Breaking News

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಸಂತೋಷ್ ಜಾರಕಿಹೊಳಿ ಅವರ್ ವತಿಯಿಂದ ಕೋವಿಡ ಲಸಿಕೆ ಅಭಿಯಾನ :

Spread the love

ಗೋಕಾಕ: ರಾಜ್ಯಾದ್ಯಂತ ಇಂದಿನಿಂದ ಕೋವಿಡ ಲಸಿಕೆ ಅಭಿಯಾನ ಶುರು ಆಗಿದೆ. ಇಂದಿನಿಂದ ಗೋಕಾಕ ತಾಲೂಕಿನ ವಿವಿಧ ಕಡೆ ಕೂಡ ಅಭಿಯಾನ ಹಮ್ಮಿ ಕೊಂಡಿದ್ದಾರೆ ವಿಶೇಷವಾಗಿ ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಕೂಡ ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಕೆಲಸ ಮಾಡುವ ಎಲ್ಲ ಕೆಲಸಗಾರ ರಿಗೆ ಲಸಿಕೆ ಅಭಿಯಾನ ಹಾಗೂ ಕೊವಿಡ ಟೆಸ್ಟ್ ಕೂಡ ಮಾಡಲಾಯಿತು.

ಜನರ ಕಾಳಜಿ ಅತಿ ಮುಖ್ಯ ತಮ್ಮ ಸಂಸ್ಥೆಯ ಜನರ ಬಗ್ಗೆ ಕಾಳಜಿ ತೋರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದರು. ಎಲ್ಲರಿಗೂ ಕೆಲಸದ ಜೊತೆಗೆ ಜೀವನ ಕೂಡ ಅಷ್ಟೇ ಮುಖ್ಯ ಎಂಬ ಉದ್ದೇಶ ದಿಂದ ಮುಂಜಾಗ್ರತಾ ಕ್ರಮವಾಗಿ ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಶ್ರೀ ಸಂತೋಷ್ ಜಾರಕಿಹೊಳಿ ಅವರು ಈ ಒಂದು ಅಭಿಯಾನ ಮಾಡಲು ತಹಸೀಲ್ದಾರ ಅವರಿಗೆ ಹೇಳಿದರು.

 


ಎಲ್ಲವರ್ಗದ ಜನರಿಗೆ ಲಸಿಕೆ ಕೊಡಿಸಿ ಹಾಗೂ ಸ್ವಾಬ್ ಟೆಸ್ಟ್ ಮಾಡಿಸಿ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ ಸಾಹುಕಾರರು.
ಇನ್ನು ಜನರಿಗೆ ಇದಷ್ಟೇ ಅಲ್ಲದೆ ಎಲ್ಲ ಕ ರೋನ ನಿಯಮ ಗಳನ್ನ ಪಾಲಿಸಿ , ಮಾಸ್ಕ್ ಹಾಗೂ ಸ್ಯಾನಿ ಟೈಸರ್ ಬಳಕೆ ಮಾಡಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂಬ ಹಿತನುಡಿ ಕೂಡ ಹೇಳಿದ್ದಾರೆ.

ಗೋಕಾಕ ನಲ್ಲಿ ವಿವಿಧ ಕಡೆ ಈ ಒಂದು ಲಸಿಕೆ ಹಾಕುವ ಕಾರ್ಯಕ್ರಮ ಮಾಡಿದ್ದರು ಶ್ರೀ ಸಂತೋಷ್ ಜಾರಕಿಹೊಳಿ ಅವರು ಜನರ ಕಾಳಜಿ ಹೆಚ್ಚಿನ ರೀತಿಯಲ್ಲಿ ವಹಿಸಿ ಲಸಿಕೆ ಅಭಿಯಾನ ಮಾಡಿದ್ದಕ್ಕೆ ಜನರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ..

ಈ ಒಂದು ಅಭಿಯಾನಕ್ಕೆ ಕಾರ್ಖಾನೆಯ ಎಲ್ಲ ಕಾರ್ಮಿಕರು ಹೆಮ್ಮೆ ವ್ಯಕ್ತ ಪಡಿಸಿದರು


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ