪೂಜ್ಯ ಶ್ರೀ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ …
Read More »ಸಿಲಿಂಡರ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ – ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ
ಬೆಂಗಳೂರು: ಸಿಲಿಂಡರ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಕೆಪಿಸಿಸಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಖಾಲಿ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವಗುರು ಮೋದಿ ದೇಶ ಮಾರಾಟ ಮಾಡುತ್ತಾರೆ ಎಂದು ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, …
Read More »ಸಾಯಿ ಸ್ಪೋರ್ಟ್ಸ್ ತಂಡಕ್ಕೆ ಸುಳೇಭಾವಿ ಚಾಂಪಿಯನ್ಸ್ ಟ್ರೋಫಿ
ಬೆಳಗಾವಿ : ಸುಳೇಭಾವಿ ಗ್ರಾಮದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ “ಸುಳೇಭಾವಿ ಚಾಂಪಿಯನ್ಸ್ ಟ್ರೋಫಿ” ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪಂದ್ಯಾವಳಿಯ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಶ್ರೀ ಸಾಯಿ ಸ್ಪೋರ್ಟ್ಸ್, ಸುಳೇಭಾವಿ ತಂಡಕ್ಕೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಸಂಜೆ ಪ್ರಶಸ್ತಿ ವಿತರಿಸಿದರು. ದ್ವಿತೀಯ ಸ್ಥಾನ ಪಡೆದ ಸುಳೇಭಾವಿ ಈಗಲ್ಸ್ ಹಾಗೂ ತೃತೀಯ ಸ್ಥಾನ ಪಡೆದ …
Read More »ಜಿಬಿಎ 5 ನಗರ ಪಾಲಿಕೆಯ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ
ಬೆಂಗಳೂರು: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಯ ವಾರ್ಡ್‌ಗಳಿಗೆ ಮೀಸಲಾತಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 8ರಂದು ಕರುಡು ಪ್ರತಿ ಬಿಡುಗಡೆ ಮಾಡಿ 15 ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕೆಲವೊಂದು ಆಕ್ಷೇಪಣೆಗಳನ್ನ ಸ್ವೀಕರಿಸಿ ಬದಲಾವಣೆ ಮಾಡಿದ ನಗರಾಭಿವೃದ್ಧಿ ಇಲಾಖೆ ಸರ್ಕಾರಕ್ಕೆ ಮೀಸಲಾತಿ ಪಟ್ಟಿಯನ್ನು ಸಲ್ಲಿಸಿತ್ತು. ವಾರ್ಡ್ ಮೀಸಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ಹಿನ್ನೆಲೆ ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇನ್ನು ಯಾವ್ಯಾವ …
Read More »ಯುವ ನಾಯಕ ರಾಹುಲ್ ಜಾರಕಿಹೊಳಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು
ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಪ್ರಸಾದ್ ನಾಯಿಕ (ನಾಯಕಗೌಡರು) ಅವರ ಮದುವೆಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವರ–ವಧುವರಿಗೆ ಶುಭಾಶಯ ಕೋರಿದರು. ಈ ವೇಳೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಅಭಿಮಾನಿಗಳೊಂದಿಗೆ ಮಾತನಾಡಿ, ಹೊಸ ದಂಪತಿಗೆ ಸುಖಮಯವಾದ ದಾಂಪತ್ಯ ಜೀವನವಾಗಲಿ ಎಂದು ಆಶಿಸಿದರು. ಮದುವೆ ಸಮಾರಂಭದಲ್ಲಿ ಹಲವಾರು ಗಣ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಕಾರ್ಯಕ್ರಮವು ಹರ್ಷೋದ್ಗಾರಗಳ ನಡುವೆ …
Read More »ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬೇಕು, ಸಿಎಂ, ಸಚಿವರು ಏನೂ ಮಾತನಾಡಿಲ್ಲ: ಹೆಚ್.ಎಂ ರೇವಣ್ಣ
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡುತ್ತೇವೆ, ಆದರೆ ಸಿಎಂ, ಸಚಿವರು ಇನ್ನೂ ಈ ಬಗ್ಗೆ ಮಾತನಾಡಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, 51 ಸಾವಿರ ಕೋಟಿ ಇಟ್ಟು ಗ್ಯಾರಂಟಿ ಯಶಸ್ವಿಯಾಗಿದೆ. 91% ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ. ಲಂಚ ಇಲ್ಲದೆ ಯೋಜನೆಗಳ ಹಣ ನೇರ ವರ್ಗಾವಣೆ ಆಗಿದೆ. ಯಾರೆಲ್ಲ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು …
Read More »ರೈತ, ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು: ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ: ರೈತ ಮತ್ತು ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು. ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗ ಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 60 …
Read More »ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಹಣ ನೀಡಿಲ್ಲ : ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: ಸೇತುವೆಗಳ ನಿರ್ಮಾಣ ಹಾಗೂ ಇತರ ಕಾಮಗಾರಿಗಳನ್ನು ಒಳಗೊಂಡು ಲೋಕೋಪಯೋಗಿ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿರುವುದರಿಂದ ಈ ಬಾರಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಳಿದ ಎಲ್ಲವನ್ನೂ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಕೊಟ್ಟಿದ್ದಾರೆ. ಸೇತುವೆಗಳ ನಿರ್ಮಾಣಕ್ಕೆ 20 ವರ್ಷಗಳಿಂದಲೂ ಆಧ್ಯತೆ ನೀಡಿರಲಿಲ್ಲ. ಈ ಬಾರಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಸಿಕ್ಕಿದೆ. ಇದರಿಂದ ನಮಗೆ ನಿಭಾಯಿಸಲು …
Read More »ಕೇಂದ್ರದ ಅನ್ಯಾಯದಿಂದ ಸಾಲದ ಹೊರೆ – ಸಾಲರಾಮಯ್ಯ ಎಂದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಬೀದರ್: ಕೇಂದ್ರದ ಅನ್ಯಾಯದಿಂದ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬೀದರ್‌ನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಜೆಟ್ ವಿಚಾರವಾಗಿ ಸಾಲಾರಾಮಯ್ಯ ಎಂದು ವ್ಯಂಗ್ಯ ಮಾಡಿದ್ದ ಬಿಜೆಪಿ ವಿರುದ್ಧ ಹರಿಹಾಯ್ದರು. ಅವರಿಗೆ ದೇಶ ಮತ್ತು ರಾಜ್ಯವನ್ನ ಆರ್ಥಿಕವಾಗಿ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಕೇಂದ್ರ ಸರ್ಕಾರ …
Read More »
Laxmi News 24×7