Breaking News

ಸರ್ಕಾರದ ವಿನಾಶಕಾರಿ ನೀತಿಯಿಂದ ಕೊರೊನಾ 3ನೇ ಅಲೆ : ರಾಹುಲ್ ಗಾಂಧಿ

Spread the love

ನವದೆಹಲಿ : ಕೊರೊನಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಷ್ಟ್ರೀಯ ಲಸಿಕಾ ವಿತರಣಾ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರದ ವಿನಾಶಕಾರಿ ನೀತಿ, ಸಂತ್ರಸ್ತರ ಶವ ನದಿಯಲ್ಲಿ ತೇಲುತ್ತಿರುವುದರ ಕುರಿತಾಗಿ ಗಂಗಾ ಮಾತೆ ದುಃಖಿಸುವಂತೆ ಮಾಡಿದ್ದಾರೆ.

ಭಾರತ ಸರ್ಕಾರದ ಲಸಿಕೆ ವಿತರಣಾ ಯೋಜನೆ ವಿನಾಶಕಾರಿ ಮೂರನೇ ಅಲೆಯನ್ನು ಖಚಿತಪಡಿಸುತ್ತದೆ. ಇದನ್ನು ಮತ್ತೆ ಸರಿದೂಗಿಸಲು ಅಸಾಧ್ಯ. ಭಾರತಕ್ಕೆ ಸರಿಯಾದ ಲಸಿಕೆ ವಿತರಣೆ ಯೋಜನೆಯ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ತಮ್ಮ ಟ್ವೀಟ್ ನಲ್ಲಿ ರಾಹುಲ್ ಗಾಂಧಿ, ಗಂಗಾ ನದಿಯ ಉದ್ದಕ್ಕೂ 1140 ಕಿ.ಮೀ ಪ್ರದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ ಎಂದು ಹೇಳುವ ಮಾಧ್ಯಮ ವರದಿಗಳನ್ನು ಟ್ಯಾಗ್ ಮಾಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ