ಚಿತ್ರದುರ್ಗ: ತಾಲೂಕಿನ ಮುದ್ದಾಪುರ ಗ್ರಾಮದ ಮನೆಯೊಂದಕ್ಕೆ ನಸುಕಿನಲ್ಲೇ ನುಗ್ಗಿದ ಚಿರತೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ 5.30 ರ ವೇಳೆಗೆ ಮುದ್ದಾಪುರದ ಚಿದಾನಂದ ಎಂಬುವವರ ಮನೆಗೆ ನುಗ್ಗಿದ ಚಿರತೆ, ಅಡುಗೆ ಮನೆಯ ಶೆಲ್ಫ್ ಮೇಲೆ ಪಾತ್ರೆ, ಡಬ್ಬಗಳ ನಡುವೆ ಬಚ್ಚಿಟ್ಟುಕೊಂಡಿತ್ತು. ಮನೆಯೊಳಗೆ ಚಿರತೆ ಕಂಡು ಮನೆಯವರು ಆತಂಕಗೊಂಡು, ಹೊರಗೆ ಓಡಿ ಬಂದು ಬಾಗಿಲು ಬಂದ್ ಮಾಡಿದ್ದರು.
ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೋನು ಅಳವಡಿಸಿ ಚಿರತೆಯನ್ನು ಹಿಡಿದಿದ್ದಾರೆ. ಮನೆಯ ಬಾಗಿಲಿಗೆ ಬೋನು ಅಳವಡಿಸಿ, ಹೊರಗಡ ಬಕೆ ಹಾಕಿ ಚಿರತೆ ಹಿಡಿಯಲಾಗಿದೆ.

ಸದ್ಯ ಚಿರತೆಯನ್ನು ಆಡುಮಲ್ಲೇಶ್ವರ ಪ್ರಾಣಿಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಿತ್ತಿದ್ದು, ಡಿಎಫ್‌ಓ ಸೂಚನೆ ನಂತರ ಕಾಡಿಗೆ ಬಿಡಲಾಗುವುದು ಎಂದು ಆರ್‌ಎಫ್‌ಓ ಸಂದೀಪ್ ನಾಯಕ್ ಮಾಹಿತಿ ನೀಡಿದ್ದಾರೆ.
Laxmi News 24×7