ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಜಮೀರ್ ಅಹ್ಮದ್, ಕುಮಾರಸ್ವಾಮಿ ಪಲ್ಟಿ ಗಿರಾಕಿ, ಅವರು ಯಾವಾಗ ಬೇಕಿದ್ದರೂ ಪಲ್ಟಿ ಹೊಡೆಯುತ್ತಾರೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತಾರೆ. ಆದರೆ ಹೆಚ್.ಡಿ.ದೇವೇಗೌಡರು ಹಾಗಲ್ಲ, ಅವರಿಗೆ ಸಿದ್ಧಾಂತವಿದೆ. ಕುಮಾರಸ್ವಾಮಿಗೆ ಸಿದ್ಧಾಂತಗಳಿಲ್ಲ. ಅಧಿಕಾರ ಸಿಕ್ಕ ಬಳಿಕ ಪಲ್ಟಿ ಹೊಡೆಯುತ್ತಾರೆ ಎಂದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಜಮೀರ್ ಅಹ್ಮದ್, ಸರ್ಕಾರದ ಆಡಳಿತ ವೈಖರಿಗೆ ಜನರು ಉಗಿಯುತ್ತಿದ್ದಾರೆ. ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಜನರು ಕೊರೊನಾದಿಂದ ಸಂಕಷ್ಟ ಪಡುತ್ತಿದ್ದರೆ ಇವರು ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಜನರೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಕೆಲಸಗಳನ್ನು ಜನರು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.
Laxmi News 24×7