Breaking News

ಅವಧಿ ಮೀರಿದ 7 ಲಕ್ಷರೂ . ಮೌಲ್ಯದ ಮದ್ಯ ನಾಶ

Spread the love

ಅವಧಿ ಮೀರಿದ ಹಾಗೂ ಕೆಎಸ್‌ಬಿಸಿಎಲ್ ಡಿಪೋದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಅಂದಾಜು 7 ಲಕ್ಷ ರೂ . ಮೌಲ್ಯದ ಮದ್ಯವನ್ನು ಇಲ್ಲಿನ ಭೈರಿದೇವರಕೊಪ್ಪದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋ ಆವರಣದ ಹೊರಭಾಗದ ಇಂಗು ಗುಂಡಿಯಲ್ಲಿ ಶುಕ್ರವಾರ ನಾಶಪಡಿಸಲಾಯಿತು . 

ಅವಧಿ ಮೀರಿದ ಅಂದಾಜು 7.01 ಲಕ್ಷ ರೂ . ಮೌಲ್ಯದ 47 ಪೆಟ್ಟಿಗೆ ಹಾಗೂ 67 ಮದ್ಯದ ಬಾಟಲಿಗಳನ್ನು ನಾಶಪಡಿಸಲಾಯಿತು . ಈ ಸಂದರ್ಭದಲ್ಲಿ ಅಬಕಾರಿ ವಿಭಾಗದ ಅನಿಲಕುಮಾರ ನಂದೀಶ್ವರ, ಅಬಕಾರಿ ಇನ್ಸ್‌ಪೆಕ್ಟರ್‌ ನೇತ್ರಾ ಉಪ್ಪಾರ, ಉಪಾಧೀಕ್ಷಕ ನಯನಾ ನಾಯ್ಕ, ಕೆಎಸ್‌ಬಿಸಿಎಲ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ