ಬೆಂಗಳೂರು : ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಲು ಸರ್ಕಾರವೇ ಕಾರಣವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಜನರಿಗಾಗಿ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಲೇಬೇಕು.
ಈ ಕಾಯಿಲೆ ಸರ್ಕಾರ ಕೊಟ್ಟಿದ್ದು, ಹಳ್ಳಿಗಳಲ್ಲೂ ಕೊರೊನಾ ಬರಲು ಸರ್ಕಾರವೇ ನೇರ ಕಾರಣ ಎಂದು ಕಿಡಿಕಾರಿದರು.
ಇನ್ನು ಹಳ್ಳಿಗಳಲ್ಲಿ ಕೃಷಿ ಮಾಡ್ತಿದ್ದವರಿಗೂ ಕೊರೊನಾ ಬಂದಿದೆ. ಬೆಳಿಗ್ಗೆ ನನ್ಮ ತೀರ ಆತ್ಮಿಯರು ಸಾವೀಗಿಡಾಗಿದ್ದಾರೆ.
ಹೊಲದಲ್ಲಿ ಕೆಲಸ ಮಾಡ್ತಿದ್ದವರು ಸಾಯುತ್ತಿದ್ದಾರೆ. ಕೊರೊನಾದಿಂದ ಮುಕ್ತರಾದ ಬಳಿಕ ಸಾವು ಆಗ್ತಿದೆ.
ಈ ಬಗ್ಗೆ ಸಿಎಂ ಮತ್ತು ಪಿಎಂ ಗೆ ಪತ್ರ ಬರೆಯುತ್ತೇನೆ.
ಕೊರೊನಾ ಬಂದು ಹೋದ ಬಳಿಕ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಇನ್ನು ಕಾಂಗ್ರೆಸ್ ಯಿಂದ ಪಂಚ ಪರಿಹಾರ ಕಾರ್ಯಕ್ರಮ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ಕೊಡ್ತೀನಿ.
ದೇಶದಲ್ಲಿ ಗೊಬ್ಬರದ ಬೆಲೆ ಗಗನಕ್ಕೆ ಹೋಗ್ತಿದೆ. ಗೊಬ್ಬರ ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು.
ಹೂ ಮಾರಾಟಗಾರರು ಮತ್ತು ಉತ್ಪಾದಕರಿಗೆ ಪರಿಹಾರ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
Laxmi News 24×7