Breaking News

ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ ಪೊಲೀಸರು ಮಾಡುವ ಕೆಲಸವನ್ನು ತಾನು ಮಾಡಿದ್ದಾನೆ. 

Spread the love

ಧಾರವಾಡ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಓಪನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಫುಲ್ ಖುಷಿಯಲ್ಲಿರುವ ಎಣ್ಣೆಪ್ರಿಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಆರಂಭಿಸಿದ್ದಾರೆ.

ಹೌದು. ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಅನೇಕ ಪ್ರತಿಭೆಗಳು ಮಾಯವಾಗುತ್ತವೆ ಎಂದು ಕುಡುಕರ ಬಗೆಗಿನ ಕಾಮಿಡಿ ದೃಶ್ಯಗಳನ್ನು ನಾವು ಈಗಾಗಲೇ ಟಿಕ್ ಟಾಕ್ ನಲ್ಲಿ ನೋಡಿದ್ದೇವೆ. ಅಂತೆಯೇ ಧಾರವಾಡದಲ್ಲೊಬ್ಬ ವ್ಯಕ್ತಿಯೊಬ್ಬನ ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ ಪೊಲೀಸರು ಮಾಡುವ ಕೆಲಸವನ್ನು ತಾನು ಮಾಡಿದ್ದಾನೆ. 

ಸೋಮವಾರದಿಂದ ಮದ್ಯದ ಅಂಗಡಿಗಳ ಕಾರ್ಯಾರಂಭಕ್ಕೆ ಸರ್ಕಾರ ಸೂಚನೆ ನೀಡಿದ್ದಷ್ಟೇ ತಡ ಅಂಗಡಿ ತೆಗೆಯುವುದನ್ನೇ ಕಾಯುತ್ತಾ ಕುಳಿತಿದ್ದ ಈ ವ್ಯಕ್ತಿ ಮೊದಲು ಹೊಟ್ಟೆಗೆ ಎಣ್ಣೆ ಹಾಕಿಕೊಂಡು ಸಂತೃಪ್ತಗೊಂಡಿದ್ದಾನೆ. ನಂತರ ಒಳಹೋದ ಪರಮಾತ್ಮ ಆಡಿಸಿದಂತೆ ಆಡತೊಡಗಿದ ಈತ ತನ್ನ ಶರ್ಟ್ ಕಳಚಿ ವಾಹನ ದಟ್ಟಣೆ ನಿಯಂತ್ರಿಸಿದ್ದಾನೆ. ಇದನ್ನೂ ಓದಿ: ಬಿಯರ್‌ಗಾಗಿ ಬಿಸಿಲಲ್ಲಿ ಬಸವಳಿದ ಮಣಿಪಾಲದ ಮಾನಿನಿಯರು

ಧಾರವಾಡದ ಬಸ್ ನಿಲ್ದಾಣದ ಬಳಿ ಈ ದೃಶ್ಯ ಕಂಡು ಬಂದಿದೆ. ನಗರದ ಎಲ್ಲ ಎಂಎಸ್‍ಐಎಲ್ ಹಾಗೂ ಎಂಆರ್ ಪಿ ದರದ ಅಂಗಡಿ ಮುಂದೆ ಜನ ಜಂಗುಳಿ ಸೇರಿದ್ದು, ಬಿಸಿಲನ್ನೂ ಲೆಕ್ಕಿಸದೇ ಮದ್ಯ ಪ್ರಿಯರು ಎಣ್ಣೆ ಖರೀದಿಸಲು ನಿಂತಿದ್ದಾರೆ. ಇದರ ಮದ್ಯೆ ಕುಡುಕನೊಬ್ಬ ತನ್ನ ಬಟ್ಟೆ ಬಿಚ್ಚಿ ಸಂಚಾರ ದಟ್ಟನೆ ನಿಯಂತ್ರಿಸುತ್ತಿದ್ದು, ಎಲ್ಲರ ಗಮನಸೆಳೆಯಿತು.


Spread the love

About Laxminews 24x7

Check Also

ʻಅಪ್ಪ ನನಗೆ ಜೀವನ ಸಾಕಾಗಿದೆ, ಹುಡುಕ್ಬೇಡಿʼ- ಝಾಕಿಯಾಳನ್ನು ಕೊಂದು ಅವರಪ್ಪನಿಗೆ ಮೆಸೇಜ್‌ ಕಳ್ಸಿದ್ದ ಹಂತಕ!

Spread the loveಧಾರವಾಡ: ಧಾರವಾಡ  ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದ ಯುವತಿಯ ಕೊಲೆ ಪ್ರಕರಣದಲ್ಲಿ ಬಗೆದಷ್ಟು ಹೊಸಹೊಸ ವಿಚಾರಗಳು ಬಯಲಾಗುತ್ತಿವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ