Breaking News

ಜೂನ್ 7ರಿಂದ ದೆಹಲಿಯಲ್ಲಿ ಮಾರುಕಟ್ಟೆ, ಮೆಟ್ರೋ ಸಂಚಾರ ಆರಂಭ: ಕೇಜ್ರಿವಾಲ್

Spread the love

ದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಇಳಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಜೂನ್ 7ರಿಂದ ಅಂಗಡಿ, ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗುವುದು, ಆದರೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ(ಜೂನ್ 05) ತಿಳಿಸಿದ್ದಾರೆ.

 

ಜೂನ್ 7ರಿಂದ ಮಾಲ್ ಗಳು ಹಾಗೂ ಅಂಗಡಿಗಳು ಪುನರಾರಂಭಗೊಳ್ಳಲಿದೆ. ಅಲ್ಲದೇ ಶೇ.50ರಷ್ಟು ಸಾಮರ್ಥ್ಯದೊಂದಿಗೆ ದೆಹಲಿ ಮೆಟ್ರೋ ಕೂಡಾ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು. ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನ್ನು ಹೆಚ್ಚು ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಮೂಲಕ ಇತರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದರು.

ಸಮ-ಬೆಸ ಆಧಾರದಲ್ಲಿ ಮಾರುಕಟ್ಟೆ ಮತ್ತು ಮಾಲ್ಸ್ ಗಳನ್ನು ತೆರೆಯಲು ಅನುವು ಮಾಡಿಕೊಡಲಾಗುವುದು ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.ಖಾಸಗಿ ಕಚೇರಿಗಳಲ್ಲಿಯೂ ಶೇ.50ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವನಿಸಲು ಅವಕಾಶ ನೀಡಲಾಗುವುದು ಎಂದು ವಿವರ ನೀಡಿದ್ದಾರೆ.

ದೆಹಲಿ ಸರ್ಕಾರ ಮುಂಬರು 3ನೇ ಅಲೆಯನ್ನು ತಡೆಗಟ್ಟಲು ಕೂಡಾ ಸಿದ್ಧವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.ಒಂದು ವೇಳೆ ಹೊಸ ರೂಪಾಂತರ ತಳಿ ಪತ್ತೆಯಾದರೆ ಅದರ ಬಗ್ಗೆ ಪರಿಶೀಲನೆ ನಡೆಸಲು ಲ್ಯಾಪ್ ಅನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರಧಾನಿ ಕುರ್ಚಿ ಬಳಿ ಕೈ ಮಹಿಳಾ ಸದಸ್ಯರ ಪ್ರತಿಭಟನೆಯ ವಿಡಿಯೋ ಬಿಡುಗಡೆ – ಕಿರಣ್‌ ರಿಜಿಜು ಆಕ್ರೋಶ

Spread the love ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದ ವಿಡಿಯೋವನ್ನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ