Breaking News

ಹಳಿತಪ್ಪಿದ ಹಜರತ್‌ ನಿಜಾಮುದ್ದೀನ್‌ನ ರಾಜಧಾನಿ ಎಕ್ಸ್‌ಪ್ರೆಸ್‌

Spread the love

ಮುಂಬೈ: ‘ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯಲ್ಲಿ ಹಜರತ್‌ ನಿಜಾಮುದ್ದೀನ್‌ನ ರಾಜಧಾನಿ ಎಕ್ಸ್‌ಪ್ರೆಸ್‌, ಸುರಂಗವೊಂದರಲ್ಲಿ ಹಳಿ ತಪ್ಪಿದ ಘಟನೆ ಶನಿವಾರ ನಡೆದಿದೆ.

ಘಟನೆಯಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಗೋವಾದ ಮಡ್‌ಗಾಂವ್‌ನತ್ತ ಪ್ರಯಾಣಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ಮುಂಬೈನಿಂದ 325 ಕಿ.ಮೀ ದೂರದಲ್ಲಿರುವ ಕಾರ್ಬೂಡ್ ಸುರಂಗದಲ್ಲಿ ಬೆಳಿಗ್ಗೆ 4.15ಕ್ಕೆ ಹಳಿ ತಪ್ಪಿದೆ ಎಂದು ಕೊಂಕಣ್ ರೈಲ್ವೆ ಅಧಿಕಾರಿಗಳು ಹೇಳಿದರು.

ಹಳಿಯ ಮೇಲೆ ಕಲ್ಲು ಬಂಡೆಯೊಂದು ಬಿದ್ದ ಕಾರಣ, ರೈಲು ಹಳಿ ತಪ್ಪಿದೆ. ರತ್ನಗಿರಿ ಜಿಲ್ಲೆಯ ಉಕ್ಷಿ ಮತ್ತು ಭೋಕ್ ನಿಲ್ದಾಣಗಳ ನಡುವಿನ ಕಾರ್ಬೂಡ್‌ ಸುರಂಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.


Spread the love

About Laxminews 24x7

Check Also

ದಕ್ಷಿಣ ಪಿನಾಕಿನಿ ಜಲವಿವಾದ – ನ್ಯಾಯಮಂಡಳಿ ಸ್ಥಾಪನೆಗೆ ಸುಪ್ರೀಂ ಆದೇಶ

Spread the loveನವದೆಹಲಿ: ಕರ್ನಾಟಕ  ಹಾಗೂ ತಮಿಳುನಾಡು  ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ