ಎಣ್ಣೆ ಪಾರ್ಟಿಯಲ್ಲಿ ಲವ್ ಮ್ಯಾಟರ್- ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಂದ್ರು

Spread the love

ಮೈಸೂರು: ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಕೊಲೆ ನಡೆದಿದೆ.

ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿದೆ. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊಲೆಯ ಬಳಿಕ ಮಧು ಮತ್ತು ಕಿರಣ್ ಪರಾರಿಯಾಗಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಿವರಾತ್ರಿ ಸಂಭ್ರಮಕ್ಕೆ ಅರಮನೆ ಸಜ್ಜು – ತ್ರಿನೇಶ್ವರನ ಚಿನ್ನದ ಕೊಳಗ ಕಣ್ತುಂಬಿಕೊಳ್ಳಲು ಭಕ್ತರು ಕಾತರ

Spread the loveಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಶಿವರಾತ್ರಿ  ಆಚರಣೆಗೆ ಸಿದ್ಧತೆ ಶುರುವಾಗಿದೆ. ಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ