Breaking News

ಇಂದಿನಿಂದ ರಾಜ್ಯಾದ್ಯಂತ ಅನಲಾಕ್ 3.O ಹಿನ್ನೆಲೆ ಬಹುತೇಕ ದೇವಸ್ಥಾನಗಳು ಓಪನ್ ಆಗಿದ್ದು,

Spread the love

ಬೆಳಗಾವಿ: ಕಳೆದ ಎರಡೂ ವರೆ ತಿಂಗಳು ಬಳಿಕ ಇಂದಿನಿಂದ ರಾಜ್ಯಾದ್ಯಂತ ಅನಲಾಕ್ 3.O ಹಿನ್ನೆಲೆ ಗಡಿಜಿಲ್ಲೆ ಬೆಳಗಾವಿಯಲ್ಲಿ ಬಹುತೇಕ ದೇವಸ್ಥಾನಗಳು ಓಪನ್ ಆಗಿದ್ದು, ದೇವಸ್ಥಾನಗಳಲ್ಲಿ ಭಕ್ತರು ದರ್ಶನಕ್ಕೆ ಆಗಮಿಸುತ್ತಿದೆ.

ಸವದತ್ತಿ ಯಲ್ಲಮ್ಮನ ದೇವಸ್ಥಾನ ಹಾಗೂ ಜೋಗುಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ ಹೊರತುಪಡಿಸಿ ಜಿಲ್ಲೆಯ ಉಳಿದ ದೇವಸ್ಥಾನಗಳು ಇಂದಿನಿಂದ ಮೊದಲಿನಂತೆ ಓಪನ್ ಆಗುತ್ತಿದ್ದು, ದಕ್ಷಿಣಕಾಶಿ ಎಂದೇ ಪ್ರಸಿದ್ಧ ಪಡೆದಿರುವ ಬೆಳಗಾವಿ ಕಪಿಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಜನರ ದಂಡು ಆಗಮಿಸುತ್ತಿದೆ. ಕೋವಿಡ್ ಲಾಕ್‌ಡೌನ್ ಇರುವುದರಿಂದ ಕಳೆದ ಎರಡೂವರೆ ತಿಂಗಳಿನಿಂದ ದೇವಸ್ಥಾನದ ಬಾಗಿಲುಗಳು ಬಂದ್ ಆಗಿದ್ದವು. ಆದರೆ, ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ಕಡಿಮೆ ಆಗುತ್ತಿರುವ ಹಿನ್ನೆಲೆ ದೇವಸ್ಥಾನಗಳು ಸಾರ್ವಜನಿಕ ದರ್ಶನಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಿದೆ.ಆದ್ರೆ, ದೇವಸ್ಥಾನಕ್ಕೆ ಆಗಮಿಸುವ ಭಕ್ತರೆಲ್ಲರೂ ಮಾಸ್ಕ್ ಹಾಕಿಕೊಂಡರೂ ಅದನ್ನು ಅರ್ಧಕ್ಕೆ ಹಾಕಿಕೊಂಡು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಾಮಾಜಿಕ ‌ಅಂತರ್ ಹಾಗೂ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕಿದೆ.


Spread the love

About Laxminews 24x7

Check Also

ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಶಿವಾನಂದ ಪಾಟೀಲ್

Spread the loveಹಾವೇರಿ : ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ