Breaking News

ಹಿರಿಯೂರು ರೈತ ಬೆಳೆದಿದ್ದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

Spread the love

ಹಿರಿಯೂರು: ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರು ಬೆಳೆದಿದ್ದ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ.

ಲಾಕ್ ಡೌನ್ ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ” ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ” ಎಂದು ತನ್ನ ಮೊಬೈಲ್ ನಂಬರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್ ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ ಈರುಳ್ಳಿಯನ್ನು ಕೊಂಡೊಯ್ದು ಮಾರಾಟ ಮಾಡಿ ಬಂದಿದ್ದಾರೆ. ನಟ ಉಪೇಂದ್ರ ಅವರು 60 ಚೀಲ, 3000 ಕೆಜಿ ಈರುಳ್ಳಿಗೆ ಬಾಡಿಗೆ ಸೇರಿಸಿ 37 ಸಾವಿರ ಹಣ ಕೊಟ್ಟು ಖರೀದಿಸಿ ಸಂಕಷ್ಟದಲ್ಲಿದ್ದ ರೈತನಿಗೆ ನೆರವಾಗಿದ್ದಾರೆ.

ನಾವು ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. 70 ಪ್ಯಾಕೆಟ್ ಆಗಿದ್ದವು ಅದರಲ್ಲಿ 10 ಚೀಲ ಕೊಳೆತು ಹೋಗಿತ್ತು. ಉಳಿದ ಈರುಳ್ಳಿ ಮಾರಾಟ ಮಾಡಲು ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹಾಗೆಯೇ ಶೇಖರಿಸಿದ್ದೆವು. ಉಪೇಂದ್ರ ಅವರು ಹಾಕಿದ್ದ ಪೋಸ್ಟ್ ನೋಡಿ ಕರೆ ಮಾಡಿದೇವು. ಆಗ ಅವರು ತಂದುಕೊಡಿ ಎಂದರು.

ನಮಗೆ ಲಾಭಕ್ಕಿಂತ ಈ ಬೆಲೆ ಸಿಕ್ಕಿರುವುದು ಖುಷಿಯಾಗಿದೆ. ತಡರಾತ್ರಿ ಈರುಳ್ಳಿ ತೆಗೆದುಕೊಂಡು ಹೋದೆವು. ಅದನ್ನು ಅವರು ಖರೀದಿಸಿ ಕಾರ್ಮಿಕರಿಗೆ ಹಂಚುತ್ತಿರುವುದು ತುಂಬಾ ಖುಷಿಯಾಯಿತು. ಇಂತಹ ಸಂದರ್ಭದಲ್ಲಿ ಅವರು ಮಾಡುವ ಸಾಮಾಜಿಕ ಕಾರ್ಯಕ್ಕೆ ನಮಗೆ ಲಾಭ ಬೇಡ ಅನ್ನಿಸಿತು. ರೈತರಿಗೆ ಅನುಕೂಲ ಆಗಲಿ ಎಂದು ಮುಂದೆ ಬಂದಿರುವ ಸಂತಸ. ಮಾರುಕಟ್ಟೆಯಲ್ಲಿ ಈ ಬೆಲೆ ಸಿಗುತ್ತಿರಲಿಲ್ಲ. ಉಪೇಂದ್ರ ಸರ್ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ನಾವು ಕೂಡ ಅವರಿಗೆ ಕೈಜೋಡಿಸಬೇಕು ಎಂದು ಸುದ್ದಿಗಾರರಿಗೆ ಮಹೇಶ್ ತಿಳಿಸಿದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ