Breaking News

ಪ್ರಚಾರಕ್ಕಾಗಿ ಅಲ್ಲ,ಮಾನವೀಯ ಸೇವೆಗೆ ಮುಂದಾದ ಮೇದಾರ ಸಮಾಜದ ಹಿತೈಸಿ ಪಕ್ಕಿರಪ್ಪ ಮುರಗೋಡ..!

Spread the love

ಬೆಳಗಾವಿ : ಪ್ರಚಾರಕ್ಕಾಗಿ ಆಸೆಪಡದೆ ಮೇದಾರ ಸಮಾಜದ ಶ್ರೇಯೊಭಿವೃದ್ದಿಗಾಗಿ ಸದಾಕಾಲ ತಮ್ಮ ಕೈಯಿಂದ ಸಾಧ್ಯವಾದಷ್ಟು ನೆರವು ನೀಡುತ್ತಾ ಮೇದಾರ ಸಮಾಜದ ಏಳಿಗೆಗೆ ಸದಾಕಾಲ ಶ್ರಮಿಸುತ್ತಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಮಾಜದ ಹಿತೈಸಿಗಳಾದ ಪಕ್ಕಿರಪ್ಪ ಮುರಗೋಡ ಅವರು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ವಾಸಿಸುವ ಸುಮಾರು100 ಕ್ಕೂ ಹೆಚ್ಚು ಮೇದಾರ ಸಮಾಜದ ಕುಲಬಾಂಧವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ‌.

ಲಾಕ್ ಡೌನ್ ಹಿನ್ನಲೆಯಲ್ಲಿ ಕುಲ ಕಸುಬು ಹಾಗೂ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದರಿಂದ ಹಳ್ಳಿಗಳಲ್ಲಿ ವಾಸಿಸುವ ಮೇದಾರ ಸಮಾಜದ ಜನರಿಗೆ ಅವಶ್ಯಕ ಸಾಮಗ್ರಿಗಳ ಕೊರತೆ ಉಂಟಾಗುತ್ತಿದೆ.ಆದ್ದರಿಂದ ಕಿತ್ತೂರು ತಾಲೂಕಾದ್ಯಂತ ವಾಸಿಸುವ ಸಮಾಜದ ಕುಲಬಾಂಧವರ ಸಮಸ್ಯೆಯನ್ನು ಮನಗಂಡ ಪಕ್ಕಿರಪ್ಪ ಮುರಗೋಡ ಅವರು ಯಾವುದೆ ಪ್ರಚಾರಕ್ಕೆ ಆಸೆ ಪಡದೆ ಮಾನವೀಯ ಸೇವೆ ಸಲ್ಲಿಸಿದ್ದಾರೆ.

ಕುಲಬಾಂಧವರ ಕಷ್ಟ ನನ್ನ ಕಷ್ಟ ಎಂದು ಭಾವಿಸಿ ಸಮಾಜದ ಕುಲಬಾಂಧವರು ಸಂಕಷ್ಟಕ್ಕೆ ಒಳಗಾಗದಿರಲಿ ಎಂದು ವಯಕ್ತಿಯವಾಗಿ ಸ್ಪಂದಿಸಿದ ಪಕ್ಕಿರಪ್ಪ ಮುರಗೋಡ ಅವರು ಮಾನವೀಯ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಮೇದಾರ ಸಮಾಜದ ಕುಲಬಾಂಧವರು ಸಂಕಷ್ಟಕ್ಕೆ ಒಳಗಾಗದಿರಲಿ ಎಂದು ಉತ್ತಮ ಗುಣಮಟ್ಟದ ಅಕ್ಕಿ,ಬೇಳೆ,ಸಕ್ಕರೆ,ಚಹಾ ಪುಡಿ,ಎಣ್ಣೆ ಸೇರಿದಂತೆ ಇನ್ನಿತರ ದಿನಸಿ ವಸ್ತುಗಳು ಹಾಗೂ ತರಕಾರಿಗಳನ್ನು ನೀಡಿ ಸಮಾಜದ ಜನರು ಸಂಕಷ್ಟಕ್ಕೆ ಒಳಗಾಗದೆ ಇರುವ ಹಾಗೆ ಪಕ್ಕಿರಪ್ಪ ಮುರಗೋಡ ಅವರು ನೋಡಿಕೊಂಡಿರುವುದು ಅವರಲ್ಲಿರುವ ದೊಡ್ಡತನ ಈ ಮೂಲಕ ಎತ್ತಿ ತೋರಿಸುತ್ತದೆ.ಹಾಗೂ ಮೇದಾರ ಸಮಾಜದ ಶ್ರೇಯೋಭಿವೃದ್ದಿಗಾಗಿ ಉದಾರ ಮನಸ್ಸಿನಿಂದ ಸಹಾಯ ಮಾಡುವ ಪಕ್ಕಿರಪ್ಪ ಮುರಗೋಡ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

ಮೇದಾರಿಕೆ ನಂಬಿಕೊಂಡು ಬದುಕುವವರು ಹೆಚ್ಚಾಗಿ ಹಳ್ಳಿಗಳಲ್ಲಿ ವಾಸಿಸುತ್ತಾರೆ.ಲಾಕ್ ಡೌನ್ ಆದೇಶವಾಗಿ ತಿಂಗಳು ಕಳೆದಿದ್ದರಿಂದ ಸಮಾಜದ ಕುಲ ಕಸುಬು ಹಾಗೂ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.ಇದರಿಂದ ಕಳ್ಳಿಗಳಲ್ಲಿ ವಾಸಿಸುವ ಕುಲಬಾಂಧವರು ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.ಆಕಸ್ಮಿಕವಾಗಿ ಎದುರಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಲಬಾಂಧವರ ಕಷ್ಟಕ್ಕೆ ಸ್ಪಂದಿಸಲು ಸಮಾಜದ ಹಿತೈಸಿಗಳು ಹಾಗೂ ಸ್ಥಿತಿವಂತರು
ಮುಂದಾಗಬೇಕಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ