Breaking News

ಟ್ರಾಫಿಕ್​ ಜಾಮ್​: ವಿಶ್ವದಲ್ಲೇ ಸಿಲಿಕಾನ್​ ಸಿಟಿ ಬೆಂಗಳೂರಿಗೆ 2ನೇ ಸ್ಥಾನ

Spread the love

ಶ್ರೀಮಂತ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮಗಳ ಕಾರಣದಿಂದ ಬೆಂಗಳೂರನ್ನು ಭಾರತದ ಸಿಲಿಕಾನ್​ ವ್ಯಾಲಿ ಎಂದು ಕರೆಯುತ್ತಾರೆ. ಆದರೆ, ದುರಾದೃಷ್ಟವಶಾತ್ ಇದೇ ಬೆಂಗಳೂರು​ ಟ್ರಾಫಿಕ್​ ಜಾಮ್​ ಕುಖ್ಯಾತಿಯನ್ನು ಹೊಂದಿದೆ.

ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್​ ಕಿರಿಕಿರಿಯನ್ನು ಅನುಭವಿಸಿದ್ದಾರೆ.

ಇತ್ತೀಚೆಗೆ ಜಿಯೋಲೊಕೇಶನ್ ತಂತ್ರಜ್ಞಾನ ಸಂಸ್ಥೆ ಟಾಮ್​ ಟಾಮ್, ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ನಿಧಾನಗತಿಯ ನಗರಗಳಲ್ಲಿ ಬೆಂಗಳೂರು ಕೂಡ ಒಂದೆನಿಸಿಕೊಂಡಿದೆ. ಟ್ರಾಫಿಕ್​ ಸಮಯದಲ್ಲಿ ಕೇವಲ 10 ಕಿ.ಮೀ ಪ್ರಯಾಣಿಸಲು ಸರಾಸರಿ ಅರ್ಧ ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಈ ಪಟ್ಟಿಯಲ್ಲಿ ಲಂಡನ್​ ಮೊದಲ ಸ್ಥಾನದಲ್ಲಿದೆ.

ಚಾಲನಾ ವೆಚ್ಚ, ಟ್ರಾಫಿಕ್‌ನಲ್ಲಿ ಕಳೆಯುವ ಸಮಯ ಮತ್ತು ಸುದೀರ್ಘ ಟ್ರಾಫಿಕ್ ಜಾಮ್‌ಗಳಿಂದ ಇಂಗಾಲದ ಹೊರಸೂಸುವಿಕೆ ಮುಂತಾದ ಅಂಶಗಳನ್ನು ಟಾಮ್​ಟಾಮ್​ ನಡೆಸಿದ ಅಧ್ಯಯನದಲ್ಲಿ ಪರಿಗಣಿಸಲಾಗಿದೆ.

ನಿಧಾನಗತಿಯ ನಗರಗಳ ಪಟ್ಟಿಯಲ್ಲಿ ಯುನೈಟೆಡ್​ ಕಿಂಗ್​ಡಮ್​ ಲಂಡನ್​ ಮೊದಲ ಸ್ಥಾನದಲ್ಲಿದ್ದರೆ, ಭಾರತ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನ ಕಾಯ್ದುಕೊಂಡಿದೆ. ಮೂರನೇ ಸ್ಥಾನದಲ್ಲಿ ಐರ್ಲೆಂಡ್​ನ ಡಬ್ಲಿನ್, ನಾಲ್ಕನೇ ಸ್ಥಾನದಲ್ಲಿ ಜಪಾನ್​ನ ಸಾಪೊರ್ರೋ ಹಾಗೂ ಐದನೇ ಸ್ಥಾನದಲ್ಲಿ ಇಟಲಿಯ ಮಿಲಾನ್​ ಇದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ