Breaking News

ಮದುವೆ ಆಗ್ತೀನಿ ಅಂತ ನಂಬಿಸಿ ಯುವತಿಗೆ ವಂಚನೆ ಆರೋಪ – ಎಫ್‌ಐಆರ್‌ ಆದ್ರೂ ಪೊಲೀಸರು ಸೈಲೆಂಟ್

Spread the love

ದಾವಣಗೆರೆ: ಪ್ರೀತಿ ಪ್ರೇಮದ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಯುವಕನೊಬ್ಬ ವಂಚಿಸಿದ ಪ್ರಕರಣ ಹರಿಹರದಲ್ಲಿ ನಡೆದಿದೆ.

ಮಲೆಬೆನ್ನೂರು  ಮೂಲದ ಮುಷ್ರಫ್ ಖಾನ್ ಎಂಬಾತನ ವಿರುದ್ಧ ದಾವಣಗೆರೆಯ ಯುವತಿ ವಂಚನೆ ಆರೋಪ ಮಾಡಿದ್ದಾಳೆ. ಮುಷ್ರಫ್ ಮದುವೆ ಆಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಈಗ ನಾಪತ್ತೆಯಾಗಿದ್ದಾನೆ. ಅಲ್ಲದೇ ಪ್ರಭಾವಿ ನಾಯಕರ ಸಂಬಂಧಿ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಮದುವೆ ಆಗಲು 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನ್ಯಾಯಕ್ಕಾಗಿ ಯುವತಿ ಹೋರಾಟ ಮಾಡುತ್ತಿದ್ದಾಳೆ. ಯುವಕ ಹಾಗೂ ಆತನಿಗೆ ಸಾಥ್ ನೀಡುತ್ತಿರುವವರನ್ನು ಬಂಧಿಸುವಂತೆ ಯುವತಿ ಆಗ್ರಹಿದ್ದಾಳೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ