Breaking News

ಫೋನ್ ಮಾಡಿದ ಸೈಬರ್ ಖದೀಮರು, 102,ಬಾರಿ ಓಟಿಪಿ ಶೇರ್, ಬರೊಬ್ಬರಿ ಹತ್ತು ಲಕ್ಷ ರೂ ಗುಳುಂ

Spread the love

ಬೆಳಗಾವಿ- ಅಜ್ಞಾತರು ಫೋನ್ ಮಾಡಿ ಓಟಿಪಿ ಕೇಳಿದ್ರೆ ಕೊಡಬೇಡಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಜನ ಜಾಗೃತರಾಗುತ್ತಿಲ್ಲ,ಒಂದೆರಡು ಬಾರಿ ಅಲ್ಲ,ಬರೊಬ್ಬರಿ 102,ಬಾರಿ ಓಟಿಪಿ ಶೇರ್ ಮಾಡಿದವನ ಖಾತೆಯಿಂದ ಬರೊಬ್ಬರಿ ಹತ್ತು ಲಕ್ಷ ರೂ ಗುಳುಂ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಈ ರೀತಿ ವಂಚನೆಗೊಳಗಾದ ವ್ಯೆಕ್ತಿ ಅಜ್ಞಾನಿಯೂ ಅಲ್ಲ,ಅನಕ್ಷರಸ್ಥನೂ ಅಲ್ಲ,102 ಬಾರಿ ಓಟಿಪಿ ಶೇರ್ ಮಾಡಿ ವಂಚನೆಗೊಳಗಾದ ವ್ಯೆಕ್ತಿ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಅನ್ನೋದು ವಿಶೇಷ. ಇತ್ತೀಚಿಗೆ ಸೈಬರ್ ಕ್ರೈಂ ಗೆ ಸುಕ್ಷಿತರೇ ಬಲಿಯಾಗುತ್ತಿರುವದು ದುರ್ದೈವವ ಸಂಗತಿ…

ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಕೆ,ಹೆಚ್ ಗ್ರಾಮದ ಯಲ್ಲಪ್ಪ ನಾರಾಯಣ ಜಾಧವ ಎಂಬುವವರಿಗೆ ಫೋನ್ ಮಾಡಿದ ಸೈಬರ್ ಖದೀಮರು ,ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ ಮಾಡಬೇಕು,ಆಧಾರ್ ಕಾರ್ಡ್,ಕಳಿಸಿ,ಬ್ಯಾಂಕ್ ಪಾಸ್ ಬುಕ್ ಕಳಿಸಿ ಎಂದು ಕೇಳಿದ್ದಾರೆ,ಖದೀಮರ ಮಾತಿಗೆ ಮರುಳಾದ ಜಾಧವ್ ,ಖದೀಮರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾರೆ,ಇದಾದ ಬಳಿಕ ನಿಮ್ಮ ಫೋನ್ ಗೆ ಓಟಿಪಿ ಬರುತ್ತೆ ಅದನ್ನು ಕೊಡಿ ಎಂದು ಕೇಳಿಕೊಂಡಿದ್ದಾರೆ,ಬರೊಬ್ಬರಿ 102 ಬಾರಿ ಖದೀಮರ ಜೊತೆ ಓಟೀಪಿ ಶೇರ್ ಮಾಡಿದ ಯಲ್ಲಪ್ಪ ನಾರಾಯಣ ಜಾಧವ ಅಕೌಂಟ್ ನಲ್ಲಿದ್ದ 10 ಲಕ್ಷ ರೂ ಖಾಲಿಯಾಗಿವೆ.

ಅಕೌಂಟ್ ನಲ್ಲಿ ಹಣ ಖಾಲಿಯಾದ ಮೆಸ್ಸೇಜ್ ಗಳು ಬರುತ್ತಿದ್ದಂತೆಯೇ ಜಾಧವ ಜಾಗೃತನಾಗಿದ್ದಾನೆ. ಹತ್ತು ಲಕ್ಷ ರೂ ಖಾತೆಯಿಂದ ಬೇರೆ ಖಾತೆಗೆ ವರ್ಗಾವಣೆಯಾದ ಬಳಿಕವೇ ತನಗೆ ವಂಚನೆ ಆಗಿದೆ ಎಂದು ಜಾಧವ್ ಗೆ ಗೊತ್ತಾಗಿದೆ. ವಂಚನೆಗೊಳಗಾದ ಜಾಧವ ಬೆಳಗಾವಿಯ ಸೈಬರ್ ಕ್ರೈಂ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಿಪಿಐ ಗಡ್ಡೇಕರ ತನಿಖೆ ಶುರು ಮಾಡಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ