Breaking News

ನಾದಬ್ರಹ್ಮ’ ಡಾ. ಹಂಸಲೇಖ ಅವರು ನೀಡಿರುವ ಹೇಳಿಕೆಗೆ ನಟ ಜಗ್ಗೇಶ್​​ ಪ್ರತಿಕ್ರಿಯೆ

Spread the love

: ಬೆಂಗಳೂರು:​​ ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ‘ನಾದಬ್ರಹ್ಮ’ ಡಾ. ಹಂಸಲೇಖ ಅವರು ನೀಡಿರುವ ಹೇಳಿಕೆಗೆ ನಟ ಜಗ್ಗೇಶ್​​ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಜಗ್ಗೇಶ್​​, ಮಾತು ಬಲ್ಲವನಿಗೆ ಚಪ್ಪಾಳೆ ಮೃಷ್ಟಾನ್ನದಂತೆ ಆದರು ಆ ಮಾತು ಹೊಟ್ಟೆತುಂಬಿಸದು. ಮಾತು ಕೆಟ್ಟರೆ ಆ ಮೃಷ್ಟಾನ್ನವೇ ವಿಷವಾಗಿ ಅಜೀರ್ಣ ಆಗುವುದು. ಸಾಮಾಜಿಕ ಕ್ಷೇತ್ರ ಹಗ್ಗದ ಮೇಲಿನ ನಡಿಗೆ! ಪಡೆವುದು ಸುಲಭ ಕಳೆದುಕೊಳ್ಳಲು ಕ್ಷಣ ಸಾಕು ಎಂದು ಬರೆದುಕೊಳ್ಳುವ ಮೂಲಕ ಮಾರ್ಮಿಕವಾಗಿ ಹಂಸಲೇಖರಿಗೆ ತಿವಿದಿದ್ದಾರೆ.

 ಇನ್ನು ಬಸವಣ್ಣನವರ ವಚನದ ಮೂಲತ ಹಂಸಲೇಖರಿಗೆ ಕಿವಿಮಾತು ಹೇಳಿರುವ ಜಗ್ಗೇಶ್​​​, ಲೋಕದ ಡೊಂಕ ನೀವೇಕೆ ತಿದ್ದುವಿರಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ! ಕೂಡಲಸಂಗಮದೇವ ಎಂಬ ವಚನ ಪೋಸ್ಟ್​ ಮಾಡಿದ್ದಾರೆ.

ಮುಂದುವರಿದು, ಗೀತವ ಬಲ್ಲಾತ ಜಾಣನಲ್ಲ. ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು. ಆತ ಜಾಣನು ಲಿಂಗವ ನೆರೆ ನಂಬಿದಾತ ಜಾಣನು. ಜಂಗಮಕ್ಕೆ ಸವೆಸುವಾತ ಆತ ಜಾಣನು. ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು, ನಮ್ಮ ಕೂಡಲಸಂಗನ ಶರಣರನು ಎಂದು ಮತ್ತೊಂದು ವಚನ ಪೋಸ್ಟ್​ ಮಾಡಿದ್ದಾರೆ. ಕೊನೆಗೆ, ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ ಎಂದು ತಿರುಗೇಟು ನೀಡಿದ್ದಾರೆ.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ