ಬೆಂಗಳೂರು: ಪಾರ್ಕ್ ಬಳಿ ಒಂಟಿಯಾಗಿ ನಿಂತಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಗೋವಿಂದರಾಜನಗರ ಪೊಲೀಸ್ ಕಾನ್ಸ್ಟೇಬಲ್ ನನ್ನು ಬಂಧಿಸಲಾಗಿದೆ. ಪವನ್ ದ್ಯಾವಣ್ಣಬವರ್ ಬಂಧಿತ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದೆ. ಆರೋಪಿ ಪವನ್, ಕಳೆದ ಆರನೇ ತಾರೀಕಿನಂದು ರಾತ್ರಿ ಗಸ್ತು ವೇಳೆ ಬಾಲಕಿಯನ್ನ ಪಾರ್ಕ್ ಬಳಿ ಕಂಡಿದ್ದ.
ಚಾಮರಾಜನಗರ ಹೋಗ್ಬೇಕು ಎಂದು ಕೂತಿದ್ದ ಬಾಲಕಿ ನೋಡಿ ಡ್ರಾಪ್ ಕೊಡುವುದಾಗಿ ಕಾನ್ಸ್ಟೇಬಲ್ ಪವನ್ ಪುಸಲಾಯಿಸಿದ್ದಾನೆ.
ನಂತರ ಡ್ರಾಪ್ ಕೊಡುತ್ತಿನಿ ಎಂದು ಬಾಲಕಿಯನ್ನು ರೂಂ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಬಸ್ ನಿಲ್ದಾಣಕ್ಕೆ ತಂದು ಬಿಟ್ಟಿದ್ದಾನೆ. ನಂತರ ವಿಚಾರ ತಿಳಿದ ಪೋಷಕರು ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೋಕ್ಸೋ ಕಾಯ್ದೆಯಡಿ ಕಾನ್ಸ್ಟೇಬಲ್ ಪವನ್ ನನ್ನು ಗೋವಿಂದರಾಜನಗರ ನಗರ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
Laxmi News 24×7