Breaking News

ಸ್ಮಶಾನದಲ್ಲಿಯೇ ಸೋಂಕಿತನ ಶವ ಬಿಸಾಡಿದ ಪಾಪಿಗಳು?

Spread the love

ಚಿಕ್ಕಬಳ್ಳಾಪುರ : ಇಲ್ಲಿಯ ನಿಮ್ಮಾಕಲಕುಂಟೆ ಹತ್ತಿರದ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ನೋಡಿದ ಸ್ಥಳೀಯರು ಕೋವಿಡ್ ಸೋಂಕಿತ ಶವವನ್ನು ಮಣ್ಣು ಮಾಡದೆ ಬಿಸಾಡಿ ಹೋಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಮೃತ ದೇಹವನ್ನು ಬಿಸಾಡಿ ಮೂರ್ನಾಲ್ಕು ದಿನಗಳೇ ಕಳೆದಿವೆ. ಮೃತ ದೇಹ ಆಸ್ಪತ್ರೆಯಲ್ಲಿ ಪ್ಯಾಕ್ ಮಾಡಿದ ರೀತಿಯಲ್ಲಿದೆ. ನಾಯಿಗಳು ಮೃತದೇಹದ ಭಾಗಗಳನ್ನು ಎಳೆದು ತಿನ್ನುತ್ತಿವೆ. ಅಷ್ಟೇ ಇಲ್ಲ, ಈ ಸ್ಮಶಾನದ ಅಕ್ಕ ಪಕ್ಕದಲ್ಲಿಯೇ ಜನರು ವಾಸಿಸುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಜನ ಭಯದಲ್ಲಿದ್ದಾರೆ.

ಇದು ಕೋವಿಡ್ ಸೋಂಕಿತ ವ್ಯಕ್ತಿಯ ಶವವಾಗಿದ್ದರೆ ಸೋಂಕು ಹಬ್ಬಿದರೆ ಯಾರು ಹೊಣೆ? ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೇ, ಮತ್ತೊಂದೆಡೆ ಕುಣಿ ಅಗೆಯುವ ಸಂದರ್ಭದಲ್ಲಿ ಹೂತಿದ್ದ ಮೃತದೇಹವನ್ನು ಹೊರಗೆ ಹಾಕಿದಾರಾ? ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಇದು ಏನೇ ಆಗಿದ್ದರೂ ಮೃತ ದೇಹವನ್ನು ಮಣ್ಣು ಮಾಡಿ ಆತಂಕ ದೂರ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.


Spread the love

About Laxminews 24x7

Check Also

ದಕ್ಷಿಣ ಪಿನಾಕಿನಿ ಜಲವಿವಾದ – ನ್ಯಾಯಮಂಡಳಿ ಸ್ಥಾಪನೆಗೆ ಸುಪ್ರೀಂ ಆದೇಶ

Spread the loveನವದೆಹಲಿ: ಕರ್ನಾಟಕ  ಹಾಗೂ ತಮಿಳುನಾಡು  ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ