Breaking News

ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು!

Spread the love

ತೀರ್ಥಹಳ್ಳಿ: ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಕಾರು ಎರಡು ದಿನ ಗುಡ್ಡೇಕೊಪ್ಪ (ಗೃಹ ಸಚಿವರ ನಿವಾಸವಿರುವ ಗ್ರಾಮ) ದಲ್ಲಿ ಇತ್ತು. ಅವರ ಜತೆ ಗೃಹಸಚಿವರು ನೇರ ಸಂಪರ್ಕ ಹೊಂದಿದ್ದರು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಗಂಭೀರ ಆರೋಪ ಮಾಡಿದ್ದಾರೆ.

 

ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪದಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಕಿಮ್ಮನೆ ರತ್ನಾಕರ್​, ಪಿಎಸ್​ಐ ಹುದ್ದೆ ಹಗರಣದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಒಂದಿಬ್ಬರು ಭಾಗಿಯಾಗಿರುವ ಶಂಕೆ ಇದೆ. ಗೃಹ ಸಚಿವರ ಮೇಲೇ ಆರೋಪವಿರುವ ಕಾರಣ ಅವರ ವಿರುದ್ಧ ಯಾರೂ ಸಾಕ್ಷಿ ಹೇಳೋಕೆ ಮುಂದೆ ಬರಲ್ಲ. ನಿಷ್ಪಕ್ಷ ತನಿಖೆ ನಡೆಯಬೇಕೆಂದರೆ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಿ ಸಂಪುಟದಿಂದ ಹೊರಬರಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ